Home namma chikmagalur ಅತ್ತು ಕರೆದು ಔತಣಕೂಟ ಬುರುಡೆ ಮಂಜುನಾಥ್ ಗೆ ಪಟ್ಟ
namma chikmagalurajjampuraHome

ಅತ್ತು ಕರೆದು ಔತಣಕೂಟ ಬುರುಡೆ ಮಂಜುನಾಥ್ ಗೆ ಪಟ್ಟ

Share
Share

ಅಜ್ಜಂಪುರ: ಸಾಹಿತ್ಯ ಪರಿಷತ್ತಿನಲ್ಲಿ ಜೋಷಿಗಳು ಹೆಚ್ಚಾಗುತ್ತಿದ್ದಾರೆ ಎಂಬುದಕ್ಕೆ ಬುರುಡೆ ಮಂಜುನಾಥ್ ಬೇಡ,ಬೇಡಾ ನನಗೆ ಹುಷರಿಲ್ಲಾ ಎಂದು ಪತ್ರ ಬರೆದು ಬೇಡಿದರೂ ಇಲ್ಲ ನೀನೆ ಬೇಕು ಎಂದು ” ಗಂಟು” ಬಿದ್ದಿರುವುದರ ಗುಟ್ಟು ಏನು ಎಂಬ ಪ್ರಶ್ನೆ ಮಾತ್ರ ನಿಗೂಢವಾಗಿದೆ.

ಅಜ್ಜಂಪುರ ಎಂದರೆ ಕಲಾವಿದರ ನಾಡು,ನಾಟಕ,ಸಿನಿಮಾದವರ ತವರೂರು,ಸಂಘಟಕರ ಬೀಡು ಎಂಬುದರ ಜೊತೆಗೆ ಊರಿನ ಕೆಲಸದ ವಿಚಾರ ಬಂದರೆ ಪಕ್ಷ, ಜಾತಿ,ಮತ ಬಿಟ್ಟು ಒಗ್ಗಟ್ಟಾಗಿ ನಿಲ್ಲುತ್ತಾರೆ .ಆದರೆ ಊರಿನ ಬಡ ಜನರಿಗೆ ಮೋಸ ಮಾಡಿದ್ದ ಎನ್ನುವ ಮಂಜುನಾಥ್ ನನ್ನು ಮೆರವಣೆಗೆ ಮಾಡಿ ಕಣ್ಣು ತುಂಬಿ ಕೊಳ್ಳಲು ಹಾತೊರೆಯುತ್ತಿರುವುದು ಮಾತ್ರ ವಿಪರ್ಯಾಸ ಎನ್ನಲಾಗುತ್ತದೆ.

ಜನತಾದಳದ ಮುಖಂಡ ಶಿವಾನಂದ್ ಮತ್ತು ಪತ್ರಕರ್ತ ವೆಂಕಟೇಶ್ ತೀವ್ರವಾಗಿ ವಿರೋಧ ಮಾಡಿದವರು ಮೆತ್ತಗಾಗಿದ್ದಾರೆ ಎಂದರೆ ಮಂಜುನಾಥ್ ನ ಮಹಿಮೆ ಅಷ್ಟೊಂದು ಪ್ರಭಾವ ಇದೆ ಎನ್ನಿಸುತ್ತಿದೆ.ಸ್ವತಹ ಮಂಜುನಾಥ್ ನೇ ನನಗೆ ಕಾಲು ನೋವು ನಾನು ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದು ಬರುವುದಿಲ್ಲ ಎಂದವನಿಗೆ ಮೂರು ದಿನದಲ್ಲಿ ಯಾವ “ಟಾನಿಕ್” ಕುಡಿಸಿರಬಹುದು.

ಲಂಕೇಶ್ ರ ಕಟ್ಟಾ ಅನುಯಾಯಿ ವೆಂಕಟೇಶ್ ಗೆ ಯಾವ ರೀತಿ ಉಗಿಯ ಬೇಕು ಮಾನ ಮರ್ಯಾದೆ ಬಿಟ್ಟು ಇಂತವನ ಹೊತ್ತು ಮೆರೆಯಲು ಹೊರಟಿರುವುದು ನೋಡಿದರೆ ಮುಂದಿನ ಸಲ ಜಿಲ್ಲಾ ಅಧ್ಯಕ್ಷ ಸ್ಥಾನ ಖಚಿತ ಎಂದು ಕಾಣುತ್ತದೆ.ಬಡ ವ್ಯಾಪಾರಿಗಳಿಗೆ ಸ್ವಂತ ಅತ್ತಿಗೆಗೆ ಬತ್ತಿ ಇಟ್ಟ ಮಂಜುನಾಥ್ ಪರ ನಿಂತಿರುವುದು ನೋಡಿದರೆ ಬೌದಿಕ ದಿವಾಳಿತನ ಎದ್ದು ಕಾಣುತ್ತದೆ.

ನ್ಯೂಸ್ ಕಿಂಗ್ ನಲ್ಲಿ ಬುರುಡೆ ಮಂಜುನಾಥನ ಸುದ್ದಿ ಪ್ರಕಟಿಸಲಾಗಿತ್ತು ಇದು ಇಲ್ಲಿನ ಬರಹಗಾರ, ಸಾಹಿತಿಗಳ ,ಸಂಘಟಕರ ಅಭಿಪ್ರಾಯವಾಗಿತ್ತು.ನಡೆಯಲಾರದ ಮಂಜುನಾಥ್ ಎದ್ದು ಕುಳಿತಿರುವುದು ನೋಡಿದರೆ ” ಗಂಟಿ”ನ ಘಾಟಿ ವಾಸನೆ ಬರುತ್ತಿದೆ.ಈ ಬಗ್ಗೆ ಎಸ್.ಐ.ಟಿ ರಚನೆ ಮಾಡಿದರೂ ಧರ್ಮಸ್ಥಳದ ಬುರುಡೆ ಕೇಸ್ ಹಳ್ಳ ಹತ್ತಿದಂತೆ ಮಂಜುನಾಥನ ಸಮ್ಮೇಳನಕ್ಕೆ ಕ್ಲೀನ್ ಚಿಟ್ ಸಿಗುತ್ತದೆ.

ರಾಜ್ಯ ಮಟ್ಟದಲ್ಲಿ ಜೋಷಿ ಪುರಾಣದಂತೆ ಅಜ್ಜಂಪುರ ಸಾಹಿತ್ಯ ಪರಿಷತ್ತು ಸಾಗುತ್ತಿರುವುದು ವಿಪರ್ಯಾಸವೆ ಸರಿ.ಸಾಹಿತ್ಯ ಪರಿಷತ್ತು ನೀಡುತ್ತಿರುವ ಹೊಸ,ಹೊಸ ಪ್ರಶಸ್ತಿಗಳು,ಬಿರುದುಗಳಲ್ಲಿ ಯಾವ,ಯಾವ ಪ್ರಶಸ್ತಿ ಮತ್ತು ಬಿರುದುಗಳು ಪಡೆಯಲು ಹಾತೊರೆದು ಹಾದಿ ರಂಪ,ಬೀದಿ ರಂಪವಾಗಿರುವ ಸಮ್ಮೇಳನಕ್ಕೆ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸುವ ಮಂಜುನಾಥ್ ಗೆ ಯಾವ ಬಿರುದು ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿ ಸಮ್ಮೇಳನ ಆಯೋಜಿಸಿದಂತೆ ಕಾಣುತ್ತದೆ. ಬಡವರ ಹಣ ನುಂಗಿದ ಮಂಜುನಾಥ್ ಗೆ ಜೈ, ಜೈ ಎನ್ನುವವರ ಬಗ್ಗೆ ದಿಗಿಲು ಉಂಟಾಗಿದೆ.

A dinner party was called for Burude Manjunath

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...