Home namma chikmagalur chikamagalur ಮುಖ್ಯಮಂತ್ರಿಗಳಿಂದ ಸರ್ವವ್ಯಾಪಿ ಸರ್ವಸ್ಪರ್ಶಿ ಬಜೆಟ್
chikamagalurHomeLatest Newsnamma chikmagalur

ಮುಖ್ಯಮಂತ್ರಿಗಳಿಂದ ಸರ್ವವ್ಯಾಪಿ ಸರ್ವಸ್ಪರ್ಶಿ ಬಜೆಟ್

Share
????????????????????????????????????
Share

ಚಿಕ್ಕಮಗಳೂರು:  ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಇಂದು ದಾಖಲೆಯ ೧೭ ನೇ ಬಜೆಟ್ ಮಂಡಿಸಿದ್ದು ಸರ್ವವ್ಯಾಪಿ ಸರ್ವಸ್ಪರ್ಶಿಯಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೂಲಭೂತ ಸೌಕರ್ಯಕ್ಕೆ ಹಣ ಒದಗಿಸಲಾಗಿದೆ. ಆಡಂಬರದ ಹೇಳಿಕೆಗಳಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ತರುವಂತಹ ಬಜೆಟ್ ಮಂಡಿಸಿದ್ದಾರೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ಜಿಲ್ಲೆಗೆ ಪ್ರಮುಖವಾಗಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ರೋಪ್ ವೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಚಿಕ್ಕಮಗಳೂರು ಬೇಲೂರು ಹಾಗೂ ಬೇಲೂರು-ಹಾಸನ ರೈಲ್ವೆ ಮಾರ್ಗದ ಕಾಮಗಾರಿಗಳ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ಹಾಗೂ ಶೇ.೫೦ರಷ್ಟು ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಸಾರಿಗೆ ಇಲಾಖೆ ವತಿಯಿಂದ ಚಿಕ್ಕಮಗಳೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣಕ್ಕೆ ರೂ.೧೨ ಕೋಟಿ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯದ ಉನ್ನತೀಕರಣ ಹಾಗೂ ಜಿಲ್ಲೆಯ ಕೆರೆಗಳ ಏರಿ ಹಾಗೂ ಚಾನಲ್ ಪುನಶ್ವೇತನ ಕಾಮಗಾರಿ ಹಾಗೂ ಕಡೂರು ತಾಲ್ಲೂಕಿನ ೨೫ ಕೆರೆಗಳ ಕೆರೆ ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿಗಳು ಸರ್ವ ವರ್ಗದ ಜನರಿಗೂ ತಲುಪಿಸುವ ಜನಪರ ಹಾಗೂ ರೈತಪರ ಬಜೆಟ್ ಮಂಡಿಸಿದ್ದಾರೆಂದು ಅವರು ತಿಳಿಸಿದ್ದಾರೆ.

An all-encompassing budget from the Chief Minister

Share

Leave a comment

Leave a Reply

Your email address will not be published. Required fields are marked *

Don't Miss

ಸಾವಿನ ಹೆಣ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಏನಾದರೂ...

ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು

ಚಿಕ್ಕಮಗಳೂರು: ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ಸುಮಾರು 2.25 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ....

Related Articles

ಕರ್ನಾಟಕ ರಾಜ್ಯ ಬಜೆಟ್ ರಾಜಕೀಯ ಲಾಭಕ್ಕಾಗಿ ರೂಪಿಸಲಾದ ಬಜೆಟ್

ಚಿಕ್ಕಮಗಳೂರು: ರಾಜ್ಯದ ಜನರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ರಾಜ್ಯ ಬಜೆಟ್ ೨೦೨೬ ಅನ್ನು ನೋಡಿದಾಗ,...

ಚಿಕ್ಕಮಗಳೂರಿಗೆ ಬಜೆಟ್‌ನಲ್ಲಿ ಹಳೆಯ ಯೋಜನೆಗಳ ಪುನರಾವರ್ತನೆ

ಚಿಕ್ಕಮಗಳೂರಿಗೆ ಈ ಬಜೆಟ್‌ನಲ್ಲಿ ಹಳೆಯ ಯೋಜನೆಗಳ ಪುನರಾವರ್ತನೆ ಮಾತ್ರ ಮಾಡಲಾಗಿದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ...

ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದೆ ಅಂಗಡಿ ಬೀಗ

ಚಿಕ್ಕಮಗಳೂರು: ನಗರದ ವರ್ತಕರು ಅಧಿಕೃತ ಶುಲ್ಕ ಪಾವತಿಸಿ ನಗರಸಭೆಯಿಂದ ನಿಗದಿತ ಉದ್ದಿಮೆ ಪರವಾನಗಿ ಪಡೆಯುವ ಮೂಲಕ...

ʻಮುಖ್ಯಮಂತ್ರಿ ಸೌರ ಕೃಷಿ ಯೋಜನೆʼಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಶ್ಲಾಘನೆ

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ʻಮುಖ್ಯಮಂತ್ರಿ ಸೌರ ಕೃಷಿ ಯೋಜನೆʼ ಎಂಬ ಹೊಸ ಕಾರ್ಯಕ್ರಮವನ್ನು ಘೋಷಿಸುವ ಮೂಲಕ...