ಕಡೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳ ಮಂಕು ಕವಿದ ವಾತಾವರಣದಲ್ಲಿತ್ತು,ಆದರೆ ಮೊನ್ನೆ ಕಡೂರಿನಲ್ಲಿ ದಳದ ಸಭೆಗೆ ಸೇರಿದ ಜನ ನೋಡಿ ಅವರ ಆರ್ಭಟ ಕಂಡು ದಳದ ಬಗ್ಗೆ ವಿರೋಧಿಗಳು ಕೂಡ ನಿರ್ಲಕ್ಷ್ಯ ಮಾಡುವಂತಿಲ್ಲ.
ಜಿಲ್ಲೆಯಲ್ಲಿ ದಳ ಎಂದರೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಎನ್ನುವವರ ಮಧ್ಯೆ ಚೇತನ್ ಕೆಂಪರಾಜ್ ಲಕ,ಲಕ ಎಂದು ಹೊಳೆದಿದ್ದು ಮಾತ್ರ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿದೆ.
ದಳದ ಯುವ ನೇತಾರ ನಿಖಿಲ್ ಕುಮಾರಸ್ವಾಮಿ ಸೇರಿದ್ದ ಜನರನ್ನು ನೋಡಿ ಆಶ್ಚರ್ಯ ಪಟ್ಟರು.ಮಾಜಿ ಶಾಸಕ ವೈ,ಎಸ್,ವಿ ದತ್ತರವರಿಗೆ ಉಮ್ಮಸ್ಸು ಹುಕ್ಕಿ ಬಂದಿತು .
ಮಾಜಿ ಶಾಸಕ ದಿವಂಗತ ಕೆ.ಎಂ.ಕೃಷ್ಣಮೂರ್ತಿ ನಾಲ್ಕು ಬಾರಿ ಬೇರೆ,ಬೇರೆ ಚಿಹ್ನೆಯಡಿ ಚುನಾವಣೆಗೆ ಸ್ಪರ್ಧೆ ಮಾಡಿ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಅವರ ತಮ್ಮ ಕೆ.ಎಂ.ಕೆಂಪರಾಜ್ ಕೂಡ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದರು ಈಗ ಸೆಡ್ಡು ಹೊಡೆಯಲು ಚೇತನ್ ಕೆಂಪರಾಜ್ ಮುನ್ನುಗ್ಗುತ್ತಿರುವ ರೀತಿ ಅವರ ವಿರೋಧಿಗಳಿಗೆ ನಡುಕ ಆರಂಭವಾಗಿದೆ.
ಕಡೂರಿನಲ್ಲಿ ಹಗಲು ಹೊತ್ತು ದಳ ಎನ್ನುವ ಚೇತನ ರಾತ್ರಿ ಮಾತ್ರ ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಎನ್ನುವುದನ್ನು ತಿಳಿದಿರುವ ಶಾಸಕ ಆನಂದ್ ಸಿಡಿದೆದ್ದಿದ್ದಾರೆ.ಇದರಿಂದಾಗಿ ಆನಂದ್ ಗೂ ಚೇತನ್ ಗೂ ಎಣ್ಣಿ ಸೀಗೆಕಾಯಿ ತರಹ ಆಗಿದೆ.ಚೇತನ್ ಭಾಷಣದಲ್ಲೂ ಇದನ್ನೇ ಅಬ್ಬರಿಸಿದ್ದಾರೆ.ಚೇತನ್ ಹಳ್ಳಿ,ಹಳ್ಳಿಗಳಲ್ಲಿ ಸಂಘಟನೆ ಮಾಡುತ್ತಿದ್ದಾನೆ.ತನ್ನದೇ ಪಡೆ ಕಟ್ಟಿಕೊಂಡು ಓಡಾಡುತ್ತಿದ್ದಾನೆ.
ಕೆ.ಎಂ.ಕೃಷ್ಣಮೂರ್ತಿ ಜನತಾದಳ ತೊರೆದು ಅಹಿಂದ ಸೇರ್ಪಡೆಗೊಂಡಾಗ ಜನತಾದಳ ಬಾವುಟ ಕಟ್ಟಲು ಬೆಂಗಳೂರಿನಿಂದ ವೈ.ಎಸ್.ವಿ.ದತ್ತ ಬಂದು ಬಾವುಟ ಕಟ್ಟಿ ಹಳ್ಳಿ, ಹಳ್ಳಿ ಸುತ್ತಿ ವಿಧಾನ ಸಭಾ ಸದಸ್ಯರಾಗಿದ್ದರು.ಚೇತನ್ ಫೀನಿಕ್ಸ್ ಹಕ್ಕಿಯಂತೆ ಬಂದಿರುವುದು ದಳದ ಕೋಟೆ ಭದ್ರವಾಗಬಹುದು.ಆದರೆ ಟಿಕೆಟ್ ಯಾರಿಗೆ ಎಂಬ ಚಿಂತೆ ಮಾತ್ರ ಇಬ್ಬರನ್ನೂ ಕಾಡಬಹುದು.ಒಟ್ಟಾರೆ ದಳ ಎಲ್ಲಿದೆ ಎನ್ನುವವರು ಕೂಡ ಮುಟ್ಟಿ ನೋಡಿಕೊಳ್ಳುವಂತೆ ಆಗಿದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.ಎಂಬಂತೆ ಕುರಿ,ಕೋಳಿ, ಹಣ ಕೊಟ್ಟು ಜನಸೇರಿಸಿದ್ದಾರೆ ಎಂದು ಅವರ ವಿರೋಧಿಗಳ ಆರೋಪ ಚೇತನ್ ಇದಕ್ಕೆ ಉತ್ತರಿಸುವ ಜವಾಬ್ದಾರಿ ಕೂಡ ಇದೆ.ಏಕೆಂದರೆ ಜನರ ತೀರ್ಪು ಅಂತಿಮ.
Chetan Lak Lak Secular Janata Dal’s outburst
Leave a comment