Home namma chikmagalur chikamagalur ಭದ್ರೆಯ ಕೃಪೆಯಿಂದ ಕೋಡಿಬಿದ್ದ ಕುಕ್ಕಸಮುದ್ರ ಕೆರೆ
chikamagalurHomeLatest Newsnamma chikmagalur

ಭದ್ರೆಯ ಕೃಪೆಯಿಂದ ಕೋಡಿಬಿದ್ದ ಕುಕ್ಕಸಮುದ್ರ ಕೆರೆ

Share
Share

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿದು ಬಂದ ಭದ್ರಾ ನೀರು ಕಡೂರು ತಾಲೂಕಿನ ಗಡಿಭಾಗದ ಬಯಲುಸೀಮೆ ರೈತರಿಗೆ ಪುನರ್ಜನ್ಮ ನೀಡಿದೆ. ಅಂತರಘಟ್ಟೆ ಕೆರೆ, ಕಲ್ಕೆರೆಯ ಕುಕ್ಕಸಮುದ್ರ ಕೆರೆಗಳು ಕೋಡಿ ಬಿದ್ದಿದ್ದರೆ ಹೂಲಿಹಳ್ಳಿ ಕೆರೆ ಭರ್ತಿ ಆಗಿದೆ, ಚೌಳಹಿರಿಯೂರು ಊರ ಮುಂದಿನ ಕೆರೆಗೆ ನೀರು ಹರಿದುಬರುತ್ತಿದೆ.

ಕಳೆದ ಸೆ.6ರಂದು ಪ್ರಾಯೋಗಿಕವಾಗಿ ನೀರಿನ ಹರಿವು ಆರಂಭದ ಬಳಿಕ ತರೀಕೆರೆ-ಅಜ್ಜಂಪುರ ಭಾಗದ ಕೆರೆಗಳಿಗೂ ನೀರು ಹರಿದು ಕಡೂರಿನ ಅಂತರಘಟ್ಟೆ ಕೆರೆ ಮೊದಲು ತುಂಬಿತ್ತು. ಕುಕ್ಕಸಮುದ್ರ ಕೆರೆಗೆ ನೀರು ಹರಿಸುವ ಸಂದರ್ಭದಲ್ಲಿ ಒಂದೆರಡು ಬಾರಿ ತಾಂತ್ರಿಕ ದೋಷ ಮತ್ತು ಹೆಬ್ಬೂರು “ವೈʼಜಂಕ್ಷನ್‌ ಬಳಿ ರೈತರ ಜಮೀನುಗಳನ್ನು ನೀರು ಕೊರೆದು ಕೊಂಡು ಹೋಗುತ್ತಿದೆ ಎನ್ನುವ ದೂರು ಮತ್ತು ರೈತರಿಂದ ಅಡಚಣೆ ಉಂಟಾದಾಗ ನೀರಿನ ಹರಿವಿನಲ್ಲಿ ಲೋಪ ಉಂಟಾಗಿತ್ತು. ಕಡೂರು ಶಾಸಕರ ಮಧ್ಯಪ್ರವೇಶ, ಚೌಳಹಿರಿಯೂರು ಭಾಗದ ರೈತ ಮುಖಂಡರು ಮತ್ತು ಮಾಜಿ ಶಾಸಕರ ಹೋರಾಟದ ಫಲವೂ ಸೇರಿ ಕೆರೆಗಳಿಗೆ ಸರಾಗವಾಗಿ ನೀರು ಹರಿದು ಬರಲು ಆರಂಭಿಸಿದೆ.

ಕಲ್ಕೆರೆ ಕುಕ್ಕಸಮುದ್ರ ಕೆರೆ 162 ಹೆ.ವಿಸ್ತೀರ್ಣದಲ್ಲಿ ನೀರು ಹಿಡಿಯುವ ಸಾಮರ್ಥ್ಯ ಹೊಂದಿದ್ದು 3.85 ಎಂಸಿಎಫ್ಟಿ ನೀರು ಸಂಗ್ರಹಿಸುವ ಹಾಗೂ ಸಾವಿರಾರು ಎಕರೆ ಭೂಮಿಗೆ ನೀರುಣಿಸುವ, ನೂರಾರು ಕೊಳವೆ ಬಾವಿಗಳಿಗೆ ಪುನಃಶ್ಚೇತನ ಹಾಗೂ ಹಲವಾರು ಕೆರೆ-ಕಟ್ಟೆಗಳನ್ನು ತುಂಬಿಸುವ ಸಾಮರ್ಥ್ಯ ಹೊಂದಿದೆ. ಭಾನುವಾರ ಭದ್ರೆ ಕೃಪೆಯಿಂದ ಕೋಡಿ ಬಿದ್ದಿದೆ. ಅಲ್ಲಿಂದ ಹರಿದು ಹೋಗುವ ನೀರು ಹೊಸದುರ್ಗ ತಾಲೂಕಿನ ಶೆಟ್ಟಿಹಳ್ಳಿ, ಕೊರಟೀಕೆರೆ, ಕಂಗುವಳ್ಳಿ, ಕಡದಿನ ಕೆರೆ, ಕಬ್ಬಳ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಕುಡಿಯುವ ನೀರೊದಗಿಸಿ ಅಲ್ಲಿಂದ ಕೆಲ್ಲೋಡು ಗ್ರಾಮದ ಚೆಕ್‌ ಡ್ಯಾಂ ತುಂಬಿಸುವ ಮೂಲಕ ಹೊಸದುರ್ಗ ಪಟ್ಟಣದ ಕುಡಿಯುವ ನೀರು ಪೂರೈಕೆಗೆ ನೆರವಾಗಲಿದೆ.

ಚೌಳಹಿರಿಯೂರಿನ ಊರಮುಂದಿನ ಕೆರೆ ತುಂಬಿದರೆ ಸುತ್ತಮುತ್ತಲ ಗ್ರಾಮಗಳ ಕೊಳವೆಬಾವಿಗಳು ರೀಚಾರ್ಜ್ಆಗುವ ಜತೆಗೆ ಚೌಳಹಿರಿಯೂರಿನ ಜನರಿಗೆ ಕುಡಿವ ನೀರಿಗೂ ಬಳಕೆ ಆಗಲಿದೆ. ಕಲ್ಕೆರೆ ಕೆರೆ ತುಂಬಿಸುವ ಸಮಯದಲ್ಲಿ 9 ಕಿ.ಮೀ ನಾಲೆ ಹೊಂದಿದ ಊರಮುಂದಿನ ಕೆರೆಯಲ್ಲಿ ರಂಗಾಪುರ ಭಾಗದ ನಾಲೆಯಲ್ಲಿ ಸುಮಾರು 3 ಕಿ.ಮೀ ಜಂಗಲ್‌ ತೆರವು ಮೂಲಕ ಸಣ್ಣ ನೀರಾವರಿ ಇಲಾಖೆ ನೀರು ಸರಾಗವಾಗಿ ಹರಿದು ಬರಲು ಅನುವು ಮಾಡಿಕೊಟ್ಟಿದೆ. ಪರಿಣಾಮ ಇನ್ನು 8-10 ದಿನಗಳಲ್ಲಿ ಊರಮುಂದಿನ ಕೆರೆ ಕೂಡಾ ಭರ್ತಿ ಸಾಧ್ಯತೆ ಇದೆ.

” ಚೌಳಹಿರಿಯೂರು ಭಾಗದ ರೈತರು ಹೋರಾಟ ಆರಂಭಿಸಿದೆವು. ಶಾಸಕರ ಸಹಕಾರ, ವಿಶ್ವೇಶ್ವರಯ್ಯ ಜಲ ನಿಗಮದ ಎಂಜಿಯರ್‌ ಮತ್ತು ಅಧಿಕಾರಿಗಳ ಸಹಾಯದಿಂದ ನಾವು ಬರದ ಬೇಗೆಯಿಂದ ಸ್ವಲ್ಪ ಮಟ್ಟಿಗೆ ಪಾರಾಗಲು ನೆರವಾಗಿದೆ. ಬೇಸಿಗೆವರೆಗೆ ನಮಗೆ ಇನ್ನು ಭಯವಿಲ್ಲ. ನಮ್ಮ ಹೋರಾಟಕ್ಕೆ ನೆರವಾದ ಕಡೂರು ಮಾಜಿ ಶಾಸಕರು ಮತ್ತು ರೈತ ಹೋರಾಟಗಾರರ ಸಹಾಯಹಸ್ತ ಬೆಂಬಲ ನೀಡಿದೆ. ಆದರೆ, ಮುಂದಿನ ದಿನಗಳಲ್ಲಿ ಸರ್ಕಾರ ಜಲನೀತಿ-ಜಲಶಿಕ್ಷಣ ರೂಪಿಸಿ, ಪಂಚಾಯಿತಿವಾರು ಕೆರೆಗಳ ಮಾಹಿತಿ ಪಡೆದು ಅವುಗಳ ಹೂಳೆತ್ತಿಸಿ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕು. ಪೈಪ್ಲೈನ್ಅ ಳವಡಿಸಿ ಕೆರೆ ತುಂಬಿಸುವ ಯೋಜನೆಯಲ್ಲಿ ಬಾಕಿ ಇರುವ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಬೇಕು.ಇದರ ಜತೆಗೆ ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸುವ, ಜಮೀನುಗಳಲ್ಲಿ ಇಂಗುಗುಂಡಿ ನಿರ್ಮಿಸಲು ಉತ್ತೇಜಿಸುವ ಕ್ರಮಗಳ ಮೂಲಕ ಜನರನ್ನು ಜಲಸಾಕ್ಷರರನ್ನಾಗಿಸಬೇಕುʼ ಎನ್ನುತ್ತಾರೆ ಚೌಳಹಿರಿಯೂರಿನ ರೈತ ಮುಖಂಡ ಜಿ.ಅಶೋಕ್‌ ಕುಮಾರ್.

” ಸಿ.ಡಿ.ಗೊಲ್ಲರಹಟ್ಟಿ, ಗುಮ್ಮನಹಳ್ಳಿ ಪಂಪ್ಹೌಸ್, ಮಂಜುನಾಥ ಪುರದ ಮೂಲಕ ಕುರುಬರಹಳ್ಳಿಯ ಕಟ್ಟೆವರೆಗೆ ಅಲ್ಪಸ್ವಲ್ಪ ಕೆಲಸಗಳು, ಪರಿಹಾರ ವಿತರಣೆ, ಒಂದು ವಿದ್ಯುತ್ಕಂಬ ಅಳವಡಿಕೆ ಬಾಕಿ ಇದೆ. ಇವೆಲ್ಲ ಕೆಲಸ ಮುಗಿಸಿಕೊಟ್ಟರೆ ಈ ಭಾಗದ ರೈತರಿಗೂ ನೆರವಾಗಲಿದೆʼ ಎನ್ನುತ್ತಾರೆ ಈ ಭಾಗದ ಕೃಷಿಕರು. ಹರಿದುಬಂದ ಭದ್ರೆಯಿಂದ ಸಾವಿರಾರು ರೈತರು ಸಂತಸ ವ್ಯಕ್ತಪಡಿಸಿದ್ದು, ಇದೇ ಸಂಭ್ರಮದಲ್ಲಿ ಚೌಳಹಿರಿಯೂರು ಭಾಗದ ರೈತರು ಕುಕ್ಕಸಮುದ್ರ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಲು ನಿರ್ಧರಿಸಿದ್ದಾರೆ. ರೈತರ ಮೊಗದಲ್ಲಿ ಸಂತಸ ಮೂಡಿದೆ.

Kukkasamudra Lake which fell by the grace of Bhadre

Share

Leave a comment

Leave a Reply

Your email address will not be published. Required fields are marked *

Don't Miss

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ನೀಡಿರುವ ಹೇಳಿಕೆಯನ್ನು...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ ತಾಂತ್ರಿಕ ಅಡಚಣೆಗಳನ್ನು ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್...

Related Articles

ಮಹೇಶ್ ಜೋಷಿಗೆ ಹಿನ್ನೆಡೆ-ಮತ್ತೆ ಕೋರ್ಟ್ ನಲ್ಲಿ ಹೋರಾಟಕ್ಕೆ ಜಯ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದಿದೆ ಎನ್ನಲಾದ ಆಡಳಿತಾತ್ಮಕ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಕುರಿತು ಹಿರಿಯ ಸಾಹಿತಿಗಳು,...

ಅ.8ರಂದು ಚಿಕ್ಕಮಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಮಹಿಳಾ ಮಹಾಸಭೆ

ಚಿಕ್ಕಮಗಳೂರು:  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಮಿತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಮಿತಿ...

 ಅ.8ರಂದು ಚಿಕ್ಕಮಗಳೂರಿನಲ್ಲಿ ಇಂಡಿಯಾ ಒಕ್ಕೂಟದ ಪ್ರತಿಭಟನೆ

ಚಿಕ್ಕಮಗಳೂರು: ದೇಶಾದ್ಯಂತ ನಡೆಯುತ್ತಿರುವ ‘ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ–ದೇಶ ಬಚಾವೋ’ ಚಳುವಳಿಯ ಭಾಗವಾಗಿ ಅ.8ರಂದು ಚಿಕ್ಕಮಗಳೂರು...

ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡಲು ಕಾಂಗ್ರೆಸ್ ಸರ್ಕಾರ ಬದ್ಧ

ಚಿಕ್ಕಮಗಳೂರು: ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಪಿಂಚಣಿ ಒದಗಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು, ಪಿಂಚಣಿ ಯೋಜನೆಗಳ...