Home namma chikmagalur chikamagalur ಮಾನವೀಯ ಮೌಲ್ಯಗಳತ್ತ ಮುಖ ಮಾಡುವಂತೆ ಚಿಂತನೆಗೆ ಹಚ್ಚುವುದು ಅಗತ್ಯ
chikamagalurHomeLatest Newsnamma chikmagalur

ಮಾನವೀಯ ಮೌಲ್ಯಗಳತ್ತ ಮುಖ ಮಾಡುವಂತೆ ಚಿಂತನೆಗೆ ಹಚ್ಚುವುದು ಅಗತ್ಯ

Share
Share

ಚಿಕ್ಕಮಗಳೂರು:  ಅನಂತಕಾಲ ಮಾದರಿಯಾಗಿ ನಿಲ್ಲಬಲ್ಲ ಮಾನವೀಯ ಮೌಲ್ಯಗಳ ನಡುವೆ ಇಂದಿನ ವಿದ್ಯಾರ್ಥಿ ಯುವಜನರನ್ನು ನಿಲ್ಲಿಸಬೇಕಾಗಿರುವ ಬಹು ಮುಖ್ಯ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ, ಶಾಲಾ ಕಾಲೇಜುಗಳು ವಿದ್ಯಾರ್ಥಿಗಳನ್ನು ಕೇವಲ ಅಂಕಗಳ ಹಿಂದೆ ಓಡಿಸದೆ ಮಾನವೀಯ ಮೌಲ್ಯಗಳತ್ತ ಮುಖ ಮಾಡುವಂತೆ ಚಿಂತನೆಗೆ ಹಚ್ಚುವುದು ಈ ವರ್ತಮಾನದ ತುರ್ತಾಗಿದೆ ಎಂದು ಬರಹಗಾರ ಡಿ ಎಂ ಮಂಜುನಾಥಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಸಮೀಪ ಇರುವ ನರಗನಹಳ್ಳಿ ಕಿರಿಯ ಪ್ರಾರ್ಥಮಿಕ ಪಾಠಶಾಲಾ ಆವರಣದಲ್ಲಿ ಚಿಕ್ಕಮಗಳೂರಿನ ಐ ಡಿ ಎಸ್ ಜಿ ಸರ್ಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾನವೀಯ ಮೌಲ್ಯಗಳನ್ನು ಕುರಿತು ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಮಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಕೊಳ್ಳಬೇಕಾದ ಹಲವು ಸಂಗತಿಗಳನ್ನು ಕುರಿತು ಮಾನವೀಯ ಬದುಕಿನ ಮೇಲೆ ಬೆಳಕು ಚೆಲ್ಲಿ ಮಾತನಾಡಿದರು.

ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗುವುದಕ್ಕೆ ಹುಟ್ಟಿದ್ದೇವೆ, ಮನುಷ್ಯರಾಗುವುದು ಎಂದರೆ ಅದೊಂದು ಸುದೀರ್ಘವಾದ ಪ್ರಕ್ರಿಯೆ ಮತ್ತು ಸಾಧನೆ, ಭಾರತಂಥಹ ದೇಶದಲ್ಲಿ ವಿದ್ಯಾರ್ಥಿ ಯುವಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ, ಇವರೆಲ್ಲರೂ ಭವಿಷ್ಯದ ಭಾರತವನ್ನು ಸದೃಢವಾಗಿ ಕಟ್ಟಬೇಕಾಗಿದೆ, ಸದೃಢ ಸಮಾಜ ನಿರ್ಮಾಣ ಮಾಡಬೇಕಾದರೆ ಈ ನೆಲದ ಮಣ್ಣಿನ ಮಹತ್ವವನ್ನು ಅರಿಯಬೇಕು, ಭಾರತ ಎಂದರೆ ಏಕವಚನವಲ್ಲ, ಅದು ಬಹುತ್ವದಿಂದ ಕೂಡಿದ ಬಹುವಚನವಾಗಿದೆ, ಈ ನೆಲದ ಅಂತಿಮ ಸತ್ಯ ಮಣ್ಣೆ ಆಗಿದೆ, ಚಕ್ರವರ್ತಿ ಆಗಿರಲಿ ಅಥವಾ ಈ ನೆಲದ ಕಟ್ಟಕಡೆಯ ಸಾಮಾನ್ಯ ‘ಮನುಷ್ಯನೇ ಆಗಿರಲಿ, ಸತ್ತರೆ ಈ ಇಬ್ಬರು ಒಂದೇ ರೀತಿ ಮಣ್ಣಲ್ಲಿ ಮಣ್ಣಾಗುವರು, ಆತ ಚಕ್ರವರ್ತಿ ಈತ ಸಾಮಾನ್ಯರಲ್ಲಿ ಸಾಮಾನ್ಯನು ಎಂದು ಮಣ್ಣು ತರತಮವನ್ನು ಮಾಡದೆ ಇಬ್ಬರನ್ನು ಒಂದೇ ರೀತಿ ಮಣ್ಣಲ್ಲಿ ಮಣ್ಣಾಗಿಸುತ್ತದೆ, ಇದೇ ಬದುಕಿನ ಅಂತಿಮ ಸತ್ಯ ಎಂಬುದನ್ನು ವಿದ್ಯಾರ್ಥಿಗಳು ಮನಗಂಡು ಜಾತಿ ಮತ ಧರ್ಮಗಳನ್ನು ಮೀರಿ ಮನುಷ್ಯತ್ವದ ಹಾದಿಯಲ್ಲಿ ಸಾಗಬೇಕು ಎಂದು ಕರೆ ಕೊಟ್ಟರು.

ಐ ಡಿ ಎಸ್ ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಮಲ್ಪಶ್ರೀ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ರಾಷ್ಟ್ರೀಯ ಸೇವಾ ಯೋಜನೆಯ ಇಂತಹ ಶಿಬಿರಗಳು ಔಪಚಾರಿಕ ಶಿಕ್ಷಣದೊಟ್ಟಿಗೆ ಅನೌಪಚಾರಿಕ ಶಿಕ್ಷಣವನ್ನು ಕಲಿಸಿಕೊಡುತ್ತಾ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು ಸಂಯಮವನ್ನು ಕಲಿಸುತ್ತವೆ, ಕಲಿಕಾ ಸಮಯದಲ್ಲಿ ಮೈಮರೆಯದೆ ಮೈ ಎಲ್ಲವನ್ನು ಕಣ್ಣಾಗಿ ಮಾಡಿಕೊಂಡು ಈ ಶಿಬಿರದ ಸಾರ್ಥಕತೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕರಾದ ಗಿರೀಶ್ ಕುಮಾರ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾನವೀಯ ನೆಲಗಟ್ಟಿನಲ್ಲಿ ಜಾತಿ ಮತ ಪಂಥಗಳನ್ನು ಮೀರಿ ಸಮೃದ್ಧ ಬದುಕನ್ನು ಕಟ್ಟಿಕೊಳ್ಳಬೇಕಾದರೆ ನಾವು ಹಲವಷ್ಟನ್ನು ಮೀರಬೇಕಾಗಿದೆ, ಕೆಲವೊಂದಷ್ಟನ್ನು ಮುರಿದು ಕಟ್ಟಬೇಕಾಗಿದೆ, ಇಂತಹ ಪ್ರಕ್ರಿಯೆಗೆ ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳು ಪೂರಕವಾಗಿದೆ ಎಂದರು.

ಸಮಾರಂಭದಲ್ಲಿ ಐ ಡಿ ಎಸ್ ಜಿ ಪದವಿ ಕಾಲೇಜಿನ ಎನ್ಎಸ್ಎಸ್ ೨ನೇ ಘಟಕದ ಸಂಯೋಜಕ ಕಾಂತರಾಜು, ಸಹ ಸಂಯೋಜಕ ಲಿಂಗರಾಜು,ವಾಣಿಜ್ಯಶಾಸ್ತ್ರ ಉಪನ್ಯಾಸಕಿ ನಿವೇದಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚೇತನ್ ಸ್ವಾಗತಿಸಿ, ಪೂಜಾ ವಂದಿಸಿ, ಟಿ ಎಸ್ ಚೇತನ್ ಕಾರ್ಯಕ್ರಮವನ್ನು ನಿರೂಪಿಸಿದರು.

It is necessary to encourage thinking towards human values.

Share

Leave a comment

Leave a Reply

Your email address will not be published. Required fields are marked *

Don't Miss

ಫೆ.೨೮-ಮಾ.೧೭ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ ೨೮ ರಿಂದ ಮಾರ್ಚ್ ೧೭ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ, ಪಾರದರ್ಶಕವಾಗಿ ನಡೆಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ನಾರಾಯಣ...

ಕಾಡುಕೋಣ ದಾಳಿಗೆ ಕೃಷಿಕನಿಗೆ ಗಾಯ

ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಜನತೆಗೆ ಈಗ ಕಾಡುಕೋಣಗಳ ಉಪಟಳ ಹೊಸ ಆತಂಕ ತಂದೊಡ್ಡಿದೆ. ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯ ಮುಂಡೋಳು ಗ್ರಾಮದಲ್ಲಿ ಇಂದು ಮುಂಜಾನೆ ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿದೆ....

Related Articles

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಚೆಕ್ ಬೌನ್ಸ್ ಕೇಸ್ ನಲ್ಲಿ ಶಿಕ್ಷೆ.?

ಮೂಡಿಗೆರೆ: ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಚೆಕ್ ಬೌನ್ಸ್ ದೂರಿನಲ್ಲಿ ಬೆಂಗಳೂರಿನ ಕೋರ್ಟ್ ನಲ್ಲಿ ಶಿಕ್ಷೆ...

ವಿವಿಧ ಬೇಡಿಕೆಗಳ ಈಡೇರಿಕೆಗೆ ಅನಿರ್ಧಿಷ್ಟ ಮುಷ್ಕರ

ಚಿಕ್ಕಮಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ...

ದಲಿತರಿಗೆ ರಾಜ್ಯ ಬಜೆಟ್‌ನಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ದಸಂಸ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಮುದಾಯಕ್ಕೆ ರಾಜ್ಯ ಬಜೆಟ್‌ನಲ್ಲಿ ಅನ್ಯಾಯಗವಾಗದೇ ಶೇ.೨೪.೧ ರಷ್ಟು ಜನಸಂಖ್ಯಾನುಸಾರವಾಗಿ ತಕ್ಕ ನ್ಯಾಯ ಒದಗಿಸಿಕೊಡಬೇಕು...

ಬಾಬಾಬುಡನ್ ದರ್ಗಾದಲ್ಲಿ ಸಂದಲ್ ಉರುಸ್‌ಗೆ ಚಾಲನೆ

ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾಡಳಿತದ ವತಿಯಿಂದ...