Home namma chikmagalur chikamagalur ಬನ್ನಂಜೆ ಅಧ್ಯಯನ ಪೀಠ ಸ್ಥಾಪನೆಗೆ ಒತ್ತಾಯ
chikamagalurHomeLatest Newsnamma chikmagalur

ಬನ್ನಂಜೆ ಅಧ್ಯಯನ ಪೀಠ ಸ್ಥಾಪನೆಗೆ ಒತ್ತಾಯ

Share
Share

ಬೆಂಗಳೂರು: ʼಬನ್ನಂಜೆಯವರ ಕೃತಿಗಳ ಕುರಿತು ಅಧ್ಯಯನ ಪೀಠ ಸ್ಥಾಪನೆಯಾಗಬೇಕುʼ ಎಂದು ವಿದ್ವಾನ್‌ ಉಮಾಕಾಂತ ಭಟ್‌ ಒತ್ತಾಯಿಸಿದರು.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಶ್ರಯದಲ್ಲಿ, ಬನ್ನಂಜೆ ಗೋವಿಂದಾಚಾರ್ಯ ಅವರ 90ನೇ ಜನ್ಮದಿನದ ಪ್ರಯುಕ್ತ ವಿವಿಧೆಡೆ ಹಮ್ಮಿಕೊಂಡಿದ್ದ ವಿಶ್ವನಮನ ಸಮಾರೋಪದ ʼಬನ್ನಂಜೆ ಅವಲೋಕನʼ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ಭಾನುವಾರ ಅವರು ಈ ಒತ್ತಾಯ ಮಂಡಿಸಿದರು.

ʼಪುರಾಣಗಳ ಬಗ್ಗೆ ದೇಶದಲ್ಲಿ ಅಧ್ಯಯನ ನಡೆದಿರುವುದು ಸಾಲದು. ಯಾಕೆಂದರೆ ಗ್ರಂಥಗಳ ವಿಶಾಲತೆ ಅಷ್ಟು ಇದೆ. ಬನ್ನಂಜೆಯವರ ಕೆಲವು ಉಪನ್ಯಾಸಗಳನ್ನು ಸರಿಯಾಗಿ ಕೇಳಿದರೆ ಒಬ್ಬ ವಿದ್ವಾಂಸ ರೂಪುಗೊಳ್ಳಬಹುದು. ಅವರ ಉಪನ್ಯಾಸಗಳು ಅಕ್ಷರ ರೂಪ ಪಡೆದುಕೊಳ್ಳಬೇಕುʼ ಎಂದ ಅವರು, ʼಮಧ್ವಾಚಾರ್ಯರ ಮೂಲಕ ಪುರಾಣ ವಿಶ್ಲೇಷಣೆಗಳು ನಡೆದ ಬಳಿಕ ಬನ್ನಂಜೆಯವರು ಪುರಾಣಗಳನ್ನು ಆಧುನಿಕ ಕಾಲಘಟ್ಟಕ್ಕೆ ಒಪ್ಪಿತವಾಗುವ ರೀತಿಯಲ್ಲಿ ವಿಶ್ಲೇಷಿಸಿದರುʼ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಉಡುಪಿ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ, ʼಬನ್ನಂಜೆಯವರನ್ನು ಎಲ್ಲ ಮತದವರು ಒಪ್ಪಿಕೊಳ್ಳುತ್ತಾರೆ. ಆದರೆ ಬನ್ನಂಜೆಯವರು ಎಂದಿಗೂ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಟ್ಟು ಮಾತನಾಡಿದವರಲ್ಲ. ಹಾಗೆ ನೋಡಿದರೆ ಪುರಂದರದಾಸರ ಮಾದರಿಯಲ್ಲೇ ಅವರು ಬಾಳು ನಡೆಸಿದವರು. ಆಚಾರ್ಯ ಮಧ್ವರ ತತ್ವ, ಸಿದ್ಧಾಂತಗಳನ್ನು ಬರೆಯಲೆಂದೇ ಕೈಗಳನ್ನು ಹೊಂದಿದ್ದೇನೆ ಎಂಬ ಭಾವ ಮತ್ತು ಬದ್ಧತೆ ಅವರದ್ದಾಗಿತ್ತು. ಹೀಗಾಗಿ ಬನ್ನಂಜೆ ಎಂಬ ಊರು ಗೋವಿಂದಾಚಾರ್ಯ ಅವರ ಹೆಸರಿನೊಂದಿಗೆ ವಿಶ್ವದಾದ್ಯಂತ ಗುರುತಿಸಲ್ಪಟ್ಟಿದೆʼ ಎಂದರು.

ಬನ್ನಂಜೆಯವರ ಸಂಸ್ಕೃತ ಭಾಷಾ ಶೈಲಿಯ ಕುರಿತು ಮಾತನಾಡಿದ ಬಿ.ಎನ್‌. ಶಶಿಕಿರಣ್‌, ʼ ಬನ್ನಂಜೆಯವರ ಗದ್ಯ, ಕಾವ್ಯ, ನಾಟಕಗಳನ್ನು ಗಮನಿಸಿದರೆ ಬನ್ನಂಜೆಯವರು ಸ್ವತಂತ್ರವಾದ ಶೈಲಿಯನ್ನು ಅನುಸರಿಸಿದರು. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಬರೆಯುತ್ತಿದ್ದರು. ಆ ಸಾಲುಗಳಲ್ಲಿ ಪ್ರಸನ್ನತೆ ಇರುತ್ತಿತ್ತು. ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ಬರೆದ ಪೀಠಿಕೆಯನ್ನು ಗಮನಿಸಿದರೆ, ಗ್ರಂಥಸ್ಥವಾಗಿರುವ ಕೃತಿಯನ್ನು ಸಾಮಾನ್ಯರಿಗೂ ತಲುಪುವ ರೀತಿಯಲ್ಲಿ ನಿರೂಪಿಸಿರುವುದನ್ನು ಕಾಣಬಹುದುʼ ಎಂದು ಹೇಳಿದರು.

ಕನ್ನಡ ಅನುವಾದದ ಕುರಿತು ಮಾತನಾಡಿದ ವಿದ್ವಾನ್‌ ಅರ್ಜುನ್‌ ಭಾರದ್ವಾಜ್‌, ʼಬನ್ನಂಜೆಯವರ ಕೊಡುಗೆಯಿಂದಾಗಿ ಕನ್ನಡವೇ ಹೆಚ್ಚು ಶ್ರೀಮಂತವಾಗಿದೆ. ಜಾಗತಿಕವಾಗಿ ಕನ್ನಡ- ಸಂಸ್ಕೃತ ಎರಡಕ್ಕೂ ಗೌರವ ಸಂದಿದೆ. ಅವರು ಮಾಡಿದ ರೂಪಕ ಅನುವಾದಗಳನ್ನು ಗಮನಿಸಿದರೆ ಮೂಲಕವಿಯ ಹೃದಯವನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಕನ್ನಡದ ಕನ್ನಡಿಯ ಮೂಲಕ ಸಂಸ್ಕೃತದ ಕಡೆಗೆ ಸಾಗುವ ದಾರಿಯನ್ನು ತೋರಿಸಿದ್ದಾರೆʼ ಎಂದರು.

ಲೇಖಕ ರೋಹಿತ್‌ ಚಕ್ರತೀರ್ಥ ಮಾತನಾಡಿ, ʼಬನ್ನಂಜೆಯವರಿಗೆ ಎಷ್ಟೇ ವಿಸ್ತಾರವಾದ ಸಂಗತಿಯನ್ನು ಸಂಕ್ಷಿಪ್ತವಾಗಿ ಹೇಳುವ ಕಲೆಗಾರಿಕೆ ಇತ್ತು. ಬರಹಗಳಲ್ಲಿ ಪಾಂಡಿತ್ಯ ಪ್ರದರ್ಶನ ಇರಲಿಲ್ಲ. ಬದಲಾಗಿ ವಿಷಯಕ್ಕೆ ಪೂರಕವಾದ ಅಂಶಗಳು ಇರುತ್ತಿದ್ದವು ಅವರಿಗೆ ಯಾವುದೇ ತತ್ವ ಪಂಥಗಳು ವ್ಯರ್ಜ್ಯ ಆಗಿರಲಿಲ್ಲʼ ಎಂದರು,

ಬನ್ನಂಜೆಯವರ ಕೃತಿಗಳ ಕುರಿತು ಮಾತನಾಡಿದ ವಿಜಯಸಿಂಹ ಆಚಾರ್ಯ, ʼ ಬನ್ನಂಜೆಯವರ ಕೃತಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಬೇಕು. ಭಾವವನ್ನು ಅರ್ಥ ಮಾಡಿಕೊಳ್ಳಬೇಕು. ಬನ್ನಂಜೆಯವರ ಅಂಥ ಕೃತಿಗಳನ್ನು ಆಸ್ವಾದಿಸಬೇಕುʼ ಎಂದರು.

ಆಚಾರ್ಯರು ತೋರಿದ ಭಗವದ್ಗೀತೆ ಕುರಿತು ವಿದ್ವಾನ್‌ ಸುಪ್ರೀತ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌, ಮುಖ್ಯ ಟ್ರಸ್ಟಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು.
ವಿದುಷಿ ರೂಪಶ್ರೀ ಮಧುಸೂದನ್‌, ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು.

Demand for establishment of Bannanje Study Chair

Share

Leave a comment

Leave a Reply

Your email address will not be published. Required fields are marked *

Don't Miss

ಎಲ್ಲಾ ಧರ್ಮದವರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಜನರು ಪ್ರೀತಿ ಸ್ನೇಹದಿಂದ ಬದುಕುತ್ತಿರುವ ಇಂತಹ ಪರಂಪರೆಯನ್ನು ಗೌರವಿಸಬೇಕಾಗಿರುವುದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ಕೆ.ಪಿ.ಸಿ.ಸಿ....

ರಾಜ್ಯ ಸರ್ಕಾರ ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟ

ಕೊಪ್ಪ: ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧವಾ ವೇತನ ಪಡೆಯಲು ರಾಜ್ಯ ಸರ್ಕಾತ ಗರಿ? ೩೨ ಸಾವಿರ ರೂ. ಆದಾಯಮಿತಿ ನಿಗದಿಪಡಿಸಿರುವುದನ್ನು ಖಂಡಿಸಿ ಶೃಂಗೇರಿ ಕ್ಷೇತ್ರ ಜೆಡಿಎಸ್ ಸಮಿತಿಯಿಂದ ಪಟ್ಟಣದ...

Related Articles

ಕೊನೆ ಕ್ಷಣದಲ್ಲಿ ಗಾಯಿತ್ರಿಗೆ ತಪ್ಪಿದ ಮಂತ್ರಿ ಸ್ಥಾನ

ಚಿಕ್ಕಮಗಳೂರು: ಜಿಲ್ಲೆಯ ಐದು ಜನ ಶಾಸಕರಿಗೆ ಮಂತ್ರಿ ಪದವಿ ದೊರೆಯದೆ ಕೊನೆ ಕ್ಷಣದಲ್ಲಿ ಫಿಲ್ಮ್ ನಲ್ಲಿ...

ವ್ಯಸನಮುಕ್ತ ಸಮಾಜ ನಿರ್ಮಾಣದಿಂದ ಮಾತ್ರ ಸುಂದರ ಭವಿಷ್ಯ ಸಾಧ್ಯ

ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ, ಸ್ವಾಸ್ಥ್ಯ ಮತ್ತು ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ವ್ಯಸನಗಳಿಂದ ದೂರವಿರಬೇಕು. ವ್ಯಸನಮುಕ್ತ...

ಬಿಜೆಪಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಕ್ಕಮಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ...

ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಗೆ 451 ಅಭ್ಯರ್ಥಿಗಳ ಗೈರು

ಚಿಕ್ಕಮಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಭಾನುವಾರ ರಾಜ್ಯಾದ್ಯಂತ ನಡೆದ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್)...