Home namma chikmagalur chikamagalur ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?
chikamagalurHomeLatest Newsnamma chikmagalur

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

Share
Share

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು ಬಣದ ನಾಯಕತ್ವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇದೆ,ಮತ್ತೊಂದಿಷ್ಟು ಜನ ತಟಸ್ಥವಾಗಿದ್ದಾರೆ.ಇನ್ನೂ ಸ್ವಲ್ಪ ಜನ ಮೂರು ಕೊಟ್ಟರೆ ಮಾವನ ಕಡೆ,ಆರು ಕೊಟ್ಟರೆ ಆತ್ತೆ ಕಡೆ ಎನ್ನುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರದಲ್ಲಿ ಐದು ಜನರು ಕಾಂಗ್ರೆಸ್ ಶಾಸಕರಿದ್ದಾರೆ. ಮನೆಯೊಂದು ಮೂರು ಬಾಗಿಲು ಎನ್ನುವ ದುಸ್ಥಿತಿಯಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳುತ್ತಿದ್ದಾರೆ.

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತೀರ ಇಕ್ಕಟ್ಟಿಗೆ ಸಿಲುಕಿದ್ದಾರೆ.ಒಮ್ಮೆ ಡಿ.ಕೆ.ಗೆ ಜೈ ಅಂದರೆ ಮತ್ತೊಮ್ಮೆ ಸಿದ್ದರಾಮಯ್ಯನವರು ಬೇಕು ಎನ್ನುವ ಖಾಯಿಲೆ ಬಂದಿದೆ.
ಡಿ.ಕೆ.ಸೀಟು ಕೊಟ್ಟು ನೋಟು ಕೊಟ್ಟರೆ ಸಿದ್ದರಾಮಯ್ಯನವರ ಅಹಿಂದ ಮತದಾರರು ಗೆಲ್ಲಿಸಿದ್ದಾರೆ.

ಹೀಗಾಗಿ ಎರಡು ಕಡೆ ಸಲ್ಲಲು ಹೋಗಿ ನಗೆಪಾಟಲಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಡಿ.ಕೆ.ಕೈ ಬಿಟ್ಟರೆ ನೆಕ್ಟ್ ತರಕಾರಿ ಹರೀಶ್,ಸಿದ್ದರಾಮಯ್ಯನವರ ಕಡೆಯವರು ಕೈ ಬಿಟ್ಟರೆ ಸೋಲು ಖಚಿತ. ಇದರಿಂದಾಗಿ ತಮ್ಮಯ್ಯ ಎಲ್ಲಾ ಕಡೆ ಸಲ್ಲಲು ಹೋಗಿ ಏಡವಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ಹಿಂಬಾಲಕರ ವಿಶ್ಲೇಷಣೆ.

ಮೂಡಿಗೆರೆ ಶಾಸಕಿ ನಯನ ಖುಲ್ಲಾ,ಖುಲ್ಲಾ.ಮೊದಲಿಂದ ಡಿ.ಕೆ.ಶಿವಕುಮಾರ್ ಪರಮ ಹಿಂಬಾಲಕರು. ಕ್ಷೇತ್ರದಲ್ಲಿ ತನ್ನದೇ ಸ್ಟೈಲ್ ಉಳಿಸಿಕೊಂಡು ಕಾಂಗ್ರೆಸ್ ನ ಬಹುತೇಕ ಮುಖಂಡರ ವಿರೋಧ ಕಟ್ಟಿಕೊಂಡು ವಿನಯ್ ಗುರೂಜಿ ಆರ್ಶೀವಾದ ಸಾಕು ಎಂದು ಬಹಿರಂಗವಾಗಿ ಹೇಳುವ ನಯನ ಕೇವಲ ಏಳು ನೂರು ಚಿಲ್ಲರೆ ಮತಗಳಲ್ಲಿ ಗೆಲ್ಲಲು ಅಹಿಂದ ಮತಗಳು ಅದರಲ್ಲೂ ಅಂಬಳೆ ಹೋಬಳಿಯ ಅಹಿಂದ ಮತದಾರರು ಮೂರು ಸಾವಿರ ಲೀಡ್ ಕೊಟ್ಟದ್ದನ್ನು ಮರೆತು ಡಿ.ಕೆ.,ಡಿ.ಕೆ ಎಂಬ ಜಪದಲ್ಲಿ ಲೀನವಾಗಿ ಹೋದಂತೆ ಮುಂದಿನ ಚುನಾವಣೆಯಲ್ಲಿ ಕಳೆದು ಹೋಗುವುದು ಖಚಿತ ಎಂದು ಅವರ ಗೆಲುವಿಗೆ ದುಡಿದವರ ಅನಿಸಿಕೆ.

ಕಡೂರು ಶಾಸಕ ಆನಂದ್ ಪಕ್ಕಪಕ್ಕಾ ಯಾರ ಟೀಮ್ ನಲ್ಲಿ ಇದ್ದಾರೆ ಎಂಬ ಸಂಶಯವಿದೆ.ಮತದಾರರಿಗೊಸ್ಕರ ಸಿದ್ದರಾಮಯ್ಯನವರ ಗುಂಪಿನಲ್ಲಿ ಕಾಣಿಸಿದಂತೆ ಕಂಡರೆ ಒರಿಜಿನಲ್ ಡಿ.ಕೆ.ಬ್ರ್ಯಾಂಡ್ ಎನ್ನುತ್ತಾರೆ .ಇವರು ಕ್ಷೇತ್ರದಲ್ಲಿ ಇವರಿಗಿಂತ ಇವರ ಪಿ.ಎ.ಮಂಜುನಾಥ್ ನ ಆಡಳಿತ ಹೆಚ್ಚು. ಕೊಡುವುದು ತೆಗೆದುಕೊಳ್ಳುವ ವ್ಯವಹಾರದಲ್ಲಿ ಇದ್ದರೆ ಇವರ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಮೊದಲ ಆದ್ಯತೆ ಜೊತೆಗೆ ಇವರ ವಿರೋಧಿಗಳ ಹಣಿಯಲು ಎಲ್ಲಾ ರೀತಿಯ ಮಾಸ್ಟರ್ ಪ್ಲಾನ್ ಬ್ಲೂ ಪ್ರಿಂಟ್ ರೆಡಿಯಿರುವಂತೆ ರಾಜಕೀಯ ವಾಗಿ ಬ್ಲೂ ಪ್ರಿಂಟ್ ತಯಾರಿಸಿಲ್ಲಾ ಆದರೂ ಡಿ.ಕೆ.ಲೆಕ್ಕದಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಮಾತನಾಡುತ್ತಿದ್ದಾರೆ.

ತರೀಕೆರೆ ಕ್ಷೇತ್ರದಲ್ಲಿ ಶ್ರೀನಿವಾಸ್ ಮತ್ತೊಂದು ತಿರುಪತಿ ತಿಮ್ಮಪ್ಪನ ಹುಂಡಿ ತೆರೆದುಕೊಂಡಿದ್ದು ಹುಂಡಿ ತುಂಬಿಸಲು ಕುಟುಂಬಸ್ಥರು ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ .ರಾಜಕೀಯವಾಗಿ ಸಿದ್ದರಾಮಯ್ಯನವರ ಪರಮ ಶಿಷ್ಯ ಎನ್ನಿಸಿ ಕೊಂಡು ಡಿ.ಕೆ.ಆವಾಜ್ ಗೆ ತತ್ತರಿಸುತ್ತಿದ್ದಾರೆ ಡಿ.ಕೆ.ಮುಖ್ಯ ಮಂತ್ರಿ ಆದರೆ ಶ್ರೀನಿವಾಸ್ ಪರಿಸ್ಥಿತಿ ಕಷ್ಟ .

ಅದಕ್ಕೆ ಬ್ಯಾಲೆನ್ಸ್ ಮಾಡಲೂ ಹೋಗಿ ಸಿಕ್ಕಿ ಕೊಂಡು ಪೇಚಾಡಿದ್ದು ಉಂಟು ಹುಂಡಿ ತುಂಬಿಸುವ ಸಲವಾಗಿ ಡಿಕೆ.ಡಿಕೆ ಎಂದು ಹೇಳಿದರು ಆಶ್ಚರ್ಯವಿಲ್ಲ ರಚನಾತ್ಮಕ ಕೆಲಸಗಳ ಬದಲಿಗೆ ಕ್ಷೇತ್ರದಲ್ಲಿ ಮುಖಂಡರನ್ನು ಬಿಟ್ಟು ಚುನಾವಣೆ ಮಾಡ ಬೇಕೆಂಬ ಮಹದಾಸೆಗೆ ಮತದಾರರು ತಿರುಪತಿ ಯಾತ್ರೆಗೆ ಕಳಿಸ ಬಹುದು. ಡಿ.ಕೆ.ಸಿ.ಎಂ ಆದರೆ ಶ್ರೀನಿವಾಸ್ ಕತೆ ಕಷ್ಟ.

ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರು ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿರುವುದು ಮೂರನೇ ಬಾರಿ ಗೆಲ್ಲ ಬೇಕು ಎಂಬ ಹಂಬಲದಿಂದ ಡಿ.ಕೆ.ಶಿವಕುಮಾರ್ ಪಕ್ಕ ಬೆಂಬಲಿಗರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇವರಿಗೆ ಆನೆ ಕಾಟಕ್ಕಿಂತ ಬಿಜೆಪಿಯವರ ಕಾಟ ಹೆಚ್ಚಾಗಿದೆ.ಪೊಗರ್ ದಸ್ತು ಕ್ರೆಡಿಲ್ ಎಂಬ ಬೋರ್ಡ್ ಸಿಕ್ಕಿದೆ.ಕಿವಿ,ಕಣ್ಣು ಮೂಗು ಇಲ್ಲದ ಜಿಲ್ಲಾ ಉಸ್ತುವಾರಿ ಸಚಿವರಾದ ಜಾರ್ಜ್ ರ ಆಪ್ತ ರಾಗಿರುವುದು ಹೈಕಮಾಂಡ್ ಇವರಿಗೆ ಮಣಿ ಹಾಕುವ ನಿರೀಕ್ಷೆಯಲ್ಲಿ ಇದ್ದಾರೆ.

ಡಿ.ಕೆ.ಸಿ.ಎಂ ಆದರೆ ರಾಜೇಗೌಡರು ಮತ್ತಷ್ಟು ರಾಜಕೀಯ ಪ್ರಬಲರಾಗುತ್ತಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ರಾಜೇಗೌಡ ಮತ್ತು ನಯನ ಡಿ.ಕೆ ಪರವಾದರೆ ಶ್ರೀನಿವಾಸ್ ಮಾತ್ರ ಸಿದ್ದರಾಮಯ್ಯನವರ ಪರ .ತಮ್ಮಯ್ಯ ಎಲ್ಲಿ ಸಲ್ಲ ಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಆನಂದ್ ಎಲ್ಲಿಯಾದರೂ ಸರಿ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ನಲ್ಲಿ ಪಿಸುಗುಡುತ್ತಿದ್ದಾರೆ.

Nayana Out – H.D. Thammaiah in trouble?

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ...

2ಬಿ ಮೀಸಲಾತಿ ಮರುಸ್ಥಾಪನೆಗೆ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಕೂಡಲೇ...