Home namma chikmagalur chikamagalur ಶಾಸಕರುಗಳ ಪ್ರಚಾರದ ರಾಜೀನಾಮೆ ಠುಸ್ ಪಟಾಕಿ
chikamagalurHomeLatest Newsnamma chikmagalur

ಶಾಸಕರುಗಳ ಪ್ರಚಾರದ ರಾಜೀನಾಮೆ ಠುಸ್ ಪಟಾಕಿ

Share
Share

ಚಿಕ್ಕಮಗಳೂರು: ಕಾಡನೆಗಳ ಉಪಟಾಳವನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಅರಣ್ಯ ಇಲಾಖೆಯ ಬಗ್ಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ,ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಪತ್ರಿಕಾಗೋಷ್ಠಿ ನಡೆಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದರು ಆದರೆ ಈ ಬಗ್ಗೆ ಸರ್ಕಾರ ಯಾವುದಕ್ಕೂ ಸ್ಪಂದಿಸಲಿಲ್ಲಾ ಇದರಿಂದ ಕೆರಳಿದ ನಯನಾ ಇಂದು ಬೆಂಗಳೂರಿಗೆ ತೆರಳಿ ರಾಜೀನಾಮೆ ನೀಡುವೆ ನಾವು ಜನರ ಕಷ್ಟಕ್ಕೆ ಸ್ಪಂದಿಸ ಬೇಕು ಎಂದು ಪುಕ್ಕಟ್ಟೆ ಪ್ರಚಾರ ಪಡೆದಿದ್ದಾರೆ ಎಂದು ಜನರಾಡಿ ಕೊಳ್ಳುತ್ತಿದ್ದಾರೆ.

ರಾಜೀನಾಮೆ ನೀಡುವುದಕ್ಕೂ ಕೆಲ ನಿಯಮಗಳಿವೆ ರಾಜೀನಾಮೆ ನೀಡಿದರು ಸಕಾರಣ ಕೊಡಬೇಕು. ನಯನಾ ಮೋಟಮ್ಮ ಸ್ಫೀಕರ್ ಕೈಗೆ ನೇರವಾಗಿ ರಾಜೀನಾಮೆ ಪತ್ರ ನೀಡಬೇಕು ನಿರ್ದಿಷ್ಟ ಕಾರಣ ತಿಳಿಸ ಬೇಕು ಇವರ ರಾಜೀನಾಮೆ ಪತ್ರ ಪ್ರಬಂಧ ತರಹ ಬರೆದಿರುವುದು ನೋಡಿದರೆ ಇದು ಪ್ರಚಾರದ ಉದ್ದೇಶ ಎನ್ನಿಸುತ್ತದೆ.ಜೊತೆಗೆ ತಾನೇ,ಸ್ಪೀಕರ್ ಕೈಗೆ ರಾಜೀನಾಮೆ ನೀಡ ಬೇಕು ಆದರೆ ಸ್ಪೀಕರ್ ಅವರ ಅವರ ಆಪ್ತ ಕಾರ್ಯದರ್ಶಿ ಕೈಗೆ ಕೊಟ್ಟಿರುವುದು ಅಷ್ಟೊಂದು ತುರ್ತು ಇದ್ದಾಗ ಸ್ಪೀಕರ್ ಇರವ ಬಳಿ ಹೋಗಿ ಅವರ ಕೈಗೆ ನೀಡಬಹುದಿತ್ತು.

ಮತದಾರರನ್ನು ಮರುಳು ಮಾಡುವುದಿದ್ದರೆ ಆನೆಗಳ ಹಿಂಡು ಬಾರದಂತೆ ತಡೆಯುವ ಬಗ್ಗೆ ಜನರ ಜೊತೆಗೆ ಪ್ರತಿಭಟಿಸ ಬಹುದಿತ್ತು.ಮೂಡಿಗೆರೆ ಕ್ಷೇತ್ರದಲ್ಲಿ ನಯನಾ ವಿರುದ್ದ ಕಾಂಗ್ರೆಸ್ ಮುಖಂಡರು ತಿರುಗಿ ಬಿದ್ದಿದ್ದಾರೆ ಹೀಗಾಗಿ ಹೊಸ ಡ್ರಾಮಾ ಶುರುಹಚ್ಚಿಕೊಂಡಿದ್ದಾರೆ ಎಂದು ಹೇಳುವುದಕ್ಕೆ ಸಾಕ್ಷಿ ಸಮೇತವಾಗಿ ಸಿಕ್ಕಿಕೊಂಡಿದ್ದಾರೆ.ಇನ್ನೂ ಟಿ.ಡಿ.ರಾಜೇಗೌಡ ಮತ್ತು ತಮ್ಮಯ್ಯ ಮಾತ್ರ ರಾಜೀನಾಮೆ ಬಗ್ಗೆ ಪತ್ರಿಕಾ ಹೇಳಿಕೆಗೆ ಸೀಮಿತರಾಗಿದ್ದಾರೆ.

ಜನ ಮರಳೋ,ಜಾತ್ರೆ ಮರಳೋ ___ಎಂಬ ಜನರಾಡುವ ಮಾತುಗಳು ನೆನಪಾಗುತ್ತಿವೆ.ಅಯ್ಯೋ ರಾಜೀನಾಮೆ ಎಂಬ ಹೈಡ್ರಾಮಾ ಮಾತ್ರ ಅವರ ಹಿಂಬಾಲಕರು ನಮ್ಮ ಶಾಸಕರ ನೋಡಿ ಖುಷಿ ಪಟ್ಟರೆ ಅವರ ವಿರೋಧಿಗಳಿಗೆ ಅಸ್ತ್ರ ಸಿಕ್ಕಿದೆ.ಆಡಳಿತಾರೂಢ ಸರ್ಕಾರದ ಶಾಸಕರ ರಾಜೀನಾಮೆ ಅಂಗೀಕಾರವಾಗುವುದು ಸಾಧ್ಯವೇ? ಪ್ರಚಾರಕ್ಕಾಗಿ, ಜನರ ದಿಕ್ಕು ತಪ್ಪಿಸುವ ಬದಲು ಜನರ ಜೊತೆ ಹೋರಾಟ ಮಾಡಿದ್ದರೆ ಒಪ್ಪಬಹುದಿತ್ತು.

MLAs’ resignation-as-campaign-tactic turns out to be a damp squib

 

Share

Leave a comment

Leave a Reply

Your email address will not be published. Required fields are marked *

Don't Miss

ಪ್ರತಿಭಟನೆಗೆ ಅಪ್ರಾಪ್ತ ಮಕ್ಕಳ ಬಳಕೆ – ಸಂಘಟಕನ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಕೈಗಾರಿಕಾ ಮಾಲಿನ್ಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಪ್ರಾಪ್ತ ಮಕ್ಕಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡ ಆರೋಪದಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.18ರಂದು ರಾತ್ರಿ 8.30ಕ್ಕೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪರವಾಗಿ...

ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದ ಚಾಲಕ ಸಾವು

ಚಿಕ್ಕಮಗಳೂರು: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಹೃದಯಾಘಾತಕ್ಕೊಳಗಾದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೊಪ್ಪ ತಾಲೂಕಿನ...

Related Articles

ಶ್ರೀಗಂಧದ ಕೋಟೆ “ಬಂದ್” ಕಣ್ಣು ಮುಚ್ಚಿರುವ ಅರಣ್ಯ ಇಲಾಖೆ

ತರೀಕೆರೆ: ಕರ್ನಾಟಕವನ್ನು ಶ್ರೀ ಗಂಧದ ನಾಡು ಎಂದು ಕರೆಯಲಾಗುತಿತ್ತು ಅಷ್ಟೊಂದು ಶ್ರೀ ಗಂಧ ನೈಸರ್ಗಿಕವಾಗಿ ಬೆಳೆಯುತಿತ್ತು....

ಶಿರವಾಸೆ ಗ್ರಾಮದಲ್ಲಿ ಕುಡಿತದ ಅಮಲಿನಲ್ಲಿ ಮನೆಗೆ ಬೆಂಕಿ

ಚಿಕ್ಕಮಗಳೂರು: ಇಲ್ಲಿಗೆ ಸಮೀಪದ ಶಿರವಾಸೆ ಗ್ರಾಮದಲ್ಲಿ ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಮನೆಗೆ ಬೆಂಕಿ ಹಚ್ಚಿದ ಪರಿಣಾಮ...

ಆನ್‌ಲೈನ್ ಗೇಮಿಂಗ್ ಆಮಿಷ; 1621 ಯುಆರ್‌ಎಲ್‌ಗಳ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಹೆಚ್ಚಿನ ಲಾಭ ಹಾಗೂ ರಿಟರ್ನ್ಸ್ ನೀಡುವುದಾಗಿ ಆಮಿಷವೊಡ್ಡಿ ಯುವಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿರುವ...

APK ಫೈಲ್ ಮೂಲಕ ಮೊಬೈಲ್ ಹ್ಯಾಕ್; 1.85 ಲಕ್ಷ ರೂ. ಹಣ ವರ್ಗಾವಣೆ

ಚಿಕ್ಕಮಗಳೂರು: APK ಫೈಲ್ ಮೂಲಕ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು UPI ಮೂಲಕ...