Home namma chikmagalur chikamagalur ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪ್ರಕರಣ ಪತ್ತೆ
chikamagalurHomeLatest Newsnamma chikmagalur

ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪ್ರಕರಣ ಪತ್ತೆ

Share
Share

ಕೊಪ್ಪ: ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ದಂಧೆಯನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ.

ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಂಡಿಗಡಿ ಕಡೆಯಿಂದ ಹರಿಹರಪುರದ ಕಡೆಗೆ ಮರಳು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್‌ಐ ಮತ್ತು ಸಿಬ್ಬಂದಿ, ತೀರ್ಥಹಳ್ಳಿ ತಾಲೂಕಿನ ಚಕ್ಕೊಡಬೈಲು ಗ್ರಾಮದ ಕೆಳಕೊಪ್ಪ ನಿವಾಸಿ ನಂದೀಶ್ ಕೆ.ಆರ್ (38) ಎಂಬಾತನನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.

ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಕಾರಂಗಿಯ ತುಂಗಾ ನದಿಯಿಂದ ಮರಳನ್ನು ಕಳ್ಳತನ ಮಾಡಿ, ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಪೊಲೀಸರು ಪಂಚರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದಾಗ ಟ್ರ್ಯಾಕ್ಟರ್‌ನಲ್ಲಿ ಮರಳು ಇರುವುದು ದೃಢಪಟ್ಟಿದೆ.

ದಾಳಿಯ ವೇಳೆ ಕೃತ್ಯಕ್ಕೆ ಬಳಸಿದ, ಟ್ರೈಲರ್ ಹಿಂಭಾಗದಲ್ಲಿ ‘ಕೆಳಕೊಪ್ಪ’ ಎಂದು ಬರೆದಿರುವ ಕೆಂಪು ಬಣ್ಣದ ಮಹೇಂದ್ರಾ ಕಂಪನಿಯ ಟ್ರ್ಯಾಕ್ಟರ್ (ಎಂಜಿನ್ ಸಂಖ್ಯೆ: KA 14 TA 3669, ಟ್ರೈಲರ್ ಸಂಖ್ಯೆ: KA 14 TA 3670) ಮತ್ತು ಅದರಲ್ಲಿದ್ದ ಸುಮಾರು 7,500 ರೂ ಮೌಲ್ಯದ 3 ಟನ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಹರಿಹರಪುರ ಪೊಲೀಸ್‌ ಠಾಣೆಯಲ್ಲಿ ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.A person

was found illegally transporting sand in a tractor.

Share

Leave a comment

Leave a Reply

Your email address will not be published. Required fields are marked *

Don't Miss

ಸಾವಿರಾರು ಮಂದಿಯಿಂದ ಬೃಹತ್ ಈದ್‌ಮಿಲಾದ್ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಪೈಗಂಬರ್ ೧೫೦೧ನೇ ಜನ್ಮದಿನದ ಅಂಗವಾಗಿ ಆಚರಿಸಲಾದ ಈದ್‌ಮಿಲಾದ್ ಹಬ್ಬದ ಪ್ರಯುಕ್ತ ನಗರದಲ್ಲಿ ಬುಧವಾರ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಬೃಹತ್ ಮೆರವಣಿಗೆ ನಡೆಸಿದರು. ನಗರದ ಅಂಡೇಛತ್ರದಿಂದ ಆರಂಭವಾದ...

ಆರನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಎಐಟಿಯುಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು:  ಆರನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯ ರು ಮತ್ತು ಸಹಾಯಕಿಯರ ಫೆಡೆರೇಷನ್‌ನ ಜಿಲ್ಲಾ ಘಟಕವು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ನೂರಾ ರು ಮಹಿಳೆಯರು ಮಂಗಳವಾರ ಪ್ರತಿಭಟಿಸುವ ಮೂಲಕ ಭರವಸೆ...

Related Articles

ಮಾಜಿ ಸರ್ಜನ್  ಕುಮಾರ್ ನಾಯಕ್ ಇನ್ನಿಲ್ಲ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಡ ಜನರಲ್ ಆಸ್ಪತ್ರೆಯ ಮಾಜಿ ಸರ್ಜನ್ ಕುಮಾರ್ ನಾಯಕ್ (67) ರಾತ್ರಿ...

ತಹಸೀಲ್ದಾರ್ ನಿಲುವಿನ ವಿರುದ್ಧ ಮಾಜಿ ಶಾಸಕ ಕುಮಾರಸ್ವಾಮಿ ಅಸಮಾಧಾನ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರು ಸಾರ್ವಜನಿಕರೊಂದಿಗೆ ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,...

ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು: ಈಜಲು ತೆರಳಿದ್ದ 23 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ...

ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿಯನ್ನು ಕತ್ತು ಹಿಸುಕಿ ಹಾಗೂ ಮೂಗು–ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ...