Home namma chikmagalur chikamagalur ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊಡ್ಡ ಸವಾಲಾಗಿದೆ
chikamagalurHomeLatest Newsnamma chikmagalur

ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊಡ್ಡ ಸವಾಲಾಗಿದೆ

Share
Share

ಚಿಕ್ಕಮಗಳೂರು: ಆಧುನಿಕ ಜೀವನ ಪದ್ಧತಿಯಲ್ಲಿ ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊ ಡ್ಡ ಸವಾಲಾಗಿ ಪರಿಣಾಮಿಸಿದೆ. ಪ್ರಸ್ತುತ ಕಾಲಕ್ಕೆ ಬೇಡವಾದರೂ, ಜನಿಸಿದ ನಂತರ ಅನುಸರಿಸಿಕೊಂಡು ಸೂ ಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥಸ್ವಾಮೀಜಿ ಹೇಳಿದರು.

ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಐಇಇಇ ಬೆಂಗಳೂರು ವಿಭಾಗ ದಿಂದ ಆಯೋಜಿಸಿದ್ಧ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಮೆಷಿನ್ ಇನ್ಪಾರ್ಮ್ಯಾಟಿಕ್ಸ್ ಉದಯೋನ್ಮುಖ ಸಂಶೋ ಧನೆ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಆರ್ಶೀವಚನ ನೀಡಿದರು.

ಇಂದಿನ ದಿನಮಾನದಲ್ಲಿ ತಂತ್ರಜ್ಞಾನ ವರ್ಣನೆ ಮಾಡುವುದು ಬಹಳ ಕಷ್ಟಸಾಧ್ಯ. ಪ್ರತಿಯೊಂದು ರಂಗ ದಲ್ಲೂ ತಂತ್ರಜ್ಞಾನ ಅವಶ್ಯಕವಾಗಿದೆ. ಈ ತಂತ್ರಜ್ಞಾನ ವ್ಯವಸ್ಥೆಗೆ ಅಂಟಿಕೊಂಡಿರುವ ಮನುಜ, ಬಿಟ್ಟಿರಲಾಗದ ಸ್ಥಿತಿಗೆ ತಲುಪಿದ್ದಾನೆ. ಇದೀಗ ಎಐ ತಂತ್ರಜ್ಞಾನವು ಎಲ್ಲರಿಗೂ ಸಮಸ್ಯೆಯಾಗಿದ್ದು ಸಮರ್ಪಕವಾಗಿ ಬಳಸಿಕೊ ಳ್ಳುವ ಕಾರ್ಯ ಮಾಡಬೇಕಿದೆ ಎಂದರು.

ಜಗತ್ತಿನಲ್ಲಿ ಕೆಲವೇ ವರ್ಷಗಳಲ್ಲಿ ಜನಿಸಿದ ರಾಷ್ಟ್ರಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಮೈಲುಗೈ ಸಾಧಿಸಿದೆ. ಆ ದರೆ ಭಾರತ ಐದು ಸಾವಿರ ವರ್ಷಗಳ ಪುರಾತನ ಇತಿಹಾಸವುಳ್ಳ ದೇಶ. ಅದಕ್ಕಾಗಿ ಪ್ರಬುದ್ಧ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದೀಗ ಅಮೇರಿಕಾ ವಿಜ್ಞಾನಿಯೋರ್ವರು ಭಗವಾನ್ ಶ್ರೀಕೃಷ್ಣ ದಿವ್ಯಸ್ವರೂಪ ನೆನೆಪಿಸಿಕೊ ಂಡು ಕಾರ್ಯನಿರ್ವಹಿಸುತ್ತಿದ್ದು, ಆ ಶಕ್ತಿ ಭಾರತದ ಸಂಸ್ಕೃತಿಯಲ್ಲಿದೆ ಎಂದರು.

ಬ್ರಹ್ಮಂಡ ಒಂದು ವಿಸ್ಮಯಕಾರಿ ಲೋಕ. ಈ ಲೋಕದ ರಹಸ್ಯವನ್ನು ಅರಿಯಲು ನೂರಾರು ವರ್ಷಗಳ ಹಿಂದೆಯೇ ಋಷಿಮುನಿಗಳು ಮನಸ್ಸಿನ ಧ್ಯಾನದಿಂದಲೇ ಬ್ರಹ್ಮಂಡದಲ್ಲಿನ ಗ್ರಹಗಳ ಚಲನ-ವಲನ, ಕೆಲಸ- ಕಾರ್ಯ ಮತ್ತು ಪೃಥ್ವಿಯ ಪಂಚಭೂತಗಳನ್ನು ಧ್ಯಾನದಿಂದ ಗ್ರಹಿಸುತ್ತಿದ್ದರು. ಈ ಪೂರ್ವಿಕರು ಉಳಿಸಿದ ಸಂಸ್ಕೃತಿ ಇಂದು ನಾವುಗಳು ಬಳಸುತ್ತಿದ್ದೇವೆ ಎಂದರು.

ಜಗತ್ತಿನ ಅನೇಕ ಬಲಾಡ್ಯ ರಾಷ್ಟ್ರಗಳಲ್ಲಿ ಭಾರತೀಯರು ವಿಜ್ಞಾನ ಹಾಗೂ ಇಂಜಿನಿಯರ್ ಕ್ಷೇತ್ರದಲ್ಲಿ ಸಾ ಧನೆ ಮಾಡಲು ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಶ್ರಮವಿದೆ. ನಾಲ್ಕು ದಶಕಗಳ ಹಿಂದೆ ಯೇ ಇಂಜಿನಿಯರ್ ಕಾಲೇಜು ಸ್ಥಾಪಿಸಿ, ಮಕ್ಕಳ ಭವಿಷ್ಯಕ್ಕೆ ನೀರೂಣಿಸಿದವರು. ಆದರೆ ದೇಶದ ಪ್ರತಿಭಾವಂ ತ ಯುವಜನತೆ ಹೆಚ್ಚಾಗಿ ವಿದೇಶದಲ್ಲಿ ಪ್ರತಿಭೆ ಅನಾವರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಆದಿಚುಂಚನಗಿರಿ ಮಠದಲ್ಲಿ ಇದೇ ಏ.೧೫ ರಂದು ಮಠದ ಸಂಸ್ಥಾಪಕರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸಮಾಧಿ ಸ್ಥಳದಲ್ಲಿ ಶಿಲೆಗಳೊಂದಿಗೆ ದೇಗುಲ ಕೊಠಡಿ ನಿರ್ಮಾಣಗೊಳ್ಳುತ್ತಿದೆ. ಈ ಕಾರ್‍ಯ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲೆಯ ಸರ್ವಸಮಾಜವು ಒಂದಾಗಿ ಕಾರ್ಯಕ್ರಮಕ್ಕೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮಂಗಳೂರು ಎನ್.ಐ.ಟಿ.ಟಿ.ಇ. ವಿಶ್ವವಿದ್ಯಾಲಯ ಕುಲಪತಿ ಡಾ. ಎಂ.ಎಸ್.ಮೂಡಿತ್ತಾಯ ಮಾತನಾ ಡಿ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಮೆಷಿನ್ ಇನ್ಪಾರ್ಮ್ಯಾಟಿಕ್ಸ್ ಸಮ್ಮೇಳನವು ವಿದ್ಯಾರ್ಥಿಗಳ ಮನಸ್ಸುಗಳೊಂ ದಿಗೆ ಸಂವಹನ ನಡೆಸಲು ಉತ್ತಮ ಅವಕಾಶವನ್ನು ಒದಗಿಸುತ್ತಿದ್ದು ಪ್ರೇರೇಪಿತರಾಗುವ ಮೂಲಕ ಇತರರ ನ್ನು ಪ್ರೇರೇಪಿಸುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.

ಶಿಕ್ಷಕರು ಶಿಕ್ಷಣದಲ್ಲಿನ ಮೌಲ್ಯ ಸರಪಳಿಯ ಪ್ರತಿಯೊಂದು ಅಂಶವನ್ನು ಅರ್ಥಮಾಡಿಕೊಳ್ಳಬೇಕು. ಅತ್ಯ ಂತ ನವೀನ, ಸಮಕಾಲಿನ ಮತ್ತು ಉದ್ಯಮ ಆಧಾರಿತ ಪಠ್ಯಕ್ರಮದ ಮೂಲಕ ಹೇಗೆ ಸರಿಯಾಗಿ ಶೈಕ್ಷಣಿಕ ವಿತರಣಾ ಪ್ರಕ್ರಿಯೆಗಳು ಮತ್ತು ಮೌಲ್ಯಮಾಪನ ತಂತ್ರಗಳ ಮೂಲಕ ಗುಣಮಟ್ಟದ ವಿದ್ಯಾರ್ಥಿಗಳನ್ನು ಹೊರ ತಂದು ಜಗತ್ತಿಗೆ ಅರ್ಪಿಸಬೇಕು ಎಂದರು.

ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಎ.ಗೌತಮ್ ಮಾತನಾಡಿ ಶ್ರೀಗಳ ಮಾರ್ಗದರ್ಶನದಲ್ಲಿ ಟ್ರ ಸ್ಟ್ ದೇಶಾದ್ಯಂತ ೫೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ ಗಮನಾರ್ಹವಾಗಿ ಬೆಳೆದಿದೆ. ೭೦ ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದು ಅವುಗಳಲ್ಲಿ ಹೆಚ್ಚಿನವು ಗ್ರಾಮೀಣ ಸಮುದಾಯಗ ಳಿಗೆ ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐಇಇಇ ಬೆಂಗಳೂರು ವಿಭಾಗದ ಅಧ್ಯಕ್ಷ ಡಾ.ಚೆಂಗಪ್ಪ ಮಂಜಂದೀರಾ, ಸಿಐಎಸ್ ಡಾ.ಸುಮನ ಮರಡಿತ್ತಾಯ, ಇಸಿಎಂಐ ಪ್ರಕಟಣೆ ಅಧ್ಯಕ್ಷ ಡಾ.ಅನಿಲ್‌ಕುಮಾರ್, ಆದಿಚುಂಚನಗಿರಿ ವಿಶ್ವವಿ ದ್ಯಾಲಯದ ರಿಜಿಸ್ಟರ್ ಡಾ. ಸಿ.ಕೆ.ಸುಬ್ಬರಾಯ, ಎಐಟಿ ಆಡಳಿತ ಮಂಡಳೀ ಸದಸ್ಯ ಕೆ.ಮೋಹನ್, ವಿದ್ಯಾ ರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಸಂಗಾರೆಡ್ಡಿ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪ ಸ್ಥಿತರಿದ್ದರು.

Artificial intelligence is once again a great challenge for humanity

 

 

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....