ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ ಫಾಲ್ಸ್ (Hebbe Falls) ಧುಮ್ಮಿಕ್ಕಿ ಹರಿಯುತ್ತಿದೆ.
ಹೆಬ್ಬೆ ಜಲಪಾತದಲ್ಲಿ ಸುಮಾರು 100 ಅಡಿಗೂ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರೋ ಫಾಲ್ಸ್ನ ಜಲವೈಭವ ನೋಡಲು ಪ್ರವಾಸಿಗರ ದಂಡೇ ಬರುತ್ತಿದೆ. ಈ ಜಲಪಾತಕ್ಕೆ ಸ್ಥಳಿಯರು, ಪ್ರವಾಸಿಗರು ಮಿನಿ ಜೋಗ ಎಂದೇ ಕರೆಯುತ್ತಾರೆ.
ಕೆಮ್ಮಣ್ಣುಗುಂಡಿ ತಪ್ಪಲಿನ ಕಾಡು ಹಾಗೂ ಕಾಫಿತೋಟಗಳ ಮಧ್ಯೆ ಈ ಜಲಪಾತ ಇದೆ. ಈ ಪರಿಸರದಿಂದ ಜಲಪಾತದ ಸೌಂದರ್ಯ ಇಮ್ಮಡಿಗೊಂಡಿದೆ. ಈ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಬರುತ್ತಿದೆ.
Leave a comment