Home namma chikmagalur chikamagalur ಸುಲಿಗೆಕೋರರು ಟೆಂಟ್ ಹಾಕಿ ವಸೂಲಿಗೆ ಬರುತ್ತಿದ್ದಾರೆ ! ಎಚ್ಚರಿಕೆ, ಎಚ್ಚರಿಕೆ
chikamagalurCrime NewsHomeLatest Newsnamma chikmagalur

ಸುಲಿಗೆಕೋರರು ಟೆಂಟ್ ಹಾಕಿ ವಸೂಲಿಗೆ ಬರುತ್ತಿದ್ದಾರೆ ! ಎಚ್ಚರಿಕೆ, ಎಚ್ಚರಿಕೆ

Share
Share

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿತ್ಯ ವಸೂಲಿ ಮಾಡಲು ಈಗಾಗಲೇ ಟೆಂಟ್ ಸಮೇತ ಜಗಮಗಿಸುವ ಲೈಟ್ ಹಾಕಿ ಕೊಂಡು ಕೈಯಲ್ಲಿ ಲಾಠಿ ಹಿಡಿದುಕೊಂಡು ಬರುತ್ತಿದ್ದಾರೆ, ಬರುತ್ತಿದ್ದಾರೆ ಎಚ್ಚರ,ಎಚ್ಚರ .

ಮಲೆನಾಡಿನಲ್ಲಿ ಆನೆ ಕಾಟ, ಕಾಡು ಕೋಣಗಳ ಜೊತೆಗೆ ಹುಲಿ,ಚಿರತೆಗಳ ಹಾವಳಿ ಬಯಲು ಭಾಗದಲ್ಲಿ 24×7 ಜನರಿಂದ ವಸೂಲಿ ಮಾಡಲು ನಾಡ ಪ್ರಾಣಿಗಳು ಹಿಂಡು, ಹಿಂಡಾಗಿ ವಸೂಲಿ ಕೋರರು ಬಂದಿದ್ದಾರೆ ಎಚ್ಚರ,ಎಚ್ಚರ .

ಜಿಲ್ಲೆಯಲ್ಲಿ ಈಗಾಗಲೇ ಅಜ್ಜಂಪುರ ತಾಲ್ಲೂಕಿನ ಹಿರೇಕಾನವಂಗಲದ ಬಳಿ ನಾಲ್ಕು ವರ್ಷಗಳಿಂದ ವಸೂಲಿ ದಂಧೆ ಹೆಗ್ಗಿಲ್ಲದೆ ನಡೆಸುತ್ತಿದ್ದಾರೆ.ಇಲ್ಲಿ ಸ್ಥಳೀಯರು ಓಡಾಡಲು ಸರ್ವೀಸ್ ರಸ್ತೆ ಬಿಟ್ಟಿಲ್ಲ .ಈ ಬಗ್ಗೆ ಇದುವರೆಗೂ ಯಾರೂ ಪ್ರಶ್ನೆ ಮಾಡದಿರುವುದು ವಸೂಲಿಕೋರರಿಗೆ ವರದಾನವಾಗಿದೆ.ಸ್ಥಳೀಯ ಜನ ವಾಹನಗಳಲ್ಲಿ ಓಡಾಡುವುದರಿಂದ ಜೇಬಿಗೆ ಕೈ ಹಾಕಿ ಹಣ ಖಾಲಿ ಮಾಡಿ ಕೊಳ್ಳುತ್ತಿದ್ದಾರೆ.

ಈಗಾಗಲೇ ಸಖರಾಯಪಟ್ಟಣದ ಸಮೀಪದಲ್ಲಿ ವಸೂಲಿಕೋರರು ದೊಡ್ಡ,ದೊಡ್ಡ ಬಿಲ್ಡಿಂಗ್ ಕಟ್ಟಿದ್ದಾರೆ ಜೊತೆಗೆ ಟೋಲ್ ಗೇಟ್ ನಿರ್ಮಾಣ ಮಾಡಿ ಜಗಮಗಿಸುವ ಲೈಟ್ಸ್ ಹಾಕಿ ಕೊಂಡು ವಸೂಲಿಗೆ ರೆಡಿಯಾಗಿದ್ದಾರೆ.

ಸಖರಾಯಪಟ್ಟಣದ ಟೋಲ್ ಗೇಟ್ ಬಳಿ ಕೂಡಾ ಸ್ಥಳೀಯ ಜನರಿಗೆ ಸರ್ವೀಸ್ ರಸ್ತೆ ಬಿಡದಿರುವುದು ನಿತ್ಯ ವಸೂಲಿಗೆ ಅನುಕೂಲ ಮಾಡಿಕೊಂಡಿರುವುದು ಸ್ಥಳೀಯರು ಪ್ರಶ್ನೆ ಮಾಡದಿದ್ದರೆ ವಸೂಲಿ ಕೋರರಿಗೆ ದಾರಿ ಮಾಡಿ ಕೊಟ್ಟಂತೆ ಆಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಮೂಡಿಗೆರೆ ಸಮೀಪ ಪೂರ್ಣ ಗೊಂಡಿಲ್ಲ ಹೀಗಾಗಿ ಟೋಲ್ ನವರಿಗೆ ಬಾಯಿ ಕುಕ್ಕೆ ಹಾಕಿದಂತೆ ಆಗಿದೆ.ರಸ್ತೆ ಕಾಮಗಾರಿ ಮುಗಿಯುವ ಮುಂಚೆ ಬಾಯಿ ಕುಕ್ಕೆ ಬಿಚ್ಚಿಕೊಂಡು ವಸೂಲಿಗೆ ಟೊಂಕ ಕಟ್ಟಿಕೊಂಡು ನಿಲ್ಲುವುದು ಖಚಿತ.

ಸ್ಥಳೀಯರು ಈಗಲೇ ಎಚ್ಚೆತ್ತು ಕೊಂಡು ಸಭೆ ಮಾಡಿ ಸರ್ವೀಸ್ ರಸ್ತೆ ಬಿಡಿಸಿ ಕೊಳ್ಳದಿದ್ದರೆ ಮುಂದೆ ವಸೂಲಿ ಕೋರರು ಜೇಬಿಗೆ ಕೈ ಕಾಕಿ ಕಾಸು ಕಿತ್ತು ಕೊಳ್ಳುವುದು ಖಚಿತ.ಜನಪ್ರತಿನಿಧಿಗಳು ನಮಗೂ ಇದಕ್ಕೂ ಸಂಬಂಧ ವಿಲ್ಲ ಎಂದು ಟೋಲ್ ನವರ ಬಳಿ ವ್ಯವಹಾರ ಮಾಡಿಕೊಳ್ಳ ಬಹುದು.ಇನ್ನೂ ಸಂಘಟನೆಗಳು ಸಮಸ್ಯೆ ಅರಿತು ಕೊಳ್ಳುವಲ್ಲಿ ಸಮಯ ಮೀರಿ ಹೋಗುತ್ತದೆ.

ಸಖರಾಯಪಟ್ಟಣ ಮತ್ತು ಸುತ್ತ ಮುತ್ತಲಿನ ಹಳ್ಳಿಯ ಜನರು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡು ಸರ್ವೀಸ್ ರಸ್ತೆ ನಿರ್ಮಿಸದೆ ಟೋಲ್ ಗೇಟ್ ಕಟ್ಟಿರುವುದನ್ನು ಮುಚ್ಚಿದರೆ ತಾನು ತಾನಾಗಿಯೇ ಸಮಸ್ಯೆ ಬಗೆಹರಿಯುತ್ತದೆ.ವಸೂಲಿ ಕೋರರನ್ನು ತಡೆಯುವ ಜವಾಬ್ದಾರಿ ಎಲ್ಲರಿಗೂ ಸೇರಿದ್ದು ಈ ಬಗ್ಗೆ ಸ್ಥಳೀಯರು ತಕ್ಷಣ ಸಭೆ ಕರೆದು ಸಮಸ್ಯೆ ಬಗೆಹರಿಸಲು ಮುಂದಾಗ ಬೇಕಿದೆ.

The extortionists are setting up tents and coming to collect!

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...