ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ಹೆಚ್ಚಿಸಿತ್ತು. ರಾಜಕೀಯ ವಿಶ್ಲೇಷಕ ಸುನೀಲ್ ಕೊಟ್ಟಿರುವ ವರದಿ ನೋಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಔಹಾರಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸುಧಾರಣೆಗೆ ಬೇಕಾದ ಟಿಪ್ಸ್ ಕೊಟ್ಟಿದ್ದಾರೆ. ಆದರೆ ಇದರಿಂದ ಸುಧಾರಿಸುವುದು ಕಷ್ಟ. ಮೂರು ಜನ ಶಾಸಕರು ತಿಪ್ಪರಲಾಗ ಹಾಕಿದರು ಕಷ್ಟ, ಕಷ್ಟ. ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಮಂಜೇಗೌಡರು ಎಷ್ಟರಮಟ್ಟಿಗೆ ಸುಧಾರಣೆ ತರಲು ಸಾಧ್ಯ ಎಂಬುದು ಕುತೂಹಲ ಅಷ್ಟೇ.
ಮೂಡಿಗೆರೆ ಕ್ಷೇತ್ರ: ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ನವ ಅವತಾರದಲ್ಲಿ ಕಾಣಿಸಿಕೊಂಡ ನಯನ ಮೋಟಮ್ಮ ಕ್ಷೇತ್ರದಲ್ಲಿ ಇವರ ಗೆಲುವಿಗೆ ದುಡಿದವರಿಗೆ ನಯಾ ಪೈಸೆಯಷ್ಟು ಬೆಲೆ ಕೊಡಲಿಲ್ಲ. ಇದರ ಪರಿಣಾಮ ಕಾಂಗ್ರೆಸ್ ಕಿತ್ತಾಟ, ಗುಂಪುಗಾರಿಕೆ ಹೆಚ್ಚುತ್ತಾ ಹೋಯಿತು. ಶಾಸಕರು ಕಟ್ಟಿದ ಮನೆಯ ಗಳ ಹಿರಿಯುತ್ತಾ ಹೋದರೆ ಇದನ್ನು ಸರಿ ಮಾಡುವ ಬದಲಿಗೆ ಡಿ.ಕೆ.ಶಿವಕುಮಾರ್ ಈಗ ಕೈ, ಕೈ ಹಿಸುಕಿಕೊಳ್ಳುವಂತೆ ಮಾಡಿದೆ.
ಈಗ ಬಿ.ಜೆ.ಪಿ ಮತ್ತು ದಳ ಒಂದಾದರೆ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಸನ್ನಿವೇಶ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಏಳು ನೂರು ಚಿಲ್ಲರೆ ಮತಗಳಿಂದ ಜಯಗಳಿಸಿದ ನಯನ ಮತ್ತೆ ಆಯ್ಕೆ ಆಗುವುದು ಸುಲಭ ಇಲ್ಲ. ಸ್ಥಳೀಯರಲ್ಲದವರು ಸ್ಪರ್ಧೆ ಮಾಡಿದರೆ ಮಾತ್ರ ಮತ್ತೆ ಕಾಂಗ್ರೆಸ್ ಛಾನ್ಸ್ ತೆಗೆದುಕೊಳ್ಳಬಹುದು. ಇಲ್ಲದೆ ಇದ್ದರೆ ಪಕ್ಕಾ, ಪಕ್ಕ ಬಾಗಿಲುಗಳನ್ನು ಹಾಕಿಕೊಂಡು ಪಟಾಕಿ ಸಿಡಿಸಿ ಕೊಳ್ಳಬಹುದು.
ಶೃಂಗೇರಿ ಕ್ಷೇತ್ರ: ವಿಧಾನಸಭಾ ಕ್ಷೇತ್ರ ಶೃಂಗೇರಿಯಲ್ಲಿ ಎರಡು ವಿಧಾನ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿತ್ತು. ಕಳೆದ 23ರ ಚುನಾವಣೆಯಲ್ಲಿ ಕೇವಲ ಇನ್ನೂರು ಚಿಲ್ಲರೆ ಮತಗಳಿಂದ ಜಯಗಳಿಸಿದ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್‌ನ ಗುಟುಕು ನೀರಿನ ಮೂಲಕ ಗೆಲುವಿನ ಫಲಿತಾಂಶ ತಮ್ಮ ಕಡೆ ಇರುವಂತೆ ಮಾಡಿದೆ. ಬಿಜೆಪಿ, ದಳ, ಹೊಂದಾಣಿಕೆ ಆದರೆ ಕಾಂಗ್ರೆಸ್ ಅನ್ನು ಬ್ಯಾಟರಿ ಹಾಕಿಕೊಂಡು ಹುಡುಕಬೇಕಾಗುತ್ತದೆ. ರಾಜೇಗೌಡ ಚುನಾವಣೆ ನಂತರ ಕಳೆದುಕೊಂಡಿದ್ದು ಹೆಚ್ಚು. ಯಾರು ಕಾಂಗ್ರೆಸ್‌ನಿಂದ ಅಭ್ಯರ್ಥಿ ಆಗಬಹುದು ಎಂಬ ಲೆಕ್ಕಾಚಾರ ನಡೆದಿದೆ.
ತರೀಕೆರೆ ಕ್ಷೇತ್ರ: ವಿಧಾನಸಭಾ ಕ್ಷೇತ್ರ: ಮೂಡಿಗೆರೆ ಮತ್ತು ಶೃಂಗೇರಿ ಕ್ಷೇತ್ರಗಳ ಕತೆ ಸುಧಾರಣೆ ಮಾಡಲು ಸಾಧ್ಯವಿಲ್ಲ ಎನ್ನುವ ದುಸ್ಥಿತಿಯಲ್ಲಿ ಇರುವಾಗ ತರೀಕೆರೆ ಕ್ಷೇತ್ರದ ಕತೆ ರೋಚಕವಾಗಿದೆ. ತಮಗೆ ತಾವೇ ಶತ್ರುಗಳಾಗುತ್ತಾರೆ ಎಂಬುದಕ್ಕೆ 1978ರಿಂದ ಗೆದ್ದವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಲೆಕ್ಕಕ್ಕೆ ಇಲ್ಲ ತನ್ನ ಕುಟುಂಬದ ಹೆಂಡತಿ, ಮಕ್ಕಳು ಮತ್ತು ಅಳಿಯನ ಸುಪರ್ದಿಗೆ ವಹಿಸಿರುವುದು ಕ್ಷೇತ್ರದ ಜನರು ಹಾದಿ ಬೀದಿಯಲ್ಲಿ ಮಾತನಾಡುವ ಜೊತೆಗೆ ಮುಂದೆ ಮಾರಿಹಬ್ಬ ಎನ್ನುತ್ತಿದ್ದಾರೆ.
ಇದರ ಜೊತೆಗೆ ಕಳೆದ ಒಂದು ವರ್ಷದಿಂದ ಟಿ.ಜೆ.ಗೋಪಿಕುಮಾರ್ ಹಳ್ಳಿ ಹಳ್ಳಿ, ಕೇರಿಗಳನ್ನು ಸುತ್ತುತ್ತಿರುವುದು ಮತ್ತು ಗೋಪಿ ಕೃಷ್ಣಾ ಮತ್ತೆ ಡ್ರೆಸ್ ಹೊಲಿಗೆ ಮಾಡಿಸಿಕೊಂಡು ಡಿ.ಕೆ.ಬೆಂಬಲದೊಂದಿಗೆ ಅಖಾಡಕ್ಕೆ ಇಳಿಯುವ ತಾಲೀಮು ನಡೆಸಿರುವುದು ನನ್ನ ಮುಂದೆ ಯಾರು? ಶ್ರೀನಿವಾಸ್ ಮತ್ತು ಇತರ ಕುಟುಂಬದವರು ತಣ್ಣೀರು ಕುಡಿಯಲು ಯೋಚನೆ ಮಾಡುವಂತೆ ಆಗಿದೆ. ಅಹಿಂದ ಛಾಪಿಯನ್ ಸಿದ್ದರಾಮಯ್ಯರನ್ನು ಮೀರಿ ಮಂತ್ರಿಯಾಗಲು ಓಡಾಡಿದ್ದು ಬೈರತಿ ಸುರೇಶ್ ಮುಟ್ಟಿನೋಡಿಕೊಳ್ಳುವಂತೆ ಮಾಡಿರುವುದು ತನ್ನ ರಾಜಕೀಯ ಗುಂಡಿಗಳನ್ನು ತೋಡಿಕೊಂಡಿದ್ದಾರೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.
ಒಟ್ಟಾರೆ ಶ್ರೀನಿವಾಸ್‌ಗೆ ಅಷ್ಟೇ ಅಲ್ಲ ಇತರರು ಉದಾಹರಣೆ ಆಗಬಲ್ಲರು. ಇದರಿಂದ ತಮ್ಮ ಗುಂಡಿ ತಾವೇ ತೋಡಿಕೊಂಡಿರುವುದು ಎದ್ದು ಕಾಣುತ್ತಿದೆ. ಜೊತೆಗೆ ಕಾನೂನು ಮೀರಿ ಬ್ರಾಂಡಿ ಶಾಪ್‌ಗಳು, ಕ್ಲಬ್‌ಗಳು ನಡೆಯುತ್ತಿವೆ ಎಂಬ ವ್ಯಾಪಕ ದೂರುಗಳ ಮಧ್ಯೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತರಲು ಪರದಾಡುವುದು ಖಚಿತ, ಅಕಸ್ಮಾತ್ ಟಿಕೆಟ್ ಸಿಕ್ಕರೂ ಗೆಲುವು ಗ್ಯಾರಂಟಿ ಇಲ್ಲ.
ಕಡೂರು ಕ್ಷೇತ್ರ: ವಿಧಾನಸಭಾ ಕ್ಷೇತ್ರ: ಹಾಲಿ ಶಾಸಕ ಕೆ.ಎಸ್.ಆನಂದ್ ದರ್ಪ, ದಬ್ಬಾಳಿಕೆ, ವಸೂಲಿ ಬಾಜಿ ಒಂದು ರೀತಿಯ ಹೇಸಿಗೆ ಹುಟ್ಟಿಸಿದೆ ಎಂದು ಕಾಂಗ್ರೆಸ್‌ನವರು ಮಾತನಾಡುತ್ತಿರುವುದರ ಮಧ್ಯೆ ಡಿ.ಕೆ.ಶಿ ಭಂಟ ಎಂಬ ಬಿರುದಾವಳಿ ಬೇರೆ ಹೀಗಾಗಿ ಕಾಂಗ್ರೆಸ್ ಟಿಕೆಟ್ ಖಚಿತ ಜೊತೆಗೆ ಬೇರೆ ಯಾರೂ ಕೂಡ ಟಿಕೆಟ್ ಕೇಳುತ್ತಿಲ್ಲ. ಸುಲಭವಾಗಿ ಟಿಕೆಟ್ ಗಿಟ್ಟಿಸುವ ಆನಂದ್‌ಗೆ ಚುನಾವಣೆ ಸುಲಭವಿಲ್ಲ.
ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಒದ್ದಾಡಬೇಕಾಗುತ್ತದೆ. ಬಹುತೇಕ ಬೆಳ್ಳಿ ಪ್ರಕಾಶ್ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್‌ನ ದತ್ತಾ ಟೊಂಕ ಕಟ್ಟಿದರೆ ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳಿಂದ ಬೆಳ್ಳಿ ಗೆಲುವು ಖಚಿತ ಹೀಗಾಗಿ ಡಿ.ಕೆ.ಶಿವಕುಮಾರ್‌ಗೆ ಸಿಕ್ಕಿರುವ ಫೀಡ್‌ಬ್ಯಾಕ್ ಹಿಡಿದು ಕಿವಿ ಹಿಂಡಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಚಿಕ್ಕಮಗಳೂರು ಕ್ಷೇತ್ರ: ವಿಧಾನಸಭಾ ಕ್ಷೇತ್ರ: ಸಿ.ಟಿ.ರವಿ ಇಪ್ಪತ್ತು ವರ್ಷಗಳಿಂದ ಗೆಲುವು ಸಾಧಿಸಿ ಐದನೇ ಸಲಕ್ಕೆ ಜೊತೆಯಲ್ಲಿ ಇದ್ದ ತಮ್ಮಯ್ಯ ಸಮಯದ ಲಾಭ ಜೊತೆಗೆ ಹಿತೈಷಿಗಳ ಸಹಾಯದಿಂದ ಕಾಂಗ್ರೆಸ್‌ಗೆ ಬಂದು ಗೆಲುವು ಸಾಧಿಸಿದ್ದು ಇತಿಹಾಸ. ಈಗ ಹೊಸ ಇತಿಹಾಸ ಬರೆಯಲು ಎಂಟ್ರಿಯಾಗುವ ಸಮಯದಲ್ಲಿ ಕೈ, ಮೈಗೆ ಸುತ್ತಿಕೊಂಡ ಬ್ರಾಂಡಿ ಅಂಗಡಿಗಳು, ಗಣಿಗಾರಿಕೆ ಮತ್ತು ಕಲ್ಯಾಣ ಕೆಲಸಗಳು ಲಾಭಕ್ಕಿಂತ ನಷ್ಟ ತರುತ್ತಿವೆ ಎಂಬ ರಿಪೋರ್ಟ್ ಇದೆ.
ಹಣಕ್ಕೆ ಬರವಿಲ್ಲ ಕಳೆದ ಸರಿ ಕೈ ಹಿಡಿದ ಅಹಿಂದ ಮತದಾರರು ಸೆಡ್ಡು ಹೊಡೆಯಲು ತಯಾರಿಲ್ಲ. ನಿರಾಶೆಯ ಜೊತೆಗೆ ಯಾವನು ಗೆದ್ದರೂ ಅಷ್ಟೇ ಎಂಬ ನಿರ್ಣಾಯಕ ಹಂತಕ್ಕೆ ಬಂದಿದ್ದಾರೆ. ತಮ್ಮಯ್ಯ ಕೂಡ ಡಬಲ್ ಗೇಮ್ ರಾಜಕಾರಣ ಮಾಡಿರುವುದು ಸಿದ್ದರಾಮಯ್ಯಗಿಂತ ಹೆಚ್ಚಾಗಿ ಡಿಕೆ. ಹಿಂದೆ ಬೇವಿನ ಸೊಪ್ಪು ಹಿಡಿದು ತಿರುಗುತ್ತಿರುವುದು ಅಹಿಂದ ವರ್ಗದವರು ತಿರುಗಿ ಬಿದ್ದಿದ್ದಾರೆ ಎಂಬುದಕ್ಕೆ ರೇಖಾ ಹುಲಿಯಪ್ಪಗೌಡ ಕಾಣದಿರುವುದು, ವಕೀಲ ಪುಟ್ಟೇಗೌಡದ ಟೀಮ್ ಮೌನವಾಗಿರುವುದು, ಸಖರಾಯಪಟ್ಟಣ ಸುತ್ತಮುತ್ತಲಿನ ಜನ ಅದರಲ್ಲೂ ಯುವ ಅಹಿಂದ ಮುಖಂಡ ತ್ರೀಭವನ್ ಟೀಮ್ ಸಮಯಕ್ಕೆ ಕಾದು ಕುಳಿತಿರುವುದು, ವಿಧಾನ ಪರಿಷತ್ ಸದಸ್ಯರಾರ ಗಾಯಿತ್ರಿ ಶಾಂತೇಗೌಡ ಕೂಡ ಮೊದಲಿನಂತೆ ಇಲ್ಲ.
ಆದರೆ ತನ್ನ ನಂಬುಗೆ ಮಂಜೇಗೌಡ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಿಂದ ಸಿಡಿಎ ಅಧ್ಯಕ್ಷ ಜೊತೆಗೆ ಜಿಲ್ಲಾ ಕಾಂಗ್ರೆಸ್ ಸ್ಥಾನ ಸಿಕ್ಕರೂ ತಮ್ಮಯ್ಯಗೆ ಸೋಲಿನ ಸುಳಿ ಅವರಿಸಿದೆ ಎಂದು ಕಾಂಗ್ರೆಸ್ಸಿನಲ್ಲಿ ಮಾತನಾಡುವ ಜೊತೆಗೆ ಕಳೆದ ಸಲದ ಒಗ್ಗಟ್ಟು ರೋಷ ಕರಗಿದೆ. ಇದರಿಂದ ತಮ್ಮಯ್ಯ ಚಡಪಡಿಸುವುದರ ಜೊತೆಗೆ ಕಾಸು ಕರಗಿಸಿಕೊಂಡು ಕ್ಲೈಮ್‌ಗಾಗಿ ಬೆಂಕಿ ಬಿರುಗಾಳಿ ಕಡೆ ನೋಡಬೇಕಾಗುತ್ತದೆ.
ಇದರ ಮಧ್ಯೆ ಎಂ.ಎಲ್.ಮೂರ್ತಿ, ಹೆಚ್, ಹೆಚ್.ದೇವರಾಜ್ ಮತ್ತು ಮಹಮದ್ ಟೀಮ್ ಇರುವಲ್ಲಿ ತಮ್ಮಯ್ಯ ಬೆಸ್ಟ್ ಎನ್ನುತ್ತಿದ್ದಾರೆ. ಹರೀಶ್ ನನಗೆ ಟಿಕೆಟ್ ಗ್ಯಾರಂಟಿ ಎನ್ನುತ್ತಿರುವುದು ಮಾತ್ರ ನಿಜ. ಹೀಗಾಗಿ ಚಿಕ್ಕಮಗಳೂರು ಕ್ಷೇತ್ರದ ಬಗ್ಗೆ ಕಾಂಗ್ರೆಸ್ ವರಿಷ್ಠರು ಬಹು ನಿರೀಕ್ಷೆಗೆ ತಕ್ಕಂತೆ ಡಿಕೆಶಿ ಒನ್ ಟೂ ಒನ್ ತಮ್ಮಯ್ಯಗೆ ರಿಜೆಲ್ಟ್ ಅಷ್ಟು ಸುಲಭವಿಲ್ಲ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳ ಕಾಂಗ್ರೆಸ್‌ನ ಹೀನಾಯ ಪರಿಸ್ಥಿತಿ ಬಗ್ಗೆ ರಾಜಕೀಯ ವಿಶ್ಲೇಷಕ ಸುನಿಲ್ ಗೋಳು ತೊಡಿಕೊಂಡಿದ್ದಾರೆ.
Cabinet berths certain for five MLAs from the district!?
Leave a comment