ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ ವಿಗ್ರಹಗಳಿಗೆ ಅಲಂಕರಿಸಲಾಗಿದ್ದ ಬೆಳ್ಳಿ ಆಭರಣಗಳನ್ನು ಕಳ್ಳರು ಕಳವು ಮಾಡಿದ್ದಾರೆ.
ಚೌಡೇಶ್ವರಿ ದೇವಿಗೆ ಅಳವಡಿಸಿದ್ದ ಸುಮಾರು 400 ಗ್ರಾಂ ತೂಕದ ನಾಲ್ಕು ಬೆಳ್ಳಿ ಛತ್ರಿಗಳು, ಈಶ್ವರ ದೇವರಿಗೆ ಅರ್ಪಿಸಲಾಗಿದ್ದ 400 ಗ್ರಾಂ ತೂಕದ ಎರಡು ಬೆಳ್ಳಿ ಕೊಳಗ ಹಾಗೂ 100 ಗ್ರಾಂ ತೂಕದ ಬೆಳ್ಳಿ ತ್ರಿಶೂಲ ಕಳುವಾಗಿದೆ. ಕಳುವಾದ ಆಭರಣಗಳ ಒಟ್ಟು ತೂಕ 900 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ₹70 ಸಾವಿರ ಎಂದು ತಿಳಿದುಬಂದಿದೆ.
ಎರಡೂ ದೇವಾಲಯಗಳ ಬಾಗಿಲಿನ ಚಿಲಕ ಮುರಿದು ಒಳನುಗ್ಗಿ ಕಳವು ಮಾಡಿರುವುದನ್ನು ಬುಧವಾರ ಬೆಳಿಗ್ಗೆ ಪೂಜೆಗೆ ತೆರಳಿದ ಚೌಡೇಶ್ವರಿ ದೇವಾಲಯದ ಅರ್ಚಕ ಎಸ್.ಕೆ. ನಾಗರಾಜು ಹಾಗೂ ಈಶ್ವರ ದೇವಾಲಯದ ಅರ್ಚಕ ನಾಗರಾಜು ಎಸ್.ಕೆ. ಅವರು ಗಮನಿಸಿದರು.
ಬಳಿಕ ದೇವಾಲಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಿವಣ್ಣ ಅವರಿಗೆ ಮಾಹಿತಿ ನೀಡಲಾಯಿತು. ಅವರ ನೀಡಿದ ದೂರಿನ ಮೇರೆಗೆ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Jewelry theft at Sri Eeshwara-Chowdeshwari temples
Leave a comment