Home namma chikmagalur chikamagalur ಅರಣ್ಯ ಇಲಾಖೆ ವತಿಯಿಂದ ಬೆಂಕಿ ನಂದಿಸುವ ಅಣುಕು ಪ್ರದರ್ಶನ
chikamagalurHomeLatest Newsnamma chikmagalur

ಅರಣ್ಯ ಇಲಾಖೆ ವತಿಯಿಂದ ಬೆಂಕಿ ನಂದಿಸುವ ಅಣುಕು ಪ್ರದರ್ಶನ

Share
Share
ಕೊಟ್ಟಿಗೆಹಾರ: ಸಮೀಪದ ತರುವೆ ಏಕಲವ್ಯ ವಸತಿ ಶಾಲೆಯಲ್ಲಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಕಲಾವಿದ ರಮೇಶ್ ಬಂಗಾರ್ ತಂಡದ ವತಿಯಿಂದ ಸಂಕೇತ್ ಯುವ ಸಂಘವು ಪ್ರಾಣಿ, ಪರಿಸರ ಸಂರಕ್ಷಣೆ,ಬೆಂಕಿ ಅನಾಹುತದ ಮಾಹಿತಿ ಹಾಗೂ ಬೆಂಕಿ ನಂದಿಸುವ ಅಣುಕು ಪ್ರದರ್ಶನ ನಡೆಯಿತು.
ಉಪ ವಲಯ ಅರಣ್ಯಾಧಿಕಾರಿ ಬಸವರಾಜ್ ಮಾತನಾಡಿ’ ಬೆಂಕಿ ಮಾನವ ಜೀವಕ್ಕೆ ಅವಶ್ಯಕ.ಅಜಾಗರೂಕತೆ ಮಾಡಿದರೆ ಅಪಾಯಕಾರಿ.ಶಾಲೆಗಳಲ್ಲಿ ಬೆಂಕಿ ನಂದಿಸುವ ಸಾಧನ ಇಟ್ಟುಕೊಳ್ಳುವುದು ಉತ್ತಮ ಬೆಳವಣಿಗೆ.ಅಗ್ನಿ ಶಾಮಕ ದಳ ಹಾಗೂ ಅರಣ್ಯ ಇಲಾಖೆ 24ಗಂಟೆಯೂ ಅನಾಹುತದ ಸಮಯದಲ್ಲಿ ಸೇವೆ ನೀಡುತ್ತಾ ಬಂದಿದ್ದಾರೆ.ತುರ್ತು ಸೇವೆ,ಅಗ್ನಿ ದುರಂತ ತಡೆಯಲು ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಸುಖಾಸುಮ್ಮನೇ ಕಾಡಿಗೆ ಬೆಂಕಿ ಕೊಟ್ಟು ವಿಕೃತಿ ಮೆರೆದು ಕಾಡು ನಾಶ ಮಾಡುವುದು ಅಪರಾಧ ಕೃತ್ಯ.ಪರಿಸರ ಉಳಿಸುವುದು ಅರಣ್ಯ ಇಲಾಖೆ ಮಾತ್ರವಲ್ಲದೇ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ’ಎಂದರು.
ಅಣುಕು ಪ್ರದರ್ಶನ ನೀಡುವ ತಂಡದ ಮುಖ್ಯಸ್ಥೆ ರೂಪ ಬಂಗಾರ್ ಮಾತನಾಡಿ’ ನಮ್ಮ ಕಲಾವಿದರ ತಂಡ ಪ್ರತಿ ವರ್ಷವೂ ಬೆಂಕಿ ಅನಾಹುತ ತಪ್ಪಿಸುವುದು ಹೇಗೆ ಎಂಬುದರ ಬಗ್ಗೆ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುತ್ತಾ ಬಂದಿದೆ.ಪರಿಸರ ಸ್ವಚ್ಚತೆ ಜನರಲ್ಲಿ ಮೂಡಿಸಲು ನಾಟಕದ ರೂಪದಲ್ಲಿ ತಂಡದವರು ಸರಳವಾಗಿ ಕಾಡು ಪರಿಸರ ಹೇಗೆ ಉಳಿಸಬೇಕು.ಪ್ರಾಣಿ,ಪಕ್ಷಿಗಳನ್ನು ಕೊಲ್ಲದೇ ಅವುಗಳನ್ನು ಪ್ರೀತಿಸಿ ಪ್ರಾಣಿ ಪ್ರೀಯರಾಗಬೇಕು. ಪ್ರಾಣಿಗಳನ್ನು  ರಕ್ಷಿಸುವ ಬಗೆ ಹೇಗೆ ಎಂಬುದರ ಬಗ್ಗೆ ನಾಟಕ ಪ್ರದರ್ಶನ ನೀಡಿ ಉತ್ತಮ ಸಂದೇಶ ನೀಡಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಏಕಲವ್ಯ  ಶಾಲಾ ಪ್ರಾಂಶುಪಾಲರಾದ ಸತೀಶ್ ಜೈಸ್ವಾಲ್,ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್,ನಾಗರಾಜ್,ಉಮೇಶ್,ಬೀಟ್ ಪಾರೆಸ್ಟ್ ಉಮೇಶ್, ಸುಧೀರ್,ಕಲಾವಿದರಾದ ಜಯಂತಿ ರಮೇಶ್ ಬಂಗಾರ್, ಕುಮಾರೇಷನ್, ಮಹೇಶ್,ಹನುಮಂತ್,ಅಮಿತ್ ಮತ್ತಿತರರು ಭಾಗವಹಿಸಿದ್ದರು.
Firefighting demonstration by the Forest Department
Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...