Home Crime News ಜೇನುನೊಣಗಳ ದಾಳಿಗೆ ವೃದ್ಧ ಕಾರ್ಮಿಕ ಬಲಿ
Crime NewsHomeLatest Newsnamma chikmagalurTarikere

ಜೇನುನೊಣಗಳ ದಾಳಿಗೆ ವೃದ್ಧ ಕಾರ್ಮಿಕ ಬಲಿ

Share
Share

ಚಿಕ್ಕಮಗಳೂರು: ಹೊಲದಲ್ಲಿ ಬಾಳೆ ಗಿಡ ನೆಡುವ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ಏಕಾಏಕಿ ಜೇನುನೊಣಗಳು ದಾಳಿ ನಡೆಸಿದ ಪರಿಣಾಮ ವೃದ್ಧ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಕೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಶಿವಪ್ಪ (58) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಬಾಳೆ ಗಿಡ ನೆಡುವ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ನೂರಾರು ಜೇನುನೊಣಗಳು ಕಾರ್ಮಿಕರ ಮೇಲೆ ದಾಳಿ ನಡೆಸಿವೆ. ಈ ವೇಳೆ ಇಬ್ಬರು ಕಾರ್ಮಿಕರು ದಾಳಿಯಿಂದ ತಪ್ಪಿಸಿಕೊಂಡಿದ್ದು, ಶಿವಪ್ಪ ಅವರು ಜೇನುನೊಣಗಳ ದಾಳಿಗೆ ಸಿಲುಕಿದ್ದಾರೆ.

ಶಿವಪ್ಪ ಅವರ ಮುಖ, ಕೈ, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಜೇನುನೊಣಗಳು ತೀವ್ರವಾಗಿ ಕಚ್ಚಿವೆ. ತಕ್ಷಣ ಅವರನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Elderly worker falls victim to honeybee attack

Share

Leave a comment

Leave a Reply

Your email address will not be published. Required fields are marked *

Don't Miss

ಸಾವಿರಾರು ಭಕ್ತರಿಂದ ದೇವಿರಮ್ಮನ ದರ್ಶನ

ಚಿಕ್ಕಮಗಳೂರು: ಕಲ್ಲು ಮುಳ್ಳಿನ ಆತಂಕವಿಲ್ಲ, ಮುಗಿಲೆತ್ತರಕ್ಕೆ ಕಾಣುವ ಕಡಿದಾದ ಗುಡ್ಡ ಏರಲು ದಣಿವಿಲ್ಲ, ಚೂಪು ಕಲ್ಲಿನಂತಹ ಬೆಟ್ಟದ ತುದಿಯಲ್ಲಿ ಕುಳಿತ ದೇವಿಯ ದರ್ಶನ ಪಡೆಯುವ ತವಕದಲ್ಲಿ ಈ ಹಾದಿ ಹಿಡಿದು ಹೊರಟ...

ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲಿ ಪತಿಯ ದರ್ಬಾರ್

ಅಜ್ಜಂಪುರ: ಪಟ್ಟಣ ಪಂಚಾಯಿತಿಯಲ್ಲಿ ಜನಪ್ರತಿನಿಧಿಯೊಬ್ಬರ ಪತಿ ಆಡಳಿತಾತ್ಮಕ ವ್ಯವಹಾರಗಳಲ್ಲಿ ನೇರ ಹಸ್ತಕ್ಷೇಪ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಅವರ ಪತಿ ಹಾಗೂ ಬಿಜೆಪಿ ಮುಖಂಡ ಸಂತೋಷ್ ಅವರು...

Related Articles

ಸ್ಟಿಂಗ್ ಆಪರೇಶನ್ ಸುಳಿಯಲ್ಲಿ” ಗ್ಯಾರಂಟಿ ” ಶಾಸಕರುಗಳು?

ಚಿಕ್ಕಮಗಳೂರು; ಸ್ಟಿಂಗ್ ಆಪರೇಶನ್ ಎಂಬ ಅಸ್ತ್ರ ಇತ್ತೀಚೆಗೆ ಬಾರಿ ಸದ್ದು ಮಾಡುತ್ತಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ...

ಬಿ.ಎಮ್.ಸಂದೀಪ್ ತೆಲಂಗಾಣ ಕಾಂಗ್ರೆಸ್ ನ ಉಸ್ತುವಾರಿ

ಚಿಕ್ಕಮಗಳೂರು; ಚಿಕ್ಕಮಗಳೂರು ಜಿಲ್ಲೆಯ ಬಿ.ಎಂ.ಸುದೀಪ್ ತೆಲಂಗಾಣ ಕಾಂಗ್ರೆಸ್ ನ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಕಳೆದ ಒಂದುವರೆ...

ಎಐಟಿಯುಸಿ ಸಮ್ಮೇಳನಕ್ಕೆ ಚಿಕ್ಕಮಗಳೂರಿನಿಂದ 1,000ಕ್ಕೂ ಕಾರ್ಮಿಕರು

ಚಿಕ್ಕಮಗಳೂರು: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) 43ನೇ ರಾಷ್ಟ್ರೀಯ ಸಮ್ಮೇಳನವು ನ.22ರಿಂದ 26ರವರೆಗೆ...

ಕಾರು–ಥಾರ್ ನಡುವೆ ಭೀಕರ ಡಿಕ್ಕಿ: ಮೆಸ್ಕಾಂ ಜೆಇ ಸ್ಥಳದಲ್ಲೇ ಸಾವು

ಕಡೂರು: ಕಾರು ಮತ್ತು ಥಾರ್ ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೆಸ್ಕಾಂ ಇಲಾಖೆಯ...