Home namma chikmagalur chikamagalur ಮೂರು ಪ್ರತ್ಯೇಕ ಅಪಘಾತ ಪ್ರಕರಣ ದಾಖಲು; ಹಲವರಿಗೆ ಗಾಯ
chikamagalurCrime NewsHomeLatest Newsnamma chikmagalur

ಮೂರು ಪ್ರತ್ಯೇಕ ಅಪಘಾತ ಪ್ರಕರಣ ದಾಖಲು; ಹಲವರಿಗೆ ಗಾಯ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು, ಲಿಂಗದಹಳ್ಳಿ ಹಾಗೂ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಹಲವರು ಗಾಯಗೊಂಡಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರಿಗೆ ಬೈಕ್ ಡಿಕ್ಕಿ:  ಅ. 6ರಂದು ರಾತ್ರಿ 10.30ರ ಸುಮಾರಿಗೆ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಟಿಪ್ಪು ನಗರದ ಕಡೆಗೆ ತಿರುಗುತ್ತಿದ್ದ ಅಮ್ಮಾರ್ ಖಾನ್ ಅವರ ಬೈಕ್‌ಗೆ ಆಲ್ಟೊ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅವರ ಪತ್ನಿ ಆಯಷಾ ಅವರ ತಲೆ, ಕೈ ಹಾಗೂ ಸೊಂಟಕ್ಕೆ, ಅಮ್ಮಾರ್ ಖಾನ್ ಅವರ ಕೈಕಾಲು ಮತ್ತು ಸೊಂಟಕ್ಕೆ ಗಾಯಗಳಾಗಿವೆ. ಗಾಯಾಳುಗಳನ್ನು ಎಂಜಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾರು ಚಾಲಕ ಅವಿನಾಶ್ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೈಕ್‌ಗೆ ಬುಲೆರೋ ಡಿಕ್ಕಿ: ತರೀಕೆರೆ ತಾಲ್ಲೂಕಿನ ಉಡೇವ ಸಮೀಪ ಅ. 3ರಂದು ಮಧ್ಯಾಹ್ನ 1.45ರ ಸುಮಾರಿಗೆ ಬುಲೆರೋ ವಾಹನ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ದೇವರಾಜ್ ಅವರ ಬೆನ್ನಿನ ಹಿಂಭಾಗಕ್ಕೆ ತೀವ್ರ ಗಾಯವಾಗಿದೆ. ಗಾಯಾಳುವಿಗೆ ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಬುಲೆರೋ ಚಾಲಕ ಚಂದು ಅಲಿಯಾಸ್ ಚಂದ್ರಶೇಖರ ವಿರುದ್ಧ ಲಿಂಗದಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್‌ಗೆ ಏಪ್ ವಾಹನ ಡಿಕ್ಕಿ: ಕಡೂರು ತಾಲ್ಲೂಕಿನ ಯಗಟಿ ಗ್ರಾಮದ ಮುಖ್ಯರಸ್ತೆಯಲ್ಲಿ ಅ. 7ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಂಜು (26) ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಣ್ಣಿನ ರಸ್ತೆಯಿಂದ ಮುಖ್ಯರಸ್ತೆಗೆ ಬಂದ ಏಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜು ಅವರ ತಲೆ, ಮೂಗು ಹಾಗೂ ಕಿವಿಗೆ ಗಾಯಗಳಾಗಿವೆ. ಯಗಟಿ ಮತ್ತು ಕಡೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ ವಾಹನ ಚಾಲಕ ಅಫ್ರೋಜ್ ವಿರುದ್ಧ ಯಗಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Three separate accident cases registered; several injured.

Share

Leave a comment

Leave a Reply

Your email address will not be published. Required fields are marked *

Don't Miss

ಪೌರಕಾರ್ಮಿಕರು ಒಳಚರಂಡಿ ಮ್ಯಾನ್‌ಹೋಲ್‌ಗೆ ಇಳಿಯಬಾರದು

ಚಿಕ್ಕಮಗಳೂರು : ನಗರಸಭೆಯ ಯುಜಿಡಿ ಹಾಗೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಬಸವರಾಜ್ ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಒಳಚರಂಡಿ ಮ್ಯಾನ್‌ಹೋಲ್‌ಗೆ...

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಯಮವೇ ಅಸ್ತ್ರ

ಚಿಕ್ಕಮಗಳೂರು : ಯುವಜನರು ಮಾದಕವಸ್ತು ಹಾಗೂ ಇತರ ದುಶ್ಚಟಗಳಿಂದ ದೂರವಿದ್ದು, ಸಂಯಮ ಮತ್ತು ಶಿಸ್ತಿನ ಜೀವನವನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಭವಂರ್ ಸಿಂಗ್ ಮೀನಾ...

Related Articles

ಜಿ.ಪಂ-ತಾ.ಪಂ ಚುನಾವಣೆ ಪೈಪೋಟಿ ಕಷ್ಟ -ಕಷ್ಟ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯುವುದು ಬಹುತೇಕ ಖಚಿತ. ಈಗಾಗಲೇ ಮೀಸಲಾತಿ ಪ್ರಕಟಿಸಲಾಗಿದೆ.ಕಳೆದ...

16 ವರ್ಷಗಳ ಹಿಂದೆ ಶೃಂಗೇರಿಯಲ್ಲಿ ಕಾಣೆಯಾದ ಪುತ್ರನ ಪತ್ತೆಗೆ ತಂದೆಯಿಂದ ದೂರು

ಶೃಂಗೇರಿ:  ಸುಮಾರು 16 ವರ್ಷಗಳ ಹಿಂದೆ ಶೃಂಗೇರಿಯಲ್ಲಿ ಕಾಣೆಯಾಗಿದ್ದ ಪುತ್ರನನ್ನು ಪತ್ತೆಹಚ್ಚಿಕೊಡುವಂತೆ ಕೋರಿ ತಂದೆಯೊಬ್ಬರು ಶೃಂಗೇರಿ...

ಪ್ರಧಾನಮಂತ್ರಿ ಕುಸುಮ್ ಯೋಜನೆ ಹೆಸರಿನಲ್ಲಿ ₹3 ಲಕ್ಷ ವಂಚನೆ

ಕಳಸ:  ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ 3 ಎಚ್‌ಪಿ ಸೋಲಾರ್ ಪಂಪ್‌ಸೆಟ್ ಕೊಡಿಸುವುದಾಗಿ ನಂಬಿಸಿ, ನಕಲಿ ದಾಖಲೆಗಳನ್ನು...

ವೃದ್ಧೆಯ ಮನೆಗೆ ನುಗ್ಗಿ ಚಾಕು ತೋರಿಸಿ ಚಿನ್ನಾಭರಣ, ಬೆಳ್ಳಿ ವಸ್ತುಗಳ ದರೋಡೆ

ಚಿಕ್ಕಮಗಳೂರು: ಮನೆಯೊಂದರಲ್ಲಿ ಒಬ್ಬರೇ ವಾಸವಿದ್ದ ಮಹಿಳೆಯನ್ನು ಚಾಕು ತೋರಿಸಿ ಬೆದರಿಸಿದ ಇಬ್ಬರು ಅಪರಿಚಿತರು, ಅಪಾರ ಪ್ರಮಾಣದ...