Home namma chikmagalur chikamagalur ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಮಲೆನಾಡು ತತ್ತರ
chikamagalurHomeLatest Newsnamma chikmagalur

ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಮಲೆನಾಡು ತತ್ತರ

Share
Share

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮಿತಿಮೀರಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಳಸ, ಶೃಂಗೇರಿ ಹಾಗೂ ಕುದುರೆಮುಖ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರಮುಖ ನದಿಗಳಾದ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಶೃಂಗೇರಿ ತಾಲೂಕು ಹಾಗೂ ಕೆರೆಕಟ್ಟೆ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ತುಂಗಾ ನದಿಯ ಒಳಹರಿವು ಹೆಚ್ಚಾಗಿದೆ. ನದಿಯ ಅಬ್ಬರಕ್ಕೆ ಶೃಂಗೇರಿ ಶ್ರೀ ಶಾರದಾಂಬೆ ದೇಗುಲದ ಪಾರ್ಕಿಂಗ್ ಲಾಟ್‌ಗೆ ತೆರಳುವ ಪ್ಯಾರಲಲ್ ರಸ್ತೆಯಲ್ಲಿ ಸುಮಾರು 3 ರಿಂದ 4 ಅಡಿ ನೀರು ನಿಂತಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕುದುರೆಮುಖ ಗುಡ್ಡಗಾಡು ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೋಟ, ಗದ್ದೆ ಹಾಗೂ ರಸ್ತೆಗಳು ಜಲಾವೃತಗೊಂಡಿವೆ. ಕಳಸ ತಾಲೂಕಿನ ಸಂಸೆ ಸಮೀಪದ ಮಾಕೋಡು ಗ್ರಾಮದಲ್ಲಿ ಹರಿಯುವ ನದಿಯ ಅಬ್ಬರಕ್ಕೆ ಕಬ್ಬಿಣದ ಕಾಲುಸಂಕವೇ ಮುಳುಗಡೆಯಾಗಿದೆ. ಜೋಗಿಕುಂಬ್ರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಸುರೇಶ್ ಹಾಗೂ ವೆಂಕಟೇಶ್ ಎಂಬುವರ ಅಡಿಕೆತೋಟಗಳಿಗೆ ಮಣ್ಣು ಜಾರಿಬಿದ್ದಿದೆ. ತೋಟಗಳಲ್ಲಿ ಬರೋಬ್ಬರಿ 2 ಅಡಿ ಎತ್ತರಕ್ಕೆ ನೀರು ನಿಂತಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಮಲೆನಾಡು ಭಾಗದಲ್ಲಿ ಇನ್ನು ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ನದಿ ತೀರದ ನಿವಾಸಿಗಳು, ತಗ್ಗು ಪ್ರದೇಶದಲ್ಲಿ ಇರುವವರು ಹಾಗೂ ವಾಹನ ಸವಾರರು ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ಅನಗತ್ಯವಾಗಿ ನೀರಿನ ಹರಿವಿನ ಬಳಿ ತೆರಳಬಾರದು ಎಂದು ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ.

Malnad reels under heavy rains in the district

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಸಮಾಜದ ಬಗ್ಗೆ ನಾನು ಎಂದೂ ಟೀಕಿಸಿ ಮಾತನಾಡಿಲ್ಲ

ಚಿಕ್ಕಮಗಳೂರು: ಮುಸ್ಲಿಂ ಸಮಾಜದ ಬಗ್ಗೆ ನಾನು ಎಂದೂ ಟೀಕಿಸಿ ಮಾತನಾಡಿಲ್ಲ, ದುಷ್ಕೃತ್ಯದಲ್ಲಿ ತೊಡಗುವವರ ವಿರುದ್ಧವಷ್ಟೇ ನಾನು ಮಾತನಾದಿದ್ದೇನೆ ಎಂಬುದನ್ನು ಆ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದೂ ವಿಧಾನ ಪರಿಷತ್ ಶಾಸಕ ಡಾ....

ಬೈಕ್‌ಗಳ ನಡುವೆ ಭೀಕರ ಅಪಘಾತದಲ್ಲಿ ಮೆಕಾನಿಕ್ ಸಾವು

ಅಜ್ಜಂಪುರ:  ಅಜ್ಜಂಪುರ–ಬೀರೂರು ರಸ್ತೆಯ ನಾಗಮಂಗಲ ಸಮೀಪ ಭಾನುವಾರ ಸಂಜೆ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚನ್ನಾಪುರ ನಿವಾಸಿ ಹಾಗೂ ಮೆಕಾನಿಕ್ ಆಗಿದ್ದ ಆನಂದ್ ಮೃತಪಟ್ಟಿದ್ದಾರೆ. ಲಭ್ಯ ಮಾಹಿತಿಯ...

Related Articles

” ಕಾಂಗ್ರೆಸ್ ನಲ್ಲಿ” ಗಾಯಿತ್ರಿ ಪವರ್ ಸೆಂಟರ್ ಆರಂಭ ! ತಲ್ಲಣಿಸುತ್ತಿರುವ ಶಾಸಕರುಗಳು ?

ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡ ಕೋರ್ಟ್ ಆದೇಶದ ಮೇರೆಗೆ ವಿಧಾನ ಪರಿಷತ್ ಗೆ ಎಂಟ್ರಿ ಕೊಟ್ಟಾಗಿದೆ. ಕಳೆದ...

ದ್ವೇಷ ಭಾಷಣಗಳ ಆಧಾರಲ್ಲಿಯೇ ಸಂಘಟನೆ ಕಟ್ಟಲು ಹೊರಟಿರುವುದು ಖಂಡನೀಯ

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮತ್ತು ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್...

ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಪ್ರತಿಭಟನೆ

ಚಿಕ್ಕಮಗಳೂರು:  ಕಾವೇರಿ ನೀರನ್ನು ನೆರೆರಾಜ್ಯ ತಮಿಳುನಾಡಿಗೆ ಹರಿಬಿಡದೇ ರಾಜ್ಯದ ಜನರಿಗೆ ಉಳಿಸಿಕೊಡಬೇಕು ಎಂದು ಆಗ್ರಹಿಸಿ ಶನಿವಾರ...

ನ್ಯಾಯಾಲಯದ ತೀರ್ಪಿಗೆ ಎಂ.ಕೆ. ಪ್ರಾಣೇಶ್ ಭಾವನಾತ್ಮಕ ಹೇಳಿಕೆ

ಚಿಕ್ಕಮಗಳೂರು: ರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಹಾಗೂ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮಾಜಿ ವಿಧಾನ...