Home namma chikmagalur chikamagalur ಕೆಸದ ಸೊಪ್ಪು ತರಲು ಹೋದ ವೃದ್ಧೆ ಸಾವು
chikamagalurCrime NewsHomeLatest Newsnamma chikmagalur

ಕೆಸದ ಸೊಪ್ಪು ತರಲು ಹೋದ ವೃದ್ಧೆ ಸಾವು

Share
Share

ಮೂಡಿಗೆರೆ: ಕೆಸದ ಸೊಪ್ಪು ತರಲು ಹೋದ ವೃದ್ಧೆಯೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಕಡಿದಾಳು ಗ್ರಾಮದಲ್ಲಿ ನಡೆದಿದೆ.

ಕಡಿದಾಳು ಗ್ರಾಮದ ನಿವಾಸಿ ಸುಬ್ಬಮ್ಮ (65) ಮೃತಪಟ್ಟ ದುರ್ದೈವಿ. ಕೆಸದ ಸೊಪ್ಪು ತರುವುದಾಗಿ ಮನೆಯಲ್ಲಿ ಹೇಳಿ ಹೊರಹೋಗಿದ್ದರು. ಆದರೆ ಸಂಜೆಯಾದರೂ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತಲಿನ ಭಾಗಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.

ಕೊನೆಗೆ ಹೇಮಾವತಿ ನದಿಯಲ್ಲಿ ಸುಬ್ಬಮ್ಮ ಅವರ ಶವ ಪತ್ತೆಯಾಗಿದೆ. ನದಿ ದಂಡೆಯಲ್ಲಿ ಕೆಸದ ಸೊಪ್ಪು ಕೊಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಾಜ ಸೇವಕ ಅರೀಫ್ ಬಣಕಲ್ ಮತ್ತು ಅವರ ತಂಡದ ಸಹಕಾರದೊಂದಿಗೆ ನದಿಯಿಂದ ಶವವನ್ನು ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಎಂ.ಜಿ.ಎಂ ಆಸ್ಪತ್ರೆಗೆ ರವಾನಿಸಲಾಗಿದೆ.

Elderly woman dies after going to fetch dirty greens

Share

Leave a comment

Leave a Reply

Your email address will not be published. Required fields are marked *

Don't Miss

ರಾಜ್ಯದಲ್ಲಿ ವಿದ್ಯುತ್ ದರ ಹುಚ್ಚಂಬಟ್ಟೆ ಏರಿಕೆ

ಚಿಕ್ಕಮಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ‌್.ಯಡಿಯೂರಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿ ವಿದ್ಯುತ್ ದರವನ್ನು ಅತಿಯಾದ ಮಟ್ಟಕ್ಕೆ ಏರಿಸಿರುವುದನ್ನು ಖಂಡಿಸಿರುವ ಅವರು, “ವಿದ್ಯುತ್...

ವಿದ್ಯುತ್ ದರ ಏರಿಕೆಗೆ ಸಿ.ಟಿ. ರವಿ ತೀವ್ರ ವಾಗ್ದಾಳಿ

ಚಿಕ್ಕಮಗಳೂರು : ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲ...

Related Articles

ಡಾ|| ರಾಜ್‌ಕುಮಾರ್ ನಟನೆಗೆ ಯಾರು ಸರಿಸಾಟಿಯಿಲ್ಲ

ಚಿಕ್ಕಮಗಳೂರು:  ಕರ್ನಾಟಕದಲ್ಲಿ ಡಾ.ರಾಜ್ ನಟನೆಗೆ ಯಾರೂ ಸರಿಸಾಟಿಯಿಲ್ಲ. ಈ ನಟನ ಕಲಾತ್ಮಕ ಚಿತ್ರಗಳು ಸಕುಟುಂಬ ವೀಕ್ಷಿಸಬಹುದಾಗಿದ್ದು,...

ಮೇ.2ಕ್ಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆಮತಗಳ ಮರುಎಣಿಕೆ

ಚಿಕ್ಕಮಗಳೂರು: ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಶೃಂಗೇರಿ ವಿಧಾನಸಭಾ ಚುನಾವಣೆಯ ಅಂಚೆ ಮತಗಳ ಮರುಎಣಿಗೆ ಮೇ...

ಚೇತನ್ ಲಕ,ಲಕ ಜಾತ್ಯತೀತ ಜನತಾದಳ ಅಬ್ಬರ

ಕಡೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳ ಮಂಕು ಕವಿದ ವಾತಾವರಣದಲ್ಲಿತ್ತು,ಆದರೆ ಮೊನ್ನೆ ಕಡೂರಿನಲ್ಲಿ ದಳದ ಸಭೆಗೆ...

ಬಿರುಗಾಳಿ ಸಹಿತ ಸುರಿದ ಭಾರಿ ಮಳೆ

ಆಲ್ಲೂರು: ಬಿರುಗಾಳಿ ಸಹಿತ ಸುರಿದ ಭಾರಿ ಮಳೆ ಆಲ್ಲೂರು ಸುತ್ತಮುತ್ತ ಅವಾಂತರ ಸೃಷ್ಟಿಸಿತು. ಬಿಸಿಲಿನಿಂದ ಕಂಗೆಟ್ಟಿದ್ದ...