ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಇಬ್ಬರ ಸಾವಿಗೆ ಕಾರಣವಾಗಿದ್ದು ಜನ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಆನೆಗಳ ಹಿಂಡನ್ನು ಭದ್ರಾ ಅಭಯಾರಣ್ಯದತ್ತ ಓಡಿಸಲು ತಯಾರಿ ನಡೆದಿದೆ .
ಬೇಲೂರು ತಾಲ್ಲೂಕಿನಲ್ಲಿ ಬೀಡು ಬಿಟ್ಟ ಆನೆಯ ಹಿಂಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಡೆ ಓಡಿಸುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರ ಜೊತೆಗೆ ಜನ ಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ.ಅದರಿಂದ ಚಿಕ್ಕಮಗಳೂರು ಶಾಸಕರು ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.
ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮತ್ತು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹಾಗು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕೇವಲ ಓರ್ವ ಕಾಂಗ್ರೆಸ್ ಶಾಸಕ ಇದ್ದು ಸರ್ಕಾರದಿಂದ ಆದೇಶ ಮಾಡಿಸಿರುವಾಗ ಚಿಕ್ಕಮಗಳೂರು ಜಿಲ್ಲೆಯ ಲ್ಲಿ ಐದು ಜನ ಆಡಳಿತಾರೂಢ ಶಾಸಕರು ರಾಜೀನಾಮೆ ಎಂಬ ಹೈಡ್ರಾಮಾ ಮಾಡುವ ಬದಲು ರಾಜೀನಾಮೆ ನೀಡುವ ನಾಟಕ ಜಿಲ್ಲೆಯ ಜನರ ದೌರ್ಭಾಗ್ಯ ಎನ್ನುತ್ತಿದ್ದಾರೆ.
ಅರಣ್ಯ ಇಲಾಖೆಗೆ ಸಾಮಾನ್ಯ ಜ್ಞಾನ ಇಲ್ಲ ಎನ್ನುವುದಕ್ಕೆ ಆನೆ ಬಹಳ ಸೂಕ್ಷ್ಮ ಜೀವಿ ಅವುಗಳನ್ನು ಭದ್ರಾ ಅಭಯಾರಣ್ಯದಲ್ಲಿ ಕೂಡಿ ಹಾಕಲು ಸಾಧ್ಯವಿಲ್ಲ ಹೀಗಿದ್ದರೂ ಆನೆ ಹಿಂಡನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುತ್ತೇವೆ ಎಂಬ ಭ್ರಮೆಯಲ್ಲಿ ಇರುವುದು ಇದಕ್ಕೆ ಸರಿಯಾಗಿ ರಾಜೀನಾಮೆ ಎಂಬ ನಾಟಕ ಮಾಡುತ್ತಿರುವ ಜನಪ್ರತಿನಿಧಿಗಳ ನಾಟಕ ಆಡುತ್ತಿರುವುದು ಏಕೆ?
A high-drama resignation by an MLA over the menace of wild elephants?
Leave a comment