ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಡ ಜನರಲ್ ಆಸ್ಪತ್ರೆಯ ಮಾಜಿ ಸರ್ಜನ್ ಕುಮಾರ್ ನಾಯಕ್ (67) ರಾತ್ರಿ ಮನೆಯಲ್ಲಿ ಹೃದಯಾಘಾತದಿಂದ ಕೊನೆ ಉಸಿರು ಎಳೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಸಮೀಪದ ಹಳ್ಳಿಯಲ್ಲಿ ಜನಿಸಿ ಬಹುತೇಕ ಜಿಲ್ಲೆಯ ವಿವಿಧ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸಿ ಬಂಡವರ ಆಶಾ ಕಿರಣವಾಗಿದ್ದರು.ಬಡವರ ಪರ ಅತೀವ ಕಾಳಜಿ ಕಳಕಳಿ ಹೊಂದಿದ್ದರು.
ಕುವೆಂಪು, ತೇಜಸ್ವಿ ಮತ್ತು ಲಂಕೇಶ್ ರ ಪುಸ್ತಕಗಳನ್ನು ಓದಿದ್ದ ಅವರು ತುಂಬಾ ವಿಶ್ಲೇಷಣೆ ಜೊತೆಗೆ ಪ್ರಭಾವ ಬೆಳೆಸಿಕೊಂಡಿದ್ದರು.ಶ್ರೀಯುತರ ಅಂತಿಮ ದರ್ಶನ ಪಡೆದ ಸ್ನೇಹಿತರ ಬಳಗ ದುಃಖಿತರಾಗಿದ್ದರು.ಅವರ ಒಡನಾಡಿ ಕೆ.ಪಿ.ನಾಗೇಶ್ ರೈತ ಸಂಘದ ಗುರುಶಾಂತಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ಕಲ್ಯಾಣ ನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿದ ನಂತರ ಸ್ವ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಬಂಧು_ಬಳಗದವರ ಸಮ್ಮುಖದಲ್ಲಿ ಶವ ಸಂಸ್ಕಾರ ನೆರವೇರಿತು.
Former surgeon Kumar Naik is no more
Leave a comment