Home Latest News ದತ್ತಜಯಂತಿ ಹಿನ್ನೆಲೆ ಬೃಹತ್ ಬೈಕ್ ಜಾಥಾ : ದತ್ತಪೀಠಕ್ಕೆ ತೆರಳಿ ಹುಣ್ಣಿಮೆ ಪೂಜೆ
Latest News

ದತ್ತಜಯಂತಿ ಹಿನ್ನೆಲೆ ಬೃಹತ್ ಬೈಕ್ ಜಾಥಾ : ದತ್ತಪೀಠಕ್ಕೆ ತೆರಳಿ ಹುಣ್ಣಿಮೆ ಪೂಜೆ

Share
Share

ಚಿಕ್ಕಮಗಳೂರು :

ಮುಂದಿನ ತಿಂಗಳ ಡಿಸೆಂಬರ್ 12 ರಿಂದ 14 ರವರೆಗೂ ನಡೆಯಲಿರುವ ದತ್ತಜಯಂತಿ ಅಂಗವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ನಗರದಲ್ಲಿ ಬೃಹತ್ ಬೈಕ್ ಜಾಥಾ ನಡೆಯಿತು.

ಇಂದು ದತ್ತಪೀಠದಲ್ಲಿ ಹುಣ್ಣಿಮೆ ಪೂಜೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಹಿಂದೂಪರ ಸಂಘಟನೆಗಳಿಂದ ಬೃಹತ್ ಬೈಕ್ ಜಾಥಾ ನಡೆಯಿತು.
ನಗರದ ಕೆ.ಎಂ.ರಸ್ತೆ, ಎಂ.ಜಿ ರಸ್ತೆ, ಐ.ಜಿ ರಸ್ತೆಯಲ್ಲಿ ಬೈಕ್ ಜಾಥಾ ಸಾಗಿತು. 100ಕ್ಕೂ ಹೆಚ್ಚು ಬೈಕ್ ಗಳಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆದಿದ್ದು ಭಗವಾದ್ವಜ ಹಿಡಿದು ಕೇಸರಿ ಶಲ್ಯದೊಂದಿಗೆ ಹಿಂದೂಪರ ಸಂಘಟನೆಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.‌ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗೂ ಶ್ರೀರಾಮಸೇನೆ ಅಲ್ಲದೇ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಬೈಕ್ ಜಾಥಾದ ಬಳಿಕ ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳಿರುವ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೂಜೆ ಸಲ್ಲಿಸಲಿದ್ದಾರೆ. ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯಲಿರುವ ದತ್ತ ಜಯಂತಿ ಕುರಿತು ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸಲು ಸಂಘ ಪರಿವಾರದಿಂದ ಬೈಕ್ ಜಾಥಾ ನಡೆಸಲಾಯಿತು

Share

Leave a comment

Leave a Reply

Your email address will not be published. Required fields are marked *

Don't Miss

ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ

ಚಿಕ್ಕಮಗಳೂರು:  ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ...

ಮುಂಜಾಗ್ರತಾ ಕ್ರಮವಾಗಿ ಪೋಲಿಯೊ ಲಸಿಕೆ ಹಾಕಿಸಿ

ಚಿಕ್ಕಮಗಳೂರು:ಯಾವುದೇ ರೋಗ ಬಂದ ಮೇಲೆ ಪರದಾಡುವುದಕ್ಕಿಂತ, ಅದು ಬರುವ ಮುನ್ನವೇ ತಡೆಯುವುದು ಬುದ್ಧಿವಂತಿಕೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆ ನೀಡಿದರು. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ  ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ನಮ್ಮ ದೇಶದಲ್ಲಿ ಹಲವು ವರ್ಷಗಳ ಹಿಂದೆಯೇ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಹಾಗೂ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡ ಅವರ...

Related Articles

ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂ

ಚಿಕ್ಕಮಗಳೂರು:  ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು...

ಆಸ್ತಿ- ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂಪತ್ತು

ಚಿಕ್ಕಮಗಳೂರು:  ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂ ಪತ್ತು. ಈ ಆರೋಗ್ಯಯುತ ಬದುಕು...

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ...

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿಜೆಪಿ ರಾಜಕೀಯ

ಕಡೂರು: ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಸಚಿವ ರಾಮಲಿಂಗಾರೆಡ್ಡಿ ಅವರು ರಾಜಕೀಯ ವಲಯದ ಪ್ರಮುಖ ವಿದ್ಯಮಾನಗಳು, ರಾಜ್ಯದ...