Home namma chikmagalur chikamagalur ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ
chikamagalurCrime NewsHomeLatest Newsnamma chikmagalur

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣ ಕಳ್ಳತನ

Share
Share

ಚಿಕ್ಕಮಗಳೂರು: ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪವಿರುವ ಬಸ್ ನಿಲ್ದಾಣದಿಂದ ಸಖರಾಯಪಟ್ಟಣಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗಿನಿಂದ ಸುಮಾರು 10,64,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ದೂರುದಾರೆ ಮಹಿಳೆಯು ಫೆ. 25ರಂದು ಮಧ್ಯಾಹ್ನ 2:45 ರಿಂದ 3:00 ಗಂಟೆಯ ಸುಮಾರಿಗೆ ಬಸ್ ಹತ್ತಿದಾಗ ತಮ್ಮ ಬ್ಯಾಗಿನಲ್ಲಿದ್ದ ಒಡವೆಗಳನ್ನು ಖಚಿತಪಡಿಸಿಕೊಂಡು, ಜಿಪ್ ಹಾಕಿ ಬ್ಯಾಗನ್ನು ತೊಡೆಯ ಮೇಲೆ ಇಟ್ಟುಕೊಂಡು ಪ್ರಯಾಣಿಸಿದ್ದರು.

ಸಖರಾಯಪಟ್ಟಣದಲ್ಲಿ ಬಸ್ ಇಳಿದು ಗಮನಿಸಿದಾಗ ಬ್ಯಾಗಿನ ಜಿಪ್ ತೆರೆದಿರುವುದು ಕಂಡುಬಂದಿದೆ. ಆತಂಕಗೊಂಡ ಮಹಿಳೆಯು ಬಸ್ ನಿಲ್ದಾಣದಲ್ಲಿ ಪರಿಶೀಲಿಸದೆ, ನೇರವಾಗಿ ತಮ್ಮ ಸೊಸೆಯ ಅಕ್ಕನ ಮನೆಗೆ ತೆರಳಿ ಬ್ಯಾಗ್‌ ಪರೀಕ್ಷಿಸಿದಾಗ ಒಳಗೆ ಇಟ್ಟಿದ್ದ ಒಡವೆ ಬಾಕ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಸುಮಾರು 40 ಗ್ರಾಂ ತೂಕದ ಎರಡು ಬಳೆಗಳು (໑໐໙໙ 230 5,32,000 ) ಸುಮಾರು 35 ಗ್ರಾಂ ತೂಕದ ಒಂದು ನೆಕ್ಸಸ್ (ಅಂದಾಜು ಬೆಲೆ 4,65,500 ರೂ.) 5 ಗ್ರಾಂ ತೂಕದ ಒಂದು ಜೊತೆ ಓಲೆಗಳು (ಅಂದಾಜು ಬೆಲೆ 66,500 ರೂ.) ಒಟ್ಟು 80 ಗ್ರಾಂ ತೂಕದ, 10,64,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪತ್ತೆಹಚ್ಚಿಕೊಡುವಂತೆ ಮಹಿಳೆಯು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Woman’s jewellery stolen while travelling in KSRTC bus

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...