Home namma chikmagalur chikamagalur ಉದ್ಯಮ ವಿಸ್ತರಣೆಗೆ ‘ಇ-ಹರಾಜು’ ಸುವರ್ಣಾವಕಾಶ
chikamagalurHomeLatest Newsnamma chikmagalur

ಉದ್ಯಮ ವಿಸ್ತರಣೆಗೆ ‘ಇ-ಹರಾಜು’ ಸುವರ್ಣಾವಕಾಶ

Share
Share

ಚಿಕ್ಕಮಗಳೂರು:  ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮದ್ಯದ ಅಂಗಡಿಗಳ ಲೈಸೆನ್ಸ್ ಇ-ಹರಾಜು ಪ್ರಕ್ರಿಯೆಯು ಜಿಲ್ಲೆಯ ಹಾಗೂ ರಾಜ್ಯದ ಉದ್ಯಮಿಗಳಿಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಸಿಕ್ಕಿರುವ ಒಂದು ಸುವರ್ಣಾವಕಾಶ ಎಂದು ದಾವಣಗೆರೆ ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಬಿ.ಎಂ.ಅಶ್ವಿನಿ ಅಭಿಪ್ರಾಯಪಟ್ಟರು.

ನಗರದಲ್ಲಿ ಸೋಮವಾರ ಅಬಕಾರಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಜಿದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಇದ್ದ ನಿಯಮಗಳಿಗಿಂತ ಇಂದಿನ ತಂತ್ರಜ್ಞಾನ ಆಧಾರಿತ ಇ-ಹರಾಜು ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದೆ. ಆಸಕ್ತರು ಕೇವಲ ತಮ್ಮ ಸ್ವಂತ ಜಿಲ್ಲೆಯಷ್ಟೇ ಅಲ್ಲದೆ, ಕರ್ನಾಟಕ ರಾಜ್ಯಾದ್ಯಂತ ಲಭ್ಯವಿರುವ ಯಾವುದೇ ಜಿಲ್ಲೆಯ ಲೈಸೆನ್ಸ್‌ಗಳಿಗೂ ಮುಕ್ತವಾಗಿ ಬಿಡ್ ಮಾಡಬಹುದು. ಹೋಟೆಲ್ ಉದ್ಯಮಿಗಳು ತಮ್ಮ ಬ್ರ್ಯಾಂಡ್ ಅನ್ನು ರಾಜ್ಯಾದ್ಯಂತ ಹರಡುವಂತೆ, ಲೈಸೆನ್ಸ್‌ದಾರರು ಸಹ ಬೇರೆ ಬೇರೆ ಜಿಲ್ಲೆಗಳಲ್ಲಿ ತಮ್ಮ ಉದ್ಯಮ ಜಾಲವನ್ನು ವಿಸ್ತರಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದರು.

ರಾಜ್ಯದಲ್ಲಿ ಈ ಹಿಂದೆ ಸ್ಥಗಿತಗೊಂಡಿದ್ದ ಸಿಎಲ್-೨ ಮತ್ತು ಸಿಎಲ್-೯ ಲೈಸೆನ್ಸ್‌ಗಳನ್ನು ಈ ಪ್ರಕ್ರಿಯೆಯ ಮೂಲಕ ಹರಾಜು ಮಾಡಲಾಗುತ್ತಿದೆ. ಯಾವ ಯಾವ ಜಿಲ್ಲೆಗಳಲ್ಲಿ ಯಾವ ವರ್ಗದ ಲೈಸೆನ್ಸ್‌ಗಳು ಲಭ್ಯವಿವೆ ಎಂಬ ಸಂಪೂರ್ಣ ಮಾಹಿತಿಯು ಅಧಿಸೂಚನೆಯ ಪ್ರತಿಯಲ್ಲಿ ಲಭ್ಯವಿದೆ. ಅರ್ಜಿದಾರರು ತಮಗೆ ಸೂಕ್ತವಾದ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಿ ಇದರ ಸೌಲಭ್ಯ ಪಡೆಯಬಹುದು. ಇ-ಹರಾಜಿನಲ್ಲಿ ಮೀಸಲಾತಿ ಸೌಲಭ್ಯ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲವಿದೆ. ಅವರು ಮೀಸಲಾತಿ ವರ್ಗದಡಿಯಲ್ಲೂ ಬಿಡ್ ಮಾಡಬಹುದು ಹಾಗೂ ಸಾಮಾನ್ಯ ವರ್ಗದಡಿಯಲ್ಲೂ ಮುಕ್ತವಾಗಿ ಸ್ಪರ್ಧಿಸಬಹುದು. ಆದರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೇವಲ ಸಾಮಾನ್ಯ ವರ್ಗದಲ್ಲಿ ಮಾತ್ರ ಬಿಡ್ ಮಾಡಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈಗಾಗಲೇ ಜುಲೈ ೩ ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲೆಯ ಒಟ್ಟು ೧೨ ಲೈಸೆನ್ಸ್‌ಗಳಿಗೆ ಜುಲೈ ೨೪ ರಂದು ಮಧ್ಯಾಹ್ನ ೩ ಗಂಟೆಯಿಂದ ಸಂಜೆ ೫ ಗಂಟೆಯ ಅವಧಿಯ ಸ್ಲಾಟ್‌ನಲ್ಲಿ ಆನ್‌ಲೈನ್ ಮೂಲಕ ನೇರ ಬಿಡ್ಡಿಂಗ್ ನಡೆಯಲಿದೆ. ಹರಾಜಿನ ಮೂಲ ಬೆಲೆ ತೀರಾ ಹೆಚ್ಚೇನೂ ಇಲ್ಲ, ಇದು ಕೈಗೆಟುಕುವ ದರದಲ್ಲಿದೆ. ಆಸಕ್ತರು ಇದರ ಸಂಪೂರ್ಣ ಮಾಹಿತಿ ಹಾಗೂ ಹಂತ ಹಂತದ ಮಾರ್ಗದರ್ಶನವನ್ನು ಜಿಲ್ಲಾ ಅಬಕಾರಿ ಇಲಾಖಾ ಕಚೇರಿಯಿಂದ ಪಡೆದುಕೊಂಡು ಯಶಸ್ವಿಯಾಗಿ ಬಿಡ್ ಸಲ್ಲಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಎಂ.ರೂಪ ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತರಲಾಗುತ್ತಿರುವ ಇ-ಹರಾಜು ಪ್ರಕ್ರಿಯೆಯು ಪಾರದರ್ಶಕತೆಗೆ ಹೆಚ್ಚು ಒತ್ತು ನೀಡಲಿದ್ದು, ಅರ್ಜಿದಾರರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು ಎರಡು ವಿಭಾಗದ ಲೈಸೆನ್ಸ್‌ಗಳ ಇ-ಹರಾಜು ನಡೆಯುತ್ತಿದ್ದು, ಒಟ್ಟು ೫೭೯ ಸನ್ನದುಗಳನ್ನು ಈ ಪ್ರಕ್ರಿಯೆಯ ಮೂಲಕ ಹರಾಜು ಮಾಡಲಾಗುತ್ತಿದೆ. ಇದರಲ್ಲಿ ೪೮೩ ಸಿ.ಎಲ್-೨ ಹಾಗೂ ೯೬ ಸಿ.ಎಲ್-೯ ಸನ್ನದುಗಳು ಸೇರಿವೆ. ಈ ಸನ್ನದುಗಳ ಅವಧಿಯು ಒಟ್ಟು ೫ ವರ್ಷಗಳಾಗಿದ್ದು, ೨೦೨೬-೨೭ನೇ ಸಾಲಿನಿಂದ ಹಿಡಿದು ೨೦೨೯-೩೦ರ ಸಾಲಿನ ಅವಧಿಗೆ ಅನ್ವಯವಾಗಲಿವೆ. ಹರಾಜಿನ ಸಂಪೂರ್ಣ ವಿವರಗಳು ಹಾಗೂ ಅಧಿಸೂಚನೆ ಪ್ರತಿಯು ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಸರ್ಕಾರವು ಚಿಕ್ಕಮಗಳೂರು ಜಿಲ್ಲೆಗೆ ಒಟ್ಟು ೧೨ ಸಿ.ಎಲ್-೨ಎ ಸನ್ನದುಗಳನ್ನು ನಿಗದಿಪಡಿಸಿದೆ. ಜಿಲ್ಲೆಯ ಆರು ವಲಯಗಳಾದ ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ ಹಾಗೂ ತರೀಕೆರೆ ವ್ಯಾಪ್ತಿಗೆ ತಲಾ ಎರಡರಂತೆ ಲೈಸೆನ್ಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ವಿಶೇಷವೆಂದರೆ, ಈ ಬಾರಿ ಪ್ರಥಮ ಬಾರಿಗೆ ಮೀಸಲಾತಿ ವ್ಯವಸ್ಥೆಯನ್ನು ತರಲಾಗಿದ್ದು, ಚಿಕ್ಕಮಗಳೂರು, ಕಡೂರು ಮತ್ತು ಕೊಪ್ಪ ತಾಲೂಕುಗಳಲ್ಲಿ ತಲಾ ಒಂದು ಲೈಸೆನ್ಸ್ ಅನ್ನು ಎಸ್‌ಸಿ ಮತ್ತು ಎಸ್‌ಟಿ ವರ್ಗದ ವಿವಿಧ ಕೆಟಗರಿಗಳಿಗೆ ಕಾಯ್ದಿರಿಸಲಾಗಿದೆ. ಇನ್ನುಳಿದ ಸನ್ನದುಗಳು ಸಾಮಾನ್ಯ ವರ್ಗಕ್ಕೆ ಲಭ್ಯವಿರಲಿವೆ ಎಂದು ಅವರು ವಿವರಿಸಿದರು.

ಚಿಕ್ಕಮಗಳೂರು ತಾಲೂಕಿಗೆ ರೂ.೯೦ ಲಕ್ಷ, ಕಡೂರು ಹಾಗೂ ತರೀಕೆರೆ ತಾಲೂಕುಗಳಿಗೆ ತಲಾ ರೂ. ೮೦ ಲಕ್ಷ ನಿಗದಿಯಾಗಿದೆ. ಅದೇ ರೀತಿ ಮೂಡಿಗೆರೆ, ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕುಗಳಿಗೆ ತಲಾ ರೂ.೭೦ ಲಕ್ಷ ಆರಂಭಿಕ ಬಿಡ್ ಮೊತ್ತವಾಗಿ ನಿಗದಿಪಡಿಸಲಾಗಿದೆ ಎಂದರು.

ಹರಾಜಿನಲ್ಲಿ ಯಶಸ್ವಿ ಬಿಡ್‌ದಾರರಾದವರು ನಿಯಮ ೫ ರ ಅಡಿಯಲ್ಲಿ ಯಾವುದೇ ಆಕ್ಷೇಪಣೆ ಇಲ್ಲದ ಸ್ಥಳಗಳನ್ನು ಗುರುತಿಸಿ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಯಶಸ್ವಿ ಬಿಡ್‌ದಾರರು ಮರಣ ಹೊಂದಿದಲ್ಲಿ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ನಿಯಮ ೧೭ಎ ಅನ್ವಯ ಅವರ ಕುಟುಂಬದ ಸದಸ್ಯರಿಗೆ ಯಾವುದೇ ಶುಲ್ಕವಿಲ್ಲದೆ ಸನ್ನದನ್ನು ವರ್ಗಾಯಿಸಲು ಅವಕಾಶವಿದೆ. ಆದರೆ ನಿಯಮ ೧೭ಬಿ ಈ ಪ್ರಕ್ರಿಯೆಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಜುಲೈ ೬ ರಿಂದ ಆರಂಭವಾಗಿರುವ ಇ-ಹರಾಜು ತರಬೇತಿ ಪ್ರಕ್ರಿಯೆಯು ನಾಳೆ (ಜುಲೈ ೧೪) ಮುಕ್ತಾಯಗೊಳ್ಳಲಿದ್ದು, ಬಿಡ್ಡಿಂಗ್ ಪ್ರಕ್ರಿಯೆಯು ಇದೇ ತಿಂಗಳ ೨೪ನೇ ತಾರೀಖಿನಿಂದ ಆರಂಭವಾಗಲಿದೆ. ಚಿಕ್ಕಮಗಳೂರು ಜಿಲ್ಲೆಯ ಬಿಡ್ಡಿಂಗ್ ಜುಲೈ ೨೪ರಂದು ಮಧ್ಯಾಹ್ನ ೩ ಗಂಟೆಯ ಸೆಷನ್‌ನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಂ.ಎಸ್.ಟಿ.ಸಿ ಸಂಸ್ಥೆಯ ತಾಂತ್ರಿಕ ತಂಡದ ತಜ್ಞರು ಭಾಗವಹಿಸಿ, ನೋಂದಣಿ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಹಾಗೂ ಇ-ಹರಾಜಿನಲ್ಲಿ ಭಾಗವಹಿಸುವ ವಿಧಾನಗಳ ಕುರಿತು ಅರ್ಜಿದಾರರಿಗೆ ಪ್ರಾಯೋಗಿಕ ತರಬೇತಿ ಹಾಗೂ ಹಂತ-ಹಂತದ ಮಾಹಿತಿಯನ್ನು ನೀಡಿದರು.

E-auction is a golden opportunity for business expansion

Share

Leave a comment

Leave a Reply

Your email address will not be published. Required fields are marked *

Don't Miss

ಪ್ರವಾಸೋದ್ಯಮ ತಾಣಗಳಿಗೆ ಮೂಲಸೌಕರ್ಯಕ್ಕೆ ಆಗ್ರಹಿಸಿ ಕರವೇ ಧರಣಿ

ಚಿಕ್ಕಮಗಳೂರು:  ಮಲೆನಾಡಿನ ಪಶ್ಚಿಮ ಘಟ್ಟ ಪ್ರವಾಸೋದ್ಯಮದ ಹಲವಾರು ಸಮಸ್ಯೆಗಳ ನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ವಿರುದ್ಧ ಸೋಮವಾರ ಜಿಲ್ಲಾ ಕರವೇ (ಶಿವರಾಮೇ ಗೌಡ ಬಣ) ಮುಖಂಡರುಗಳು ಅರೆಬೆತ್ತಲಾಗಿ, ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು,...

ಮಲ್ಲೇಗೌಡ ಆಸ್ಪತ್ರೆ ಆರೋಗ್ಯ ಸೇವೆ ಬಲಪಡಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಸೋಮವಾರ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ಸಿಗುತ್ತಿರುವ ಆರೋಗ್ಯ ಸೇವೆಗಳನ್ನು...

Related Articles

ಜಯಪುರ ಠಾಣೆಯ ಮಹಿಳಾ ಸಿಬ್ಬಂದಿಗೆ ಬಾಗಿನ

ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ...

ಟ್ರಾಕ್ಟರ್ ಹರಿಸಿ ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ನಾಶ

ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ...

ಸಚಿವ ಕೃಷ್ಣಬೈರೇಗೌಡ ಹೇಳಿಕೆ ಖಂಡನೀಯ

ಚಿಕ್ಕಮಗಳೂರು- ಬೆಂಗಳೂರು ನಗರ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸಚಿವ ಕೃ?ಬೈರೇಗೌಡರು ಪೌರಕಾರ್ಮಿಕರ ಬಗ್ಗೆ ತುಚ್ಚವಾಗಿ ಮಾತನಾಡಿರುವುದನ್ನು...

ಮುಂದಿನ ದಿನಗಳಲ್ಲಿ ದೇವಾಲಯದ ಜಿರ್ಣೋದ್ದಾರಕ್ಕೆ ಅನುದಾನ

ಬೀರೂರು:ಕಾಂಗ್ರೆಸ್ ಸರಕಾರದಲ್ಲಿ ನನ್ನಂತ ಹಿಂದುಳಿದ ವರ್ಗದ ಶಾಸಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ ಮಾಜಿ ಮುಖ್ಯಮಂತ್ರಿ...