Home Latest News ಪೊಲೀಸ್ ಲೇಔಟ್‌ನಲ್ಲಿ 50 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳುವು
Latest NewschikamagalurCrime NewsHomenamma chikmagalur

ಪೊಲೀಸ್ ಲೇಔಟ್‌ನಲ್ಲಿ 50 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳುವು

Share
Share

ಚಿಕ್ಕಮಗಳೂರು: ನಗರದ ಪೊಲೀಸ್ ಲೇಔಟ್‌ನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಸುಮಾರು 50 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳುವು ಆಗಿರುವುದು ಬೆಳಕಿಗೆ ಬಂದಿದೆ.

ಪೊಲೀಸ್ ಲೇಔಟ್ ನಿವಾಸಿ ಪುಪ್ಪೇಗೌಡ ಅವರು ಕುಟುಂಬದ ಸಮೇತರಾಗಿ ಬೇರೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಯಲ್ಲಿ ಕಳುವುವಾಗಿದ್ದು, ಸುಮಾರು 490 ಗ್ರಾಂ ಚಿನ್ನಾಭರಣ ಕಳುವು ಮಾಡಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸರು ಈ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಅವರ ಬಡಾವಣೆಗೆ ಕಳ್ಳರು ಬಂದು ಕಳುವು ಮಾಡಿರುವುದು ಇಲಾಖೆ ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿದೆ.

ಸಾರ್ವಜನಿಕರೇ ಹುಷಾರ್ ನಗರದ ತುಳಸಿ ಲೇಔಟ್, ಪೊಲೀಸ್ ಲೇಔಟ್, ಡಾ. ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ ಆಗಾಗ ಮನೆಗಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಅವುಗಳು ಈಗಲೂ ಮುಂದುವರೆದಿವೆ ಎಂಬುದಕ್ಕೆ ಪೊಲೀಸ್ ಲೇಔಟ್‌ನಲ್ಲಿ ಜೂ. ೧೯ ರಂದು ರಾತ್ರಿ ನಡೆದಿರುವ ಘಟನೆಯೇ ಸಾಕ್ಷಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪುಪ್ಪೇಗೌಡರ ಮನೆಯಲ್ಲಿ ಕಳುವು ಆಗಿ ಎರಡೇ ದಿನಕ್ಕೆ ಅಂದರೆ ಜೂನ್ ೨೧ ರ ರಾತ್ರಿ ಆರು ಮಂದಿಯ ಗ್ಯಾಂಗ್ ರಾತ್ರಿ ವೇಳೆಯಲ್ಲಿ ಓಡಾಡುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಗರದ ಬೈಪಾಸ್ ರಸ್ತೆಯಲ್ಲಿರುವ ಎಐಟಿ ಲೇಡಿಸ್ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ೬ ಮಂದಿ ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಬಾಗಿಲು, ಗೇಟ್ ಮುರಿಯುವ ಕಬ್ಬಿಣದ ವಸ್ತುಗಳು ಹಾಗೂ ಬ್ಯಾಗ್ ಸಹಿತ ಓಡಾಡುತ್ತಿರುವುದು ಕಂಡು ಬಂದಿದೆ.

ಅಂದರೆ ಮನೆಗಳ್ಳತನದ ನಂತರವೂ ಕಳ್ಳರ ಗ್ಯಾಂಗ್ ಅದೇ ಬಡಾವಣೆಯ ಸಮೀಪದಲ್ಲಿ ಮತ್ತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಬಡಾವಣೆಯಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸರು ಬೀಟ್‌ಗೆ ಬರುತ್ತಿಲ್ಲ. ಹಾಗಾಗಿ ಕಳ್ಳರಿಗೆ ಭಯ ಎಂಬುದು ಹೊರಟು ಹೋಗಿದೆ. ಮನೆಗಳಿಗೆ ಹಾಗೂ ಈ ಭಾಗದ ನಿವಾಸಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

Gold jewellery worth Rs 50 lakh stolen in Police Layout

Share

Leave a comment

Leave a Reply

Your email address will not be published. Required fields are marked *

Don't Miss

ಗುಡುಗು-ಸಿಡಿಲಿನ ಭಾರಿ ಮಳೆಗೆ ಇಡೀ ನಗರ ತಲ್ಲಣ

ಚಿಕ್ಕಮಗಳೂರು: ಶುಕ್ರವಾರ ಮಧ್ಯರಾತ್ರಿ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸುರಿದ ಭಾರಿ ಮಳೆಗೆ ಇಡೀ ನಗರ ತಲ್ಲಣಗೊಂಡಿದೆ. ಮರಗಳು ವಿದ್ಯುತ್ ಕಂಬಗಳ ಸಹಿತ ರಸ್ತೆಗೆ ಉರಳಿದವು. ಹಲವು ಕಟ್ಟಡಗಳ ಚಾವಣಿ ಹಾರಿ ಹೋಗಿವೆ. ಮಧ್ಯರಾತ್ರಿ...

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನೇಮಕ ನಿಯಮ ಬಾಹಿರ

ಚಿಕ್ಕಮಗಳೂರು: ಇತ್ತೀಚೆಗೆ ಡಿ. ರಾಮೇಗೌಡರವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷನಾಗಿ ನೇಮಕ ಮಾಡಿರುವುದು ನಿಯಮ ಬಾಹಿರವಾಗಿದ್ದು, ಈ ಆಯ್ಕೆ ಅಮಾನ್ಯ ಎಂದು ಜಿಲ್ಲಾಧ್ಯಕ್ಷ ಮಹೇಶ್ ಹೇಳಿದರು....

Related Articles

‘ನಮ್ಮೂರಿಗೆ ರಸ್ತೆ ಅಭಿವೃದ್ಧಿ ಬೇಡ’ ಎಂದು ಗ್ರಾಮಸ್ಥರು….?

ಚಿಕ್ಕಮಗಳೂರು: ಸಾಮಾನ್ಯವಾಗಿ ಗ್ರಾಮಗಳಿಗೆ ರಸ್ತೆ ಬೇಕು, ಕುಡಿಯುವ ನೀರು ಬೇಕು, ವಿದ್ಯುತ್ ಬೇಕು ಎಂದು ಜನ...

ಜಿಲ್ಲೆಯಲ್ಲಿ ಅಧಿಕಗೊಂಡ ನಾಪತ್ತೆ ಪ್ರಕರಣಗಳು

ಚಿಕ್ಕಮಗಳೂರು: ಬೀರೂರು ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು,...

ಮಲೆನಾಡಿನಲ್ಲಿ ಮತ್ತೆ ಅಪಾಯಕಾರಿ ಕಾಲುಸಂಕಗಳನ್ನೇ ಆಶ್ರಯ ಪಡೆದ ಗ್ರಾಮಸ್ಥರು

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಸ್ತಬ್ಧವಾಗುತ್ತಿದ್ದಂತೆ ಸರ್ಕಾರ ಅಲ್ಲಿನ ಕುಗ್ರಾಮಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ...

ಜೆಜೆಎಂನಲ್ಲಿ ನಕಲಿ ಛಾಪಾ ಕಾಗದ ಬಳಸಿ ಸರ್ಕಾರಕ್ಕೆ ವಂಚನೆ

ಶೃಂಗೇರಿ:  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್...