Home namma chikmagalur ಜಾನಪದವನ್ನು ಅರ್ಥಮಾಡಿಕೊಂಡು ಸಾಗಿದರೆ ಬದುಕು ಹಸನಾಗುವುದು
namma chikmagalurchikamagalurHomeLatest News

ಜಾನಪದವನ್ನು ಅರ್ಥಮಾಡಿಕೊಂಡು ಸಾಗಿದರೆ ಬದುಕು ಹಸನಾಗುವುದು

Share
Share

ಚಿಕ್ಕಮಗಳೂರು: ಪೂರ್ವಿಕರು ಕಟ್ಟಿಬೆಳೆಸಿದ ಜಾನಪದ ಸಮಾಜಕ್ಕೆ ತಾಯಿಯಾದರೆ, ಆ ಪರಂಪರೆಯಲ್ಲಿ ಜೀವಿಸುತ್ತಿರುವ ಮಹಿಳೆಯರು ಜಾನಪದದ ಮಕ್ಕಳಂತೆ ಎಂದು ಮಾಜಿ ಸಚಿವೆ ಮೋ ಟಮ್ಮ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಮಹಿಳಾ ಸಮ್ಮೇಳನದಲ್ಲಿ ಜಾನಪದ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದಕ್ಕೆ ತನ್ನದೆ ನಿಷ್ಟೆ, ಧರ್ಮವಿದೆ. ಸಮಾಜದ ನಾಗರೀಕರು ಅರ್ಥಮಾಡಿಕೊಂಡು ಸಾಗಿದರೆ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ಮಕ್ಕಳನ್ನು ಜಾನಪದದ ಹಿನ್ನೆಲೆಯಡಿ ಪೋಷಿಸಿದರೆ ಮೂಲ ಜಾನಪದದ ಹಿರಿತನ ಶಾಶ್ವತವಾಗಿ ಬೆಳೆಸಲು ಸಾದ್ಯ ಎಂದರು.

ಮನುಷ್ಯನ ನಡೆ, ನುಡಿ ಎಲ್ಲವೂ ಜಾನಪದ ಮೂಲಬೇರಿನಿಂದಲೇ ಬಂದಿವೆ. ಆದರೆ ತಾಂತ್ರಿಕ ಜಗ ತಿನಲ್ಲಿ ಎಲ್ಲವೂ ನಶಿಸಿ ಹೋಗುತ್ತಿವೆ. ಇಂದಿನ ಯುವಸಮೂಹ ಸಿನಿರಂಗ ಸೇರಿದಂತೆ ಅತಿಹೆಚ್ಚು ಮೊಬೈಲ್ ಹಾಗೂ ಟಿವಿಗಳಿಗೆ ಮಾರುಹೋಗಿ ಜಾನಪದದ ಮೌಲ್ಯಗಳು ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದರು.

ಹಿರಿಯರ ಮದುವೆ ದಿಬ್ಬಣಕ್ಕೆ ತೆರಳಬೇಕಾದರೆ ಒಂದು ದಿನ ಮುಂಚಿತವಾಗಿ ಕಾಲ್ನಡಿಗೆಯಲ್ಲೇ ಸಾಗ ಬೇಕಿತ್ತು. ಕಾರು, ಬೈಕ್‌ಗಳ ವ್ಯವಸ್ಥೆಯಿರಲಿಲ್ಲ. ಇದೀಗ ಕೆಲವೇ ದೂರದಲ್ಲಿರುವ ಕಲ್ಯಾಣಮಂಟಪಕ್ಕೆ ತೆರಳ ಲು ಕಾರುಗಳಿಂದಲೇ ಹೋಗಬೇಕಾದ ವ್ಯವಸ್ಥೆಯಲ್ಲಿ ನಾಗರೀಕರಲ್ಲಿದೆ ಎಂದರು.

ಮೊದಲೆಲ್ಲ ಮದುವೆಗಳ ಚಪ್ಪಾರ ಮಾವು, ಹಲಸು, ಬಸವನಹೂವಿನಿಂದ ತುಂಬಿತುಳುಕುತ್ತಿತ್ತು. ಸಂಬಂಧಿಕರು ಒಟ್ಟಾಗಿ ಚಪ್ಪರ ಕಟ್ಟುತ್ತಿದ್ದರು. ಈಗ ಚಪ್ಪಾರ ಹಾಕಿಸಲು ಯುವಕರ ತಂಡಗಳು ಆನ್‌ಲೈನ್‌ಗ ಳಲ್ಲಿ ಲಭ್ಯವಾಗುತ್ತಿದೆ. ಬಂಧುಗಳು ಮನೆಗಳಿಗೆ ಬಂದರೆ ದೊಡ್ಡ ಅಂಡೆಯಲ್ಲಿ ನೀರಿಡಲಾಗುತ್ತಿತ್ತು. ಇದೀಗ ಅದೇ ನೀರನ್ನು ಮಂಡೆಯ ಮೇಲೆ ಸುರಿದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಹಿಂದಿನ ಪೂರ್ವಿಕರು ಸತ್ಯ, ನಿಷ್ಟೆ, ಧರ್ಮಗಳನ್ನು ಕಂಡಿದ್ದರು. ಇಂದಿನ ಮನುಷ್ಯನಿಗೆ ಧರ್ಮ ಎಂದ ರೆ ಅರ್ಥವೇ ತಿಳಿಯದಾಗಿದೆ. ಸ್ವಾಮಿ, ಭೂಮಿ ಮೆಚ್ಚುವಂತೆ ನಡೆದುಕೊಳ್ಳುವುದೇ ಮನುಷ್ಯ ಧರ್ಮ. ಹಿಂದೆ ಪಂಚಾಯಿತಿ ಕಟ್ಟೆಗಳಲ್ಲಿ ತಪ್ಪೆಗಿದರೆ ಧರ್ಮದಿಂದ ಮಾತನಾಡು ಎಂಬ ನೀತಿಯಿತ್ತು. ಈಗ ಎಲ್ಲವು ಕಳೆದು ಹೋಗುತ್ತಿದೆ ಎಂದು ತಿಳಿಸಿದರು.

ಜಾನದಪ ವಿದ್ವಾಂಸ ಡಾ|| ಮಲ್ಲೇಶ್‌ಗೌಡ ಜಾನಪದದ ಶಕ್ತಿ ಎಂದರೆ ಖಡ್ಗದ ಬೆಳಕಿನ ಕಿರಣಗಳಿಂದ ತಾಯಿ ಹೊಟ್ಟೆಯಲ್ಲಿನ ಮಗು ಗೋಚರಿಸುವ ತಂತ್ರಜ್ಞಾನ ಜಾನಪದರಲ್ಲಿ ಅಡಗಿತ್ತು. ಜಾನಪದರು ಬಹ ಳಷ್ಟು ಶ್ರಮಜೀವಿಗಳು ಒಂದು ತಾಸು ಕೂಡಾ ಸುಮ್ನನೆ ಕೂರುವವರಲ್ಲ. ನಿತ್ಯ ಕಾಯಕದಲ್ಲಿ ತೊಡಗಿಸಿ ಕೊಂಡವರು ಎಂದರು.

ಇಂದಿನ ತಾಂತ್ರಿಕ ಯುಗದಲ್ಲಿ ಮಹಿಳೆಯರು ಎರಡು ಮಕ್ಕಳು, ಮನೆಗೆಲಸದಿಂದಲೇ ರೋಸಿಹೋಗಿ ದ್ದಾರೆ. ಪರಸ್ಪರ ವಿಚಾರಿಸಿದರೆ ಕೂತಲ್ಲೇ ಕೂತು ಬೇಜಾರಾಗಿದೆ. ಸಾಕಾಯ್ತು ಈ ಜೀವನ ಎಂಬ ಮಾತುಗಳಿ ವೆ. ಆದರೆ ಜಾನಪದ ಮಹಿಳೆಯರ ಕೇಳಿದರೆ ಮಹಾರಾಣಿಯಂತೆ ಬದುಕುತ್ತಿದ್ದೇನೆ. ನೀರಿಲ್ಲದ್ದರೆ ನಾಲ್ಕೈದು ಮೈಲಿ ನಡೆದು ತುಂಬಿಸುವುದು. ಹಟ್ಟಿಯನ್ನು ಸ್ವಚ್ಚಗೊಳಿಸುವ ಕಾಯಕದಿಂದಲೇ ಖುಷಿಪಡುತ್ತಿದ್ದರು ಎಂ ದರು.

ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅಜ್ಜಂಪುರ ಎಸ್.ಶೃತಿ ಮಹಿಳಾ ಸಮ್ಮೇಳನ ರಾಜ್ಯದ ಸುವ ರ್ಣಾಕ್ಷರದಲ್ಲಿ ಬರೆದಿಡಬೇಕಾದ ಶಾಸನವಾಗಿದೆ. ಬಲಿಶಾಲಿಯಾಗಿ ಸಮ್ಮೇಳನ ಆಯೋಜಿಸಿ ಲೇಖಕಿಯ ರು, ಕವಿಯತ್ರಿಯರಿಗೆ ಪ್ರೋತ್ಸಾಹಿಸಲು ಬಹಳಷ್ಟು ಶಕ್ತಿಕೊಟ್ಟು ಕೆಲಸ ಮಾಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಮಹಿಳಾ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್, ಜಿ.ಪಂ. ಮಾಜಿ ಸದಸ್ಯೆ ಜಸಂತಾ ಅನಿಲ್‌ಕುಮಾರ್, ಕಸಾಪ ಪದಾಧಿಕಾರಿಗಳಾದ ಹಳೇಬೀಡು ಬಸವರಾಜ್, ಡಾ. ಸತೀಶ್, ನೂರ್‌ಅಹಮದ್, ಮಲ್ಲಿಕಾದೇವಿ, ಟಿ.ಸಂದೀಪ್, ಹಿರೇನಲ್ಲೂರು ಶ್ರೀನಿವಾಸ್ ಉಪಸ್ಥಿತರಿದ್ದರು.

Life becomes better if you understand folklore.

Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...