Home namma chikmagalur chikamagalur ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ
chikamagalurCrime NewsHomeLatest Newsnamma chikmagalur

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

Share
Share

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿಬಟ್ಟಲು ಕಾಲೋನಿಯಲ್ಲಿ ನಡೆದಿದೆ.

ಕೃಷ್ಣಾನಾಯ್ಕ ಅಲಿಯಾಸ್ ಸಂತೋಷ್ ಕೊಲೆಯಾದ ದುರ್ದೈವಿಯಾಗಿದ್ದು, ಆತನ ಸ್ವಂತ ತಮ್ಮ ಯುವರಾಜ ನಾಯ್ಕ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ನಂದಿಬಟ್ಟಲು ಕಾಲೋನಿಯಲ್ಲಿ ತಮ್ಮ, ಅಣ್ಣ ಹಾಗೂ ತಂಗಿಯ ಮಕ್ಕಳೊಂದಿಗೆ ವಾಸವಿದ್ದ ಯುವರಾಜ ಈ ಹಿಂದೆಯೂ ಮನೆಯಲ್ಲಿ ತಾಯಿ ಹಾಗೂ ಅಣ್ಣನೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದನು.

ಭಾನುವಾರ ರಾತ್ರಿ ಎಸ್ಟೇಟ್ ಕೆಲಸ ಮುಗಿಸಿ ಮನೆಗೆ ಬಂದ ವೇಳೆ, ತಂಗಿ ಮಮತಾಳ ಪುತ್ರಿಗೆ ಸಂತೋಷ್ ಊಟ ಮಾಡಿಸುತ್ತಿದ್ದಾಗ ಆಕೆ ನಿದ್ದೆಗಣ್ಣಿನಲ್ಲಿ ಬಿದ್ದು ಮುಖ ಊದಿಕೊಂಡಿತ್ತು. ಬಳಿಕ ಮನೆಗೆ ಬಂದ ಯುವರಾಜ, ಮಗುವಿನ ಕೆನ್ನೆ ಊದಿಕೊಂಡಿರುವುದನ್ನು ಕಂಡು, ಸಂತೋಷನೇ ಮಗುವಿಗೆ ಹೊಡೆದಿದ್ದಾನೆ ಎಂದು ತಪ್ಪಾಗಿ ತಿಳಿದು ರೊಚ್ಚಿಗೆದ್ದಿದ್ದಾನೆ. ಮಕ್ಕಳನ್ನು ಮನೆಯೊಳಗೆ ಕೂಡಿಹಾಕಿ, ಅಣ್ಣ ಸಂತೋಷನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ.

ಕೈಗಳಿಂದ ಕಪಾಳ ಮತ್ತು ಬೆನ್ನಿಗೆ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೆ, ಕಬ್ಬಿಣದ ಪೈಪ್‌ನಿಂದ ಮುಖ ಮತ್ತು ತಲೆಗೆ ಬಲವಾಗಿ ಹೊಡೆದು ರಕ್ತದ ಮಡುವಿನಲ್ಲಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಶಿವಮೊಗ್ಗ ತಾಲೂಕಿನ ಮಂಡನಕೊಪ್ಪದಲ್ಲಿ ವಾಸವಿದ್ದ ತನ್ನ ಅಕ್ಕ ಲಕ್ಷ್ಮಿಬಾಯಿಗೆ ಸ್ವತಃ ಫೋನ್ ಮಾಡಿ, ಅಣ್ಣನನ್ನು ಹೊಡೆದು ಸಾಯಿಸಿದ್ದೇನೆ ಎಂದು ತಿಳಿಸಿದ್ದಾನೆ. ಇದರಿಂದ ಗಾಬರಿಗೊಂಡ ಲಕ್ಷ್ಮಿಬಾಯಿ, ನೆರೆಹೊರೆಯವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದು ನೋಡಿದಾಗ ಮನೆಯ ಬಾಗಿಲ ಮುಂಭಾಗದಲ್ಲೇ ಸಂತೋಷ್ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ.

ಮೃತ ಸಂತೋಷನ ಸಹೋದರಿ ಲಕ್ಷ್ಮಿಬಾಯಿ ನೀಡಿದ ಲಿಖಿತ ದೂರಿನ ಮೇರೆಗೆ ಲಿಂಗದಹಳ್ಳಿ ಪೊಲೀಸರು ಆರೋಪಿ ಯುವರಾಜನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

A fight between siblings ended in murder

Share

Leave a comment

Leave a Reply

Your email address will not be published. Required fields are marked *

Don't Miss

ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸಲು ಸೆ.29ರಂದು ಧರಣಿ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಫೆಡರೇಶನ್ (AITUC) ವತಿಯಿಂದ ಸೆ.29ರಂದು...

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಸುಳ್ಳು ಮಾಹಿತಿ ನೀಡಿ ₹2.20 ಲಕ್ಷ ವಂಚನೆ

ಚಿಕ್ಕಮಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಸುಳ್ಳು ವೈಯಕ್ತಿಕ ಮಾಹಿತಿ ನೀಡಿ ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ *₹2.20 ಲಕ್ಷ ಹಣ ಹಾಗೂ ಮೊಬೈಲ್ ಫೋನ್ ಪಡೆದು ವಂಚಿಸಿರುವ ಆರೋಪ* ಕೇಳಿಬಂದಿದೆ. ಈ...

Related Articles

12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲೆಯ 12...

ಕಳಸದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

ಕಳಸ : ಮನೆಯಂಗಳದಲ್ಲೇ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಕಳಸ ತಾಲೂಕಿನ...

ಕೆಎಸ್‌ಆರ್‌ಟಿಸಿ ಬಸ್–ಟ್ರ್ಯಾಕ್ಟರ್ ಇಂಜಿನ್ ಡಿಕ್ಕಿಗೆ ಚಾಲಕ ಸಾವು

ತರೀಕೆರೆ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ರ್ಯಾಕ್ಟರ್ ಇಂಜಿನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟ್ರ್ಯಾಕ್ಟರ್...

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಪ್ರಜಾಸೇವ ಆಂದೋಲನದ ಉದ್ದೇಶ

ಚಿಕ್ಕಮಗಳೂರು:  ಜನರ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಆಲಿಸಿ, ಸಾಧ್ಯವಾದಷು ಶೀಘ್ರವಾಗಿ ಇತ್ಯರ್ಥ ಪಡಿಸುವ...