Home namma chikmagalur chikamagalur ಕೇರಳದ ಶ್ರೀನಂದಾ ಮಿಸ್ಸಿಂಗ್ – ಅಪಸ್ವರಗಳ ಮಧ್ಯೆ ಹಲವು ಅನುಮಾನಗಳು ?
chikamagalurHomeLatest Newsnamma chikmagalur

ಕೇರಳದ ಶ್ರೀನಂದಾ ಮಿಸ್ಸಿಂಗ್ – ಅಪಸ್ವರಗಳ ಮಧ್ಯೆ ಹಲವು ಅನುಮಾನಗಳು ?

Share
Share

ಚಿಕ್ಕಮಗಳೂರು: ಕೇರಳದ ಪಾಲಕ್ಕಾಡ್ ನಿಂದ ಪ್ರವಾಸಕ್ಕೆ ಬಂದಿದ್ದಾ ನಲವತ್ತು ಜನರ ಮಧ್ಯೆ ಎಸ್, ಎಸ್, ಎಲ್,ಸಿ.ಓದುತ್ತಿದ್ದ ಶ್ರೀನಂದಾ ನಾಪತ್ತೆಯಾಗಿ ಮೂರು ದಿನಗಳಾದರು ಯಾವ ಕುರುಹುಗಳು ದೊರೆತಿಲ್ಲ.

ಕಳೆದ ಮೂರು ದಿನಗಳಿಂದ ಪೊಲೀಸರು ಮತ್ತು ಫಾರೆಸ್ಟ್ ಇಲಾಖೆ ಮತ್ತು ಸ್ಥಳೀಯ ನೂರಾರು ಜನ ಕಾರ್ಯಾಚರಣೆ ನಡೆಸಿದರು ಪ್ರಯೋಜನವಾಗಿಲ್ಲ ಇದರ ಜೊತೆಗೆ ಪೊಲೀಸ್ ಉನ್ನತ ಅಧಿಕಾರಿಗಳು ಮಾರ್ಗದರ್ಶನ ಮಾಡುತ್ತಿದ್ದಾರೆ.

ಕಲ್ಲು ಬಂಡೆಗಳ ಮೇಲೆ ಬಿದ್ದರೆ ಮೃತ ದೇಹದ ವಾಸನೆ ಬರುತ್ತಿತ್ತು ಇದರ ಜೊತೆಗೆ ಪ್ರಾಣಿಗಳು ಎಳೆದುಕೊಂಡು ಹೋಗುವಾಗ ಕೀರುಚಾಟ,ಕೂಗಾಟ ಸಹಜವಾಗಿ ಗೊತ್ತಾಗುತ್ತದೆ ಇದರ ಜೊತೆಗೆ ಪ್ರಾಣಿಗಳ ಹೆಜ್ಜೆ ಗುರುತು ಖಂಡಿತ ಗೊತ್ತಾಗುತಿತ್ತು ಆದರೆ ಕಳೆದ ಮೂರು ದಿನಗಳಿಂದ ಶೋಧನೆ ಮಾಡುತ್ತಿರುವ ತಂಡದವರಿಗೆ ಸಣ್ಣ ಸೂಚನೆ ದೊರೆತಿಲ್ಲ.

ಹೀಗಾಗಿ ತನಿಖೆ ಜಾಡು ಬದಲಾಯಿಸ ಬೇಕಾಗಿದೆ.ನಾಪತ್ತೆಯಾದ ಬಾಲಕಿಯ ತಾಯಿ ಹೇಳಿರುವ ಹೇಳಿಕೆ ತನಿಖೆಗೆ ಸಹಕಾರವಾಗಬಹುದು.ಮಗಳನ್ನು ಅಮಲು ಪದಾರ್ಥ ನೀಡಿ ಅಪಹರಣ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅಪಹರಣ ಮಾಡುವ ಸಂದರ್ಭದಲ್ಲಿ ಕೂಗಾಟ ಸಹಜವಾಗಿಯೇ ಇರುತ್ತದೆ.

ಶ್ರೀನಂದಾಗೆ ಪರಿಚಯದವರು ಬಂದು ಕರೆದುಕೊಂಡು ಹೋಗುವ ಸಾಧ್ಯತೆ ಕೂಡ ತಳ್ಳಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಪೋಷಕರು ಮತ್ತು ಶ್ರೀನಂದಾ ಸ್ನೇಹಿತರಿಂದ ಪಡೆದರೆ ಪತ್ತೆ ಕಾರ್ಯಕ್ಕೆ ಅನುಕೂಲವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.ಕಾಡು,ಬೆಟ್ಟ ಅಲೆಯುವ ಬದಲಿಗೆ ತನಿಖೆ ಜಾಡು ಬದಲಾಯಿಸಿದರೆ ಶೀಘ್ರ ಪತ್ತೆಯಾಗಬಹುದು.

Kerala’s Srinanda Missing – Many Doubts Amidst Discord?

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....