ಚಿಕ್ಕಮಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಮೂವರು ನಿಷ್ಠಾವಂತ ಪೊಲೀಸ್ ಸಿಬ್ಬಂದಿಗೆ 2025-26ನೇ ಸಾಲಿನ ಪ್ರತಿಷ್ಠಿತ “ಡಿಜಿ & ಐಜಿಪಿ ಕಮೆಂಡೇಷನ್ ಡಿಸ್ಕ್” (DG & IGP Commendation Disc) ಪ್ರಶಸ್ತಿ ಒಲಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಎಆರ್‌ಎಸ್‌ಐ ಕೆ. ಎನ್. ಚಲವಾದಿ, ಸಿಎಚ್‌ಸಿ ಆರ್. ಕುಮಾರ್ ಹಾಗೂ ಡಬ್ಲ್ಯೂಎಚ್‌ಸಿ ಶ್ರೀಮತಿ ಹಾಲಮ್ಮ ಎಸ್. ಬಿ. ರವರು ಈ ಗೌರವಕ್ಕೆ ಭಾಜನರಾದ ಸಾಧಕರಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರು (DG & IGP) ರವರು ಈ ಮೂವರೂ ಸಿಬ್ಬಂದಿಗೆ ಪದಕ ಪ್ರದಾನ ಮಾಡಿ, ಅವರ ಸುದೀರ್ಘ ಹಾಗೂ ಪ್ರಾಮಾಣಿಕ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ತಮ್ಮ ಕರ್ತವ್ಯದಲ್ಲಿ ಅಪ್ರತಿಮ ದಕ್ಷತೆ ಮತ್ತು ಶ್ರದ್ಧೆ ಮೆರೆದು ಜಿಲ್ಲೆಗೆ ಕೀರ್ತಿ ತಂದಿರುವ ಈ ಅಧಿಕಾರಿಗಳಿಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Awarded “DG & IGP Commendation Disc” to three policemen of the district
Leave a comment