Home namma chikmagalur chikamagalur ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ ಅವಶ್ಯಕತೆ ಅರಿತು ರಕ್ತದಾನ ಮಾಡಬೇಕು
chikamagalurHomeLatest Newsnamma chikmagalur

ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ ಅವಶ್ಯಕತೆ ಅರಿತು ರಕ್ತದಾನ ಮಾಡಬೇಕು

Share
Share

ಚಿಕ್ಕಮಗಳೂರು:  ರಕ್ತಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ. ಈ ದಿಸೆಯಲ್ಲಿ ರಕ್ತದ ಅವಶ್ಯಕತೆ ಅರಿತು ರಕ್ತದಾನ ಮಾಡಬೇಕು. ಇದು ಮಾನವೀಯತೆ ದೃಷ್ಟಿಯಿಂದ ಒಂದಿ? ಜೀವ ಉಳಿಸಲು ಸಾಧ್ಯವಾ ಗಲಿದೆ ಎಂದು ಜಿಲ್ಲಾ ಸರ್ಜನ್ ಡಾ|| ಚಂದ್ರಶೇಖರ್ ಸಾಲಿಮಠ್ ಹೇಳಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದಿಂದ ಶುಕ್ರವಾರ ಆಯೋಜಿಸಿದ್ಧ ಕಲಾವಿದರಿಂದ ರಕ್ತಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ವನ್ನು ಪಡೆಯುತ್ತದೆ. ಹೀಗಾಗಿ ಈ ಸತ್ಯಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದರು.

ಪ್ರಸ್ತುತ ಸಾರ್ವಜನಿಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮನು?ನ ಅಗತ್ಯತೆಗೆ ಅನುಗು ಣವಾಗಿ ರಕ್ತ ಸಿಗದಂತಾಗಿದೆ. ರಕ್ತದ ಅಗತ್ಯತೆ, ಮಹತ್ವ ಅರಿತು ೧೮ ವಯಸ್ಸಿನವರ ಮೇಲ್ಪಟ್ಟು ಎಲ್ಲರೂ ರಕ್ತ ದಾನ ಮಾಡಲು ಮುಂದಾಗಬೇಕು. ನೀವು ಕೊಡುವ ರಕ್ತ ಮೂರು ಜನರ ಜೀವ ಉಳಿಸಲು ನೆರವಾಗುತ್ತದೆ ಎಂದರು.

ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಜಯಪ್ರಕಾರ್ ಕೂದುವಳ್ಳಿ ಮಾತನಾಡಿ ರಕ್ತದಾನ ಶಿಬಿ ರದಲ್ಲಿನ ಪಾಲ್ಗೊಳ್ಳುವ ಮೂಲಕ ಜೀವ ಉಳಿಸುವ ಕಾಯಕದಲ್ಲಿ ತೊಡಗುವ ಕಲಾವಿದರಿಗೆ ಸಂಘದಿಂದ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದ್ದು, ಕಲೆಯ ನಡುವೆ ಜೀವಕ್ಕೆ ಪ್ರಾಧ್ಯಾನ್ಯತೆ ಕೊಡುವ ನಿ ಟ್ಟಿನಲ್ಲಿ ಕಲಾವಿದರು ಮುಂದಾಗಬೇಕು ಎಂದು ಹೇಳಿದರು.

ಆರೋಗ್ಯಾಧಿಕಾರಿ ಜಲಜಾಕ್ಷಿ ಮಾತನಾಡಿ ರಕ್ತವು ಕೃತಕವಾಗಿ ಉತ್ಪಾದಿಸಲು ಎಂದಿಗೂ ಸಾಧ್ಯವಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ರಕ್ತವನ್ನು ಮನುಷ್ಯನಿಂದಲೇ ಪಡೆದು ಮನುಷ್ಯನಿಗೆ ನೀಡಬೇಕು. ಈ ಕಾರ್‍ಯ ದಲ್ಲಿ ಯುವಜನತೆ ಹೆಚ್ಚು ತೊಡಗಿಸಿಕೊಳ್ಳಬೇಕು. ಆರೋಗ್ಯವಂತ ಮನುಷ್ಯ ಕನಿಷ್ಟ ೩ ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದು ಎಂದು ಮಾಹಿತಿ ನೀಡಿದರು.

ಇದೇ ವೇಳೆ ರಕ್ತದಾನ ಶಿಬಿರದಲ್ಲಿ ಸುಮಾರು ೦೭ ಕಲಾವಿದರು ರಕ್ತದಾನ ಮಾಡಿದರು. ಈ ಸಂದರ್ಭ ದಲ್ಲಿ ವೈದ್ಯರಾದ ಡಾ|| ಭರತ್, ಕಲಾವಿದರ ಸಂಘದ ರಾಯಬಾರಿ ಮಂಜುನಾಥ್ ಹೆಡದಾಳ್, ಜಿಲ್ಲಾ ಗೌರ ವಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಮಧು, ಉಪಾಧ್ಯಕ್ಷ ಸುರೇಶ್, ಮುಖಂಡರಾದ ಶೃತಿ, ರತ್ನ, ಮುರಳೀ, ಅ ಶೋಕ್ ರಾಜರತ್ನಂ, ಭಾರತಿ, ಉಮೇಶ್, ತಂಪಿತಾಗೌಡ, ಪೂರ್ಣೇಶ್ ಮುಂತಾದವರು ಉಪಸ್ಥಿತರಿದ್ದರು.

There are no alternatives to blood people should be aware of the need and donate blood.

 

Share

Leave a comment

Leave a Reply

Your email address will not be published. Required fields are marked *

Don't Miss

ಮಹಿಳೆ ಗಮನ ಬೇರೆಡೆ ಸೆಳೆದು ₹ 3.90 ಲಕ್ಷ ವಂಚನೆ

ಕಡೂರು: ಕಳೆದ ಜೂನ್‌ನಲ್ಲಿ ಗಮನ ಬೇರೆಡೆಗೆ ಸೆಳೆದು ಗ್ರಾಹಕರೋರ್ವರ ಖಾತೆಯಿಂದ ₹3.90 ಲಕ್ಷಡ್ರಾ ಮಾಡಿರುವ ಪ್ರಕರಣ ಕುರಿತು ಮಹಿಳೆಯೊಬ್ಬರುಕಡೂರು ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ. ತಾಲೂಕಿನ ಚಿಕ್ಕಪಟ್ಟಣಗೆರೆಯ ಸುನಂದ ಟಿ.ಎಂ. ಎಂಬವರು...

ಶಿವಮೊಗ್ಗ-ಶೃಂಗೇರಿ ಮಾರ್ಗ ಪರಿಗಣಿಸಿ

ಚಿಕ್ಕಮಗಳೂರು: ನೂತನ ರೈಲ್ವೆ ಯೋಜನೆಗೆ ಅಂತಿಮ ಸ್ಥಳ ನಿರ್ಧಾರ ಸಮೀಕ್ಷೆ ಮಾಡುವ ವೇಳೆ ಶಿವಮೊಗ್ಗ, ಭದ್ರಾವತಿ, ಮುತ್ತಿನಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಹರಿಹರಪುರ, ಶೃಂಗೇರಿ ರೈಲ್ವೆ ಮಾರ್ಗವನ್ನು ಪ್ರಮುಖವಾಗಿ ಪರಿಗಣಿಸಬೇಕು...

Related Articles

ಮಾಧ್ಯಮ ಕ್ಷೇತ್ರ ಶಾಸಕಾಂಗ-ಕಾರ್ಯಾಂಗ-ಸಾರ್ವಜನಿಕರ ನಡುವೆ ಸೇತುವೆ

ಚಿಕ್ಕಮಗಳೂರು:  ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂಬ ಮಾತು ಅಕ್ಷರಶಃ ಸತ್ಯ. ಸರಕಾರಗಳ ಯೋಜನೆಗಳ...

ಭೂದಾನ-ಗೋದಾನ-ಅನ್ನದಾನಕ್ಕಿಂತ ಮತದಾನ ಶ್ರೇಷ್ಠ

ಚಿಕ್ಕಮಗಳೂರು:  ಭೂದಾನ, ಗೋದಾನ, ಅನ್ನದಾನಕ್ಕಿಂತ ಸಮಾಜದ ನಾಗರೀಕರಿಗೆ ಮ ತದಾನ ಸರ್ವಶ್ರೇಷ್ಟ. ಆಸೆ-ಆಕಾಂಕ್ಷೆಗಳಿಗೆ ಒಳಗಾಗದೇ ಪ್ರಜೆಗಳ...

ಮರದಿಂದ ಬಿದ್ದು ಕಾರ್ಮಿಕ ಸಾವು

ಕಳಸ: ಮರದಿಂದ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾಫಿ ಎಸ್ಟೇಟ್...

ಪೋಸ್ಟ್ ಕಾರ್ಡ್ ಮೂಲಕ ಭಾವನೆ ಹಂಚಿಕೊಂಡ ವಿದ್ಯಾರ್ಥಿಗಳು

ಎಮ್ಮೆದೊಡ್ಡಿ: ಇಂದಿನ ಡಿಜಿಟಲ್ ಹಾಗೂ ಮೊಬೈಲ್ ಯುಗದಲ್ಲಿ ಮರೆಯಾಗುತ್ತಿರುವ ಪತ್ರ ಬರೆಯುವ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ...