Home namma chikmagalur chikamagalur ಗ್ರಾಮೀಣ ಭಾಗದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ವಿವಾರಣೆಗೆ ಮನವಿ
chikamagalurHomeLatest Newsnamma chikmagalur

ಗ್ರಾಮೀಣ ಭಾಗದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ವಿವಾರಣೆಗೆ ಮನವಿ

Share
Share

ಚಿಕ್ಕಮಗಳೂರು: ‌ಗ್ರಾಮೀಣ ಭಾಗದ ಕುಟುಂಬಗಳಿಗೆ ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಪೂರೈಸುತ್ತಿಲ್ಲ. ಅಧಿಕ ಹಣದಾಸೆಗಾಗಿ ಏಜೆನ್ಸಿಗಳು ಸಿಲಿಂಡರ್‌ನ್ನು ಮಾರಾಟ ಮಾಡಿ, ಗ್ರಾಮಸ್ಥರಿಗೆ ತೀವ್ರ ತೊಂದರೆ ನೀಡುತ್ತಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾ ಘಟಕವು ಸೋ ಮವಾರ ಜಿಲ್ಲಾಡಳಿತಕ್ಕೆ ದೂರು ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಹಾಯಕ ನವೀನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಲಕ್ಯಾ ಮತ್ತು ಸಖರಾಯಪಟ್ಟಣ ಹೋಬಳಿಯ ಅನೇಕ ಗ್ರಾಮಗಳಿಗೆ ಅನಿಲ ಸಂಪರ್ಕ ನಿಗಧಿತ ಸಮಯಕ್ಕೆ ಆಗುತ್ತಿಲ್ಲ. ಗ್ಯಾಸ್ ಏಜೆನ್ಸಿಗಳು ಗ್ರಾಮಸ್ಥರಿಗೆ ತಲುಪುವ ಸಿಲಿಂಡರ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿವೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಕಳೆದ ಹತ್ತು ದಿನಗಳಿಂದ ಸಿಲಿಂಡರ್ ಪೂರೈಸುತ್ತಿಲ್ಲ. ಇದರಿಂದ ಜನಸಾ ಮಾನ್ಯರಿಗೆ ತುಂಬಾ ಸಮಸ್ಯೆಯಾಗಿದೆ. ಇಲ್ಲಿರುವ ಗ್ರಾಮಸ್ಥರಿಗೆ ವಾಹನಗಳು ಇರುವುದಿಲ್ಲ. ಹೀಗಾಗಿ ಏಜೆನ್ಸಿ ಗಳು ಸಿಲಿಂಡರ್‌ಗಳನ್ನು ಹೋಟೆಲ್ ಉದ್ಯಮಕ್ಕೆ ದುಬಾರಿ ಬೆಲೆಗೆ ಮಾರಾಟ ಮಾಡಿಕೊಂಡು ವೈಯಕ್ತಿಕವಾ ಗಿ ಲಾಭ ಮಾಡಿಕೊಳ್ಳುತ್ತಿವೆ ಎಂದು ದೂರಿದರು.

ಇತ್ತೀಚೆಗೆ ಗ್ಯಾಸ್ ಏಜೆನ್ಸಿಗಳು ಮನೆ ಬಾಗಿಲಿಗೆ ಸಿಲಿಂಡರ್ ಪೂರೈಸುವ ಬದಲು ನೇರವಾಗಿ ಏಜೆನ್ಸಿ ಗಳಿಂದ ತರಬೇಕೆಂಬ ನಿಯಮ ರೂಪಿಸುತ್ತಿದೆ. ಇದು ಹತ್ತಾರು ಕಿ.ಮೀ. ಸಂಚರಿಸಲು ಗ್ರಾಮೀಣ ಭಾಗದವ ರಿಗೆ ತೀವ್ರ ಸಮಸ್ಯೆಯಾಗಿದೆ. ಇದನ್ನೇ ಉಪಯೋಗಿಸಿಕೊಂಡು ಏಜೆನ್ಸಿಗಳು ಹೋಟೆಲ್ ಉದ್ಯಮಕ್ಕೆ ಅನಧಿ ಕೃತವಾಗಿ ಮನೆ ಸಿಲಿಂಡರ್ ಪೂರೈಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದು, ಗ್ರಾಮೀಣ ಪ್ರದೇಶದ ನಿವಾಸಿ ಗಳಿಗೆ ಸಮರ್ಪಕವಾಗಿ ಸಿಲಿಂಡರ್ ಪೂರೈಕೆ ಮಾಡಿ ಅನುಕೂಲ ಕಲ್ಪಿಸಿಕೊಡಬೇಕು. ಒಂದು ವೇಳೆ ನಿರ್ಲ ಕ್ಷ್ಯ ವಹಿಸಿದರೆ, ಕರವೇ ಸಂಘಟನೆ ಗ್ರಾಮೀಣ ನಿವಾಸಿಗಳೊಂದಿಗೆ ಜೊತೆಗೂಡಿ ದೊಡ್ಡ ಹೋರಾಟ ರೂಪಿ ಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಗೌರವಾಧ್ಯಕ್ಷ ರಾಜಣ್ಣ, ತಾಲ್ಲೂ ಕು ಅಧ್ಯಕ್ಷ ಕುಮಾರ್, ಸಖರಾಯಪಟ್ಟಣ ಹೋಬಳಿ ಪ್ರಧಾನ ಕಾರ್ಯದರ್ಶಿ ರೇಣುಕಪ್ಪ, ಮುಖಂಡರುಗ ಳಾದ ಪರಮೇಶ್, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Appeal to resolve gas cylinder problem in rural areas

Share

Leave a comment

Leave a Reply

Your email address will not be published. Required fields are marked *

Don't Miss

ಖಾಸಗಿ ಬ್ಯಾಂಕ್ ಗಳಿಂದ ವಾಹನ ಮಾಲೀಕನಿಗೆ ವಂಚನೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಖಾಸಗಿ ಬ್ಯಾಂಕ್ ಗಳು ಹಾಗೂ ಫೈನಾನ್ಸ್ ಕಂಪನಿಗಳು ಗ್ರಾಹಕರ ಮೇಲೆ ನಡೆಸುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಖಾಸಗಿ ಫೈನಾನ್ಸ್ ಸಂಸ್ಥೆಯ ಜೊತೆಗೆ ಆರ್‌ಟಿಒ ಅಧಿಕಾರಿಗಳ ವಿರುದ್ಧ...

ಬಿಜೆಪಿ ಕಾರ್ಯಕರ್ತರ ಬೆನ್ನಿಗೆ ನಾವು ನಿಲ್ಲುತ್ತೇವೆ

ಚಿಕ್ಕಮಗಳೂರು: ಸಂತೋಷ್ ಕೋಟ್ಯಾನ್ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ. ಹಿಂದೆ ವಿದ್ಯಾರ್ಥಿ ಪರಿ?ತ್ತಿನಲ್ಲಿ ವಿವಿಧ ಜವಾಬ್ದಾರಿ ಹೊತ್ತು ಕೆಲಸ ಮಾಡಿದವರು. ಶ್ಯಾಮ್ ವಿ ಗೌಡ ಬಜರಂಗದಳದ ಹಾಸನ ವಿಭಾಗದ ಜವಾಬ್ದಾರಿ...

Related Articles

ನಿವೇಶನಕ್ಕೆ ಒತ್ತಾಯಿಸಿ ಹೋರಾಟ ವೇದಿಕೆಯಿಂದ ಪ್ರತಿಭಟನೆ

ಮೂಡಿಗೆರೆ: ನಿವೇನಕ್ಕಾಗಿ ಒತ್ತಾಯಿಸಿ ತಾಲೂಕಿನ ಗೋಣಿಬೀಡು ಗ್ರಾ.ಪಂ. ಎದುರು ಗುರುವಾರ ವಸತಿಗಾಗಿ ಹೋರಾಟ ವೇದಿಕೆಯ ಮುಖಂಡರು ...

ಚೌಳಹಿರಿಯೂರು ಭಾಗದಲ್ಲಿ ಚಿರತೆ ಕಾಟ

ಕಡೂರು: ತಾಲ್ಲೂಕಿನ ಚೌಳಹಿರಿಯೂರು ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಿದ್ದು ಜನ, ಜಾನುವಾರುಗಳು ಭೀತಿಯಿಂದ ಬದುಕುವಂತಾಗಿದೆ ಎಂದು...

ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ

ಚಿಕ್ಕಮಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಇಂಧನ ಮಾರುಕಟ್ಟೆಯಲ್ಲಿ ಭಾರೀ ಏರುಪೇರು ಉಂಟಾಗಿದ್ದು, ಚಿಕ್ಕಮಗಳೂರಿನಲ್ಲಿ...

ಚಲಿಸುತ್ತಿದ್ದಾಗಲೇ ಕಳಚಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಚಕ್ರ

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ಸಿನ ನಿರ್ವಹಣಾ ವೈಫಲ್ಯಕ್ಕೆ ಸಾಕ್ಷಿಯಾದ ಭೀಕರ ಘಟನೆಯೊಂದು...