Home namma chikmagalur ಗಿರಿಗೆ ತೆರಳಲು ಪಾಸ್ ಕಡ್ಡಾಯ ನಿರ್ಧಾರ ರದ್ದುಪಡಿಸುವಂತೆ ಆಗ್ರಹ
namma chikmagalurchikamagalurHomeLatest News

ಗಿರಿಗೆ ತೆರಳಲು ಪಾಸ್ ಕಡ್ಡಾಯ ನಿರ್ಧಾರ ರದ್ದುಪಡಿಸುವಂತೆ ಆಗ್ರಹ

Share
Share

ಚಿಕ್ಕಮಗಳೂರು:  ಗುರುದತ್ತಾತ್ರೇಯ ಸ್ವಾಮಿ ಬಾಬಾಬುಡನ್‌ಗಿರಿ ದರ್ಗಾ ವ್ಯಾಪ್ತಿಯ ಸಂಚಾರಕ್ಕೆ ಸ್ಥಳೀಯ ನಿವಾಸಿಗಳಿಗೆ ಪಾಸ್ ಕಡ್ಡಾಯ ಮಾಡಲು ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರವನ್ನು ರದ್ದುಪಡಿಸುವಂತೆ ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಚಾಲಕ ಗೌಸ್‌ಮೊಯುದ್ದೀನ್ ಮಾತನಾಡಿ, ಗುರುದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ ಸರ್ವಧರ್ಮಿಯರ ಸೌಹಾರ್ದ ಕೇಂದ್ರವಾಗಿದೆ. ಜತೆಗೆ ಸುತ್ತಮುತ್ತ ಹತ್ತಾರು ಪ್ರವಾಸಿ ತಾಣಗಳಿವೆ. ಪ್ರವಾಸಿ ಸ್ಥಳ ವೀಕ್ಷಣೆಗೆ ಬರುವ ಹೊರಗಿನವರಿಗೆ ಆನ್‌ಲೈನ್ ಪ್ರವೇಶ ನೀಡಲು, ಸ್ಥಳೀಯರಿಗೆ ಪಾಸ್ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಹೇಳಿದರು.

ಈ ವಿಚಾರದಲ್ಲಿ ಸ್ಥಳೀಯ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ಈ ರೀತಿ ಸ್ಥಳೀಯರಿಗೆ ಪಾಸ್ ನೀಡಿದರೆ ಆ ಭಾಗದಲ್ಲಿರುವ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಕಾರ್ಮಿಕರು ಬರುವುದ ಹೇಗೆ? ಮದುವೆ, ಮುಂಜಿ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾವುನೋವುಗಳಾದಾಗ ಹೊರಗಿನ ಸಂಬಂಧಿಕರು ತಮ್ಮವರನ್ನು ಭೇಟಿ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ನಮ್ಮ ಊರು, ನಮ್ಮ ಮನೆಗೆ ಅನುಮತಿ ಪಡೆದು ಬರುವಂತಾಗುತ್ತದೆ. ಇದು ಮಾನವನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದರು. ಜಿಲ್ಲಾಡಳಿತ ಈ ನಿರ್ಧಾರವನ್ನು ಕೈಬಿಡದಿದ್ದರೆ ಆ.೧೩ ರಂದು ಜಿಲ್ಲಾ ಕೇಂದ್ರದಲ್ಲಿ ತೀವೃತರದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶ್ರೀ ಗುರುದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ಸಂಘಪರಿವಾರ ಹುಟ್ಟು ಹಾಕಿರುವ ವಿವಾದಕ್ಕೆ ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಈಗ ದತ್ತಪೀಠದಲ್ಲಿರುವ ಈಗಿರುವ ಸಮಿತಿಯನ್ನು ರದ್ದುಮಾಡಿ ಎರಡೂ ಪಂಗಡದವರು ಸಮಾನವಾಗಿರುವ ಪಾರದರ್ಶಕ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಆಶಾಸಂತೋಷ್, ದಿವಾಕರ, ರೀತು, ಪುಟ್ಟಸ್ವಾಮಿ, ವೀಣಾ, ಗಣೇಶ್, ಚಂದು, ಪಾಷಾ ಮತ್ತಿತರರಿದ್ದರು

Demand to cancel the decision to make passes mandatory to visit Giri

Share

Leave a comment

Leave a Reply

Your email address will not be published. Required fields are marked *

Don't Miss

ಲಾರಿ ಡಿಕ್ಕಿಗೆ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಸಾವು

ಅಜ್ಜಂಪುರ: ಕರ್ತವ್ಯಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಶುವೈದ್ಯಕೀಯ ಇಲಾಖೆಯ ಅಟೆಂಡರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಯಾಪುರದ ಜ್ಞಾನ ದೀಪ ಶಾಲೆ...

ವಿದ್ಯುತ್ ಸ್ಪರ್ಶ: ಬೇಲಿ ಕಟಾವು ಮಾಡುತ್ತಿದ್ದ ವಾಚ್‌ಮನ್ ಸಾವು

ತರೀಕೆರೆ: ತೋಟದ ಬೇಲಿ ಕಟಾವು ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಾಚ್‌ಮನ್ ಮೃತಪಟ್ಟಿರುವ ಘಟನೆ ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನಲ್ಲಿ ಆ.20ರಂದು ನಡೆದಿದೆ. ಮೃತರನ್ನು ಲಿಂಗದಹಳ್ಳಿ ಕಾವಲ್ ಆರ್.ಸಿ. ಕಾಲೋನಿ...

Related Articles

ಕಾಫಿನಾಡಿನಲ್ಲಿ ಎಚ್1ಎನ್1 ಪ್ರಕರಣ ಏರಿಕೆ: 24 ಮಂದಿಗೆ ಸೋಂಕು ದೃಢ

ಚಿಕ್ಕಮಗಳೂರು:  ಕಾಫಿನಾಡಿನಲ್ಲಿ ಕಳೆದೊಂದು ವಾರದಿಂದ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜ್ವರ, ನೆಗಡಿ, ಕೆಮ್ಮು ಹಾಗೂ...

ಉಪ ಪೊಲೀಸ್ ಠಾಣೆಗಳ ತೆರೆಯುವಂತೆ ಗೃಹ ಸಚಿವರಿಗೆ ಒತ್ತಾಯ

ಚಿಕ್ಕಮಗಳೂರು:  ಜಿಲ್ಲೆಯ ಕೆಲವು ಕಡೆ ಉಪ ಪೊಲೀಸ್ ಠಾಣೆಗಳನ್ನು ತೆರೆಯುವಂತೆ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್...

ಆಲ್ದೂರಿನಲ್ಲಿ ಟೈಲ್ಸ್ ಮೇಲೆ ಜಾರಿ ಬಿದ್ದ ರೈತ ಸಾವು

ಆಲ್ದೂರು: ಅಡುಗೆ ಮನೆಯ ನೆಲದ ಮೇಲೆ ಬಿದ್ದಿದ್ದ ನೀರನ್ನು ಗಮನಿಸದೆ ಟೈಲ್ಸ್ ಮೇಲೆ ಕಾಲಿಟ್ಟು ಜಾರಿ...

ಕಲ್ಯಾಣನಗರ 5ನೇ ಕ್ರಾಸ್‌ನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು

ಚಿಕ್ಕಮಗಳೂರು: ಭಜನೆ ಮುಗಿಸಿಕೊಂಡು ಸ್ನೇಹಿತೆಯೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿಯೊಬ್ಬರ ಕುತ್ತಿಗೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು...