ಚಿಕ್ಕಮಗಳೂರು: ಭೂದಾನ, ಗೋದಾನ, ಅನ್ನದಾನಕ್ಕಿಂತ ಸಮಾಜದ ನಾಗರೀಕರಿಗೆ ಮ ತದಾನ ಸರ್ವಶ್ರೇಷ್ಟ. ಆಸೆ-ಆಕಾಂಕ್ಷೆಗಳಿಗೆ ಒಳಗಾಗದೇ ಪ್ರಜೆಗಳ ಸಮಸ್ಯೆಗಳ ಸ್ಪಂದಿಸುವ ಅಭ್ಯರ್ಥಿಗಳನ್ನು ಆರಿಸುವುದು ನಾಗರೀಕರ ಮೂಲ ಕರ್ತವ್ಯ ಎಂದು ಖ್ಯಾತ ಹಿರಿಯ ಕಲಾವಿದ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದ ಐಡಿಎಸ್‌ಜಿ ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ದಾರಿ ಫೌಂಡೇಷನ್, ಮೈಸೂರು ಕಾ ಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ಧ ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ, ಯುವ ಶಕ್ತಿಯ ಕೈಯಲ್ಲಿ ಮುಕ್ತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾ ಡಿದರು.
ಅಖಡತೆಯಲ್ಲಿ ಏಕತೆ ಕಂಡ ಭಾರತೀಯ ಸಂವಿಧಾನ ನಮ್ಮದು. ಸರ್ವರಿಗೂ ಸಮಪಾಲು, ಸಮಬಾ ಳು ಎಂಬ ಧ್ಯೇಯೋದ್ದೇಶಕ್ಕಾಗಿ ಅಂಬೇಡ್ಕರ್ ಚಿಂತನೆ ಅಡಗಿತ್ತು. ಪ್ರಸ್ತುತ ಸಂವಿಧಾನ ಶಾಸಾಕಾಂಗ ವ್ಯವಸ್ಥೆ ಹದಗೆಟ್ಟಿದೆ. ಜನತೆಯೇ ನೇಮಿಸಿರುವ ಜನಪ್ರತಿನಿಧಿಗಳು, ಜನರನ್ನೇ ಗುಲಾಮರಾಗಿಸಿಕೊಂಡು ಆಳುವಂಥ ಸ್ಥಿತಿ ಎದುರಾಗಿರುವುದು ಬಹುದೊಡ್ಡ ಮಾರಕ ಎಂದರು.
ಮನುಷ್ಯನಲ್ಲಿ ಜಾತಿ, ಧರ್ಮದ ವಿಷಬೀಜ ಭಿತ್ತುವ ಕಾರ್ಯ ರಾಜಕಾರಣ ವ್ಯವಸ್ಥೆ ಮಾಡುತ್ತಿದೆ. ಪ್ರಕೃ ತಿ ಗಾಳಿ, ನೀರು, ಭೂಮಿಗೆ ಎಂದಿಗೂ ಜಾತಿ ಮಾಡಿಲ್ಲ. ಆದರೆ ಮನುಷ್ಯ ತನ್ನೊಳಗಿನ ಮೇಲು-ಕೀಳೆಂಬ ಜಾತಿ ಭೂತವನ್ನು ಬೆಳೆಸಿಕೊಳ್ಳುತ್ತಿರುವ ಪರಿಣಾಮ ರಾಜಕಾರಣಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆ ಚೆ ಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.
ದೇಶದ ಸಂವಿಧಾನದಡಿ ರಚನೆಗೊಂಡ ನಾಲ್ಕು ಅಂಗಗಳು ಆಯಾ ಸರ್ಕಾರಗಳ ಅಡಿಯಾಳಾಗಿ ಕೆಲ ಸ ಮಾಡುತ್ತಿದೆ. ಜನಪ್ರತಿನಿಧಿ ವ್ಯವಸ್ಥೆ ಕೆಟ್ಟಿದೆ, ನ್ಯಾಯಾಂಗ ಸರ್ಕಾರಗಳ ಕೈಗೊಂಬೆಯಾಗಿವೆ. ಕಾರ್‍ಯಾಂಗ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕೆಲವು ಮಾಧ್ಯಮ ಲೋಕ ಜನರಿಗೆ ಸದ್ವಿಚಾರ ಬೋಧಿಸದೇ ದಿನನಿತ್ಯ ಕೊಲೆ, ಸುಲಿಗೆ, ದರೋಡೆಗಳಂಥ ಸುದ್ದಿ ಪ್ರಚಾರಪಡಿಸುತ್ತಿವೆ ಎಂದರು.
ದೇಶದಲ್ಲಿ ಜನಸಾಮಾನ್ಯರ ಸಾಕಷ್ಟು ಸಮಸ್ಯೆಗಳಿವೆ. ಕುಡಿವ ನೀರು, ರಸ್ತೆ, ಅತಿವೃಷ್ಟಿ-ಅನಾವೃಷ್ಟಿಯಿಂ ದ ರೈತರ ಬೆಳೆಹಾನಿ, ಬೆಳೆದ ಬೆಳೆಗೆ ಬೆಂಬಲ ಬೆಲೆಯಿಲ್ಲ. ನೀರಿಲ್ಲದೇ ದನ-ಕರುಗಳು ಸಾವಪ್ಪುತ್ತಿದ್ದು ಈ ಬಗ್ಗೆ ಪತ್ರಿಕಾರಂಗ ಬೆಳಕು ಚೆಲ್ಲುವ ಕಾಯಕಲ್ಪ ಮಾಡಬೇಕಿದೆ. ಈ ನಡುವೆ ಉಳ್ಳವರು ಇನ್ನಷ್ಟು ಶ್ರೀಮಂತ ರಾದರೆ, ಬಡವರು ನಿಂತ ನೆಲದಲ್ಲೇ ನರಳಾಡುವಂಥ ಸ್ಥಿತಿ ಎದುರಾಗಿದೆ ಎಂದು ಹೇಳಿದರು.
ದೇಶ ಹಾಗೂ ರಾಜ್ಯದ ಚುಕ್ಕಾಣಿ ಹಿಡಿದ ಹಲವಾರು ರಾಜಕಾರಣಿಗಳು ಸರ್ಕಾರಿ ಶಾಲೆ, ಆಸ್ಪತ್ರೆ ಅಭಿ ವೃದ್ದಿಪಡಿಸುತ್ತಿಲ್ಲ. ಕೇವಲ ಮಾತಿಗಷ್ಟೇ ಸೀಮಿತರಾಗಿದ್ದಾರೆ. ಅವರ ಸ್ವಂತ ಖಾಸಗೀ ಶಾಲೆ, ಆಸ್ಪತ್ರೆಗಳ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ ಹೊರತು, ಸರ್ಕಾರ ಅಂಗಸಂಸ್ಥೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಸಾಮಾ ನ್ಯರ ಜನರಿಗೆ ನುಂಗಲಾರದ ತುತ್ತಾಗಿದೆ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳು ಸಂವಿಧಾನ ಮೂಲ ಆಶಯ ಅರ್ಥೈಸಿಕೊಳ್ಳಬೇಕು. ಮತದಾನದ ವೇಳೆ ಹಾದಿತಪ್ಪಿದ್ದಲ್ಲಿ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಲಿದೆ. ಹೀಗಾಗಿ ಚುನಾವಣಾ ಸುಧಾರ ಣೆಗೆ ಕಡ್ಡಾಯವಾಗಿ ಮತದಾನ ಮಾಡಬೇಕು. ಓರ್ವ ಶಾಸಕರು ಸಮರ್ಪಕ ಕೆಲಸ ನಿರ್ವಹಿಸದಿದ್ದಲ್ಲಿ ಸ್ಥಾನದಿಂದ ಕೆಳಗಿಳಿಸುವ ಕಾಯ್ದೆ ರಚನೆಯಾಗಬೇಕು ಎಂದು ಹೇಳಿದರು.
ಮೈಸೂರು ದಾರಿ ಫೌಂಡೇಷನ್ ಅಧ್ಯಕ್ಷ ಎಲ್.ರಂಗಯ್ಯ ಮಾತನಾಡಿ ಭವಿಷ್ಯದಲ್ಲಿ ದೇಶವನ್ನು ಸದೃಢ ಗೊಳಿಸಲು ಯುವಶಕ್ತಿಗಳ ಕೈಗಟ್ಟಿಯಾಗಬೇಕು. ಸಮಾಜದ ಸುಧಾರಣೆ ಯುವಕರಿಂದಲೇ ಸಾಧ್ಯವಾಗಿದ್ದು, ಹೆಚ್ಚಿನ ಮಟ್ಟಿನಲ್ಲಿ ಅರಿವನ್ನು ಹೊಂದುವ ಜೊತೆಗೆ ಸಮಾಜದ ಬದಲಾವಣೆಗೆ ಜಾತಿರಹಿತವಾಗಿ ಒಂದಾಗು ವ ಸದ್ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಐಡಿಎಸ್‌ಜಿ ಕಾಲೇಜು ಪ್ರಾಂಶುಪಾಲ ಡಾ|| ಆರ್.ದೇವಾನಂದ್ ಮಾತನಾಡಿ ಮತದಾನ ಪ್ರತಿಯೊಬ್ಬ ಮನುಷ್ಯನಿಗೆ ಅಮೂಲ್ಯವಾದ ಅಸ್ತ್ರ. ಈ ಸತ್ಯವನ್ನು ಮೊದಲಭಾರಿ ಮತಚಲಾಯಿಸುವ ಯುವಜನತೆ ಮನ ದಟ್ಟು ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ದಾರಿಪೌಂಢೇಷನ್ ನಡೆಸುತ್ತಿರುವ ಈ ಸಂವಾದದಲ್ಲಿ ಯುವಕರು ಅರ್ಥೈಸಿಕೊಂಡು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬದಲಾವಣೆ ಹೆಜ್ಜೆ ಮೂಡಿಸಬೇಕು ಎಂದರು.
ದಾರಿ ಪೌಂಡೇಷನ್ ಜಿಲ್ಲಾ ಸಂಚಾಲಕ ಡಾ|| ಕೆ.ಸುಂದರೇಗೌಡ ಮಾತನಾಡಿ ಅಂಬೇಡ್ಕರ್ ಸಂವಿಧಾ ನದಿಂದಲೇ ದೇಶದ ಉಜ್ವಲ ಭವಿಷ್ಯ ಸಾಧ್ಯ. ತುಳಿತ, ಶೋಷಣೆ ಹಾಗೂ ದೌರ್ಜನ್ಯಕ್ಕೆ ಒಳಗಾದವರು ಸಂವಿ ಧಾನದ ಯಾವುದೇ ಬಲಾಡ್ಯ ಶಕ್ತಿಗಳಿಗೆ ಎದೆಗುಂದದೇ ಸಂವಿಧಾನದ ಆಶಯದಲ್ಲಿ ಮುಂದೆ ಸಾಗಿದ್ದಲ್ಲಿ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಮೆಡಿಕಲ್ ಕಾಲೇಜಿಗೂ ದಾರಿ ಪೌಂಡೇಷನ್ ವತಿಯಿಂದ ಬೇಟಿ ನೀಡಿ ಅಲ್ಲಿನ ವೈದ್ಯಕೀ ಯ ವಿದ್ಯಾರ್ಥಿಗಳೊಂದಿಗೆ ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ, ಯುವ ಶಕ್ತಿಯ ಕೈಯಲ್ಲಿ ಮುಕ್ತ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ದಾರಿ ಪೌಂಡೇಷನ್ ಕಾರ್ಯದರ್ಶಿ ತಗಡೂರು ವೀರೇಶ್‌ಕುಮಾರ್ ಮಹಾಮನೆ, ಐಡಿಎಸ್‌ಜಿ ಕಾಲೇಜು ಸಹ ಪ್ರಾಧ್ಯಾಪಕ ಡಾ. ಕೆ.ಎನ್.ಲಕ್ಷ್ಮೀಕಾಂತ್, ಸಂಚಾಲಕ ಪ್ರಭಾಕರ್, ವಕೀಲರ ಸಂಘದ ಕಾರ್ಯದರ್ಶಿ ಅನಿಲ್‌ಕುಮಾರ್, ಹಾಗೂ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಹರೀಶ್ ಮುಂತಾ ದವರು ಉಪಸ್ಥಿತರಿದ್ದರು.
Voting is better than land donation cow donation or food donation.
Leave a comment