Home namma chikmagalur chikamagalur ಪರೀಕ್ಷೆಯಲ್ಲಿ ಅನುತ್ತೀರ್ಣದ ಭಯಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
chikamagalurCrime NewsHomeLatest Newsnamma chikmagalur

ಪರೀಕ್ಷೆಯಲ್ಲಿ ಅನುತ್ತೀರ್ಣದ ಭಯಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Share
Share

ಚಿಕ್ಕಮಗಳೂರು: ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಭಯದಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿಯನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ರಕ್ಷಿತ್ (19) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.

ನವೆಂಬರ್ 7ರಂದು ಚಿಕ್ಕಮಗಳೂರಿನ ಸರ್ಕಾರಿ ವೃತ್ತಿಪರ ಕಾಲೇಜಿನ ಬಾಲಕರ ವಸತಿ ನಿಲಯದಿಂದ ರಕ್ಷಿತ್ ನಾಪತ್ತೆಯಾಗಿದ್ದರು. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಇದೀಗ ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಸಮೀಪದ ನಿರ್ಜನ ಪ್ರದೇಶದಲ್ಲಿ ರಕ್ಷಿತ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತೇನೆ ಎಂಬ ಆತಂಕವನ್ನು ರಕ್ಷಿತ್ ಸ್ನೇಹಿತರೊಬ್ಬರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಆದರೆ ಸಾವಿಗೆ ಇದೇ ಕಾರಣವೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಮಾಹಿತಿ ತಿಳಿದು ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Student commits suicide out of fear of failing the exam

Share

Leave a comment

Leave a Reply

Your email address will not be published. Required fields are marked *

Don't Miss

ಸಾವಿರಾರು ಭಕ್ತರಿಂದ ದೇವಿರಮ್ಮನ ದರ್ಶನ

ಚಿಕ್ಕಮಗಳೂರು: ಕಲ್ಲು ಮುಳ್ಳಿನ ಆತಂಕವಿಲ್ಲ, ಮುಗಿಲೆತ್ತರಕ್ಕೆ ಕಾಣುವ ಕಡಿದಾದ ಗುಡ್ಡ ಏರಲು ದಣಿವಿಲ್ಲ, ಚೂಪು ಕಲ್ಲಿನಂತಹ ಬೆಟ್ಟದ ತುದಿಯಲ್ಲಿ ಕುಳಿತ ದೇವಿಯ ದರ್ಶನ ಪಡೆಯುವ ತವಕದಲ್ಲಿ ಈ ಹಾದಿ ಹಿಡಿದು ಹೊರಟ...

ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲಿ ಪತಿಯ ದರ್ಬಾರ್

ಅಜ್ಜಂಪುರ: ಪಟ್ಟಣ ಪಂಚಾಯಿತಿಯಲ್ಲಿ ಜನಪ್ರತಿನಿಧಿಯೊಬ್ಬರ ಪತಿ ಆಡಳಿತಾತ್ಮಕ ವ್ಯವಹಾರಗಳಲ್ಲಿ ನೇರ ಹಸ್ತಕ್ಷೇಪ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಅವರ ಪತಿ ಹಾಗೂ ಬಿಜೆಪಿ ಮುಖಂಡ ಸಂತೋಷ್ ಅವರು...

Related Articles

ಸ್ಟಿಂಗ್ ಆಪರೇಶನ್ ಸುಳಿಯಲ್ಲಿ” ಗ್ಯಾರಂಟಿ ” ಶಾಸಕರುಗಳು?

ಚಿಕ್ಕಮಗಳೂರು; ಸ್ಟಿಂಗ್ ಆಪರೇಶನ್ ಎಂಬ ಅಸ್ತ್ರ ಇತ್ತೀಚೆಗೆ ಬಾರಿ ಸದ್ದು ಮಾಡುತ್ತಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ...

ಬಿ.ಎಮ್.ಸಂದೀಪ್ ತೆಲಂಗಾಣ ಕಾಂಗ್ರೆಸ್ ನ ಉಸ್ತುವಾರಿ

ಚಿಕ್ಕಮಗಳೂರು; ಚಿಕ್ಕಮಗಳೂರು ಜಿಲ್ಲೆಯ ಬಿ.ಎಂ.ಸುದೀಪ್ ತೆಲಂಗಾಣ ಕಾಂಗ್ರೆಸ್ ನ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಕಳೆದ ಒಂದುವರೆ...

ಎಐಟಿಯುಸಿ ಸಮ್ಮೇಳನಕ್ಕೆ ಚಿಕ್ಕಮಗಳೂರಿನಿಂದ 1,000ಕ್ಕೂ ಕಾರ್ಮಿಕರು

ಚಿಕ್ಕಮಗಳೂರು: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) 43ನೇ ರಾಷ್ಟ್ರೀಯ ಸಮ್ಮೇಳನವು ನ.22ರಿಂದ 26ರವರೆಗೆ...

ಕಾರು–ಥಾರ್ ನಡುವೆ ಭೀಕರ ಡಿಕ್ಕಿ: ಮೆಸ್ಕಾಂ ಜೆಇ ಸ್ಥಳದಲ್ಲೇ ಸಾವು

ಕಡೂರು: ಕಾರು ಮತ್ತು ಥಾರ್ ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೆಸ್ಕಾಂ ಇಲಾಖೆಯ...