Home namma chikmagalur ನಿಷೇಧಿತ ಪದ ಬಳಕೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಮನವಿ
namma chikmagalurchikamagalurHomeLatest News

ನಿಷೇಧಿತ ಪದ ಬಳಕೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಮನವಿ

Share
Share

ಚಿಕ್ಕಮಗಳೂರು: – ಸವಿತಾ ಸಮಾಜ ಸಂಬಂಧಿತ ನಿಷೇಧ ಪದ ಬಳಸುವವರ ವಿರು ದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಮಂದಿರ ಆರ್‍ಯ ನಯನಜ ಕ್ಷತ್ರೀಯ ಸಂಘದ ಮುಖಂಡ ರುಗಳು ಮಂಗಳವಾರ ಶಿರಸ್ತೇದಾರ್ ಹೇಮಂತ್‌ಕುಮಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ನಗರಾಧ್ಯಕ್ಷ ಸಿ.ಎಂ.ಯೋಗೀಶ್ ಮಾತನಾಡಿ ಹಲವು ದಶಕಗಳಿಂದ ಸವಿತಾ ಸ ಮಾಜವು ಜಾತಿ ನಿಂದನೆ, ಅಸ್ಪೃಶ್ಯತೆ ಸೇರಿದಂತೆ ತುಳಿತಕ್ಕೆ ಒಳಗಾಗುತ್ತಿದೆ. ಇದರಿಂದ ಸಮಾಜವು ಮುಖ್ಯ ವಾಹಿನಿಗೆ ಬರಲು ಪ್ರಯತ್ನಗಳು ನಿರಂತರವಾಗಿ ಸಾಗುತ್ತಲೇ ನಡೆಯುತ್ತಿದೆ ಎಂದರು.

ಇದಕ್ಕೆ ಪೂರಕವಾಗಿ ಬೆಂಕಿಗೆ ತುಪ್ಪ ಸುರಿಯುವಂತೆ ವಿವಿಧ ಕಾರಣಗಳಿಂದ ಸಂಬಂಧವಿಲ್ಲದ ವಿಷ ಯಗಳಿಗೆ ಬೇರೊಬ್ಬ ವ್ಯಕ್ತಿಯನ್ನು ನಿಂದಿಸುವ ಭರದಲ್ಲಿ ಸಮಾಜದ ನಿಷೇಧ ಪದವನ್ನು ಸಾರ್ವತ್ರಿಕ ವ್ಯಕ್ತಿ ಗಳು ಮತ್ತು ನಾಗರೀಕ ಸಮಾಜವನ್ನು ಕಟ್ಟುವ ಮುಂದಾಳತ್ವವನ್ನು ವಹಿಸುವ ರಾಜಕೀಯ ನಾಯಕರು, ಪ್ರಭಾವಿ ವ್ಯಕ್ತಿಗಳಿಗೆ ಈ ಪದ ಬಳಸುತ್ತಿದ್ದಾರೆ ಎಂದು ಹೇಳಿದರು.

ನಿಷೇಧ ಪದ ಬಳಕೆಯಿಂದ ಸಮುದಾಯವು ಸ್ವಾಭಿಮಾನದ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ ಹಾಗೂ ತುಳಿತಕ್ಕೆ ಒಳಗಾಗಿರುವ ಸಮುದಾಯದ ಪರವಾಗಿ ಪ್ರತಿನಿಧಿಸುವ ಹಾಗೂ ನಮ್ಮಂತ ಜನಾಂಗದ ಭರವಸೆಯ ಬೆಳಕಾಗಿರುವ ಅಧಿಕಾರಿಗಳು ಈ ಬಹುದೊಡ್ಡ ಸಮಸ್ಯೆಗೆ ಹಿತಶ್ರೀ ಹಾಡುವಂಥ ಕಠಿಣ ಕಾ ನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಶ್ರೀಧರ್, ನಗರ ಗೌರವಾಧ್ಯಕ್ಷರಾದ ಬಿ.ವೆಂಕಟೇಶ್, ಕೆ.ಟಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ಎನ್.ಸತೀಶ್, ಖಜಾಂಚಿ ಎನ್.ಗಿರೀಶ್, ಯುವವೇದಿಕೆ ಅಧ್ಯಕ್ಷ ಧನರಾಜ್ ಹಾಜರಿದ್ದರು.

Appeal for strict action against users of banned words

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....