ಚಿಕ್ಕಮಗಳೂರು: ಮಲೆನಾಡಿನ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ ಆರ್ವಿಆರ್ ಹೆಲ್ತ್ಕೇರ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜುಲೈ ೫ರಂದು ಆಯೋಜಿಸಲಾಗಿದೆ.
ಶಿಬಿರವು ಬೆಳಿಗ್ಗೆ ೯ ಗಂಟೆಯಿಂದ ನಗರದ ಹಿರೇಮಗಳೂರು ವೃತ್ತದ ಸಮೀಪ, ಕಲ್ಯಾಣ ಮಂಟಪದ ಎದುರು, ಬೆಲೂರು ರಸ್ತೆಯಲ್ಲಿರುವ ಆರ್ಸಿ ಕಂಫರ್ಟ್ಸ್ ಕಟ್ಟಡದಲ್ಲಿ ನಡೆಯಲಿದೆ.
ಕರಾವಳಿ ಕರ್ನಾಟಕದಾದ್ಯಂತ ಸಾವಿರಾರು ರೋಗಿಗಳ ವಿಶ್ವಾಸ ಗಳಿಸಿರುವ ಆರ್ವಿಆರ್ ಹೆಲ್ತ್ಕೇರ್ ತಜ್ಞ ವೈದ್ಯರ ತಂಡ ಈ ಶಿಬಿರದಲ್ಲಿ ಭಾಗವಹಿಸಲಿದ್ದು, ಹಿರಿಯ ನರರೋಗ ತಜ್ಞ ಹಾಗೂ ಸಂಸ್ಥೆಯ ನಿರ್ದೇಶಕರಾದ ಡಾ. (ಪ್ರೊ.) ರಾಘವೇಂದ್ರ ಬಿ.ಎಸ್. ಅವರ ನೇತೃತ್ವದಲ್ಲಿ ವಿವಿಧ ತಜ್ಞ ವೈದ್ಯರು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ ಹಾಗೂ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.
ಶಿಬಿರದಲ್ಲಿ ಕ್ಯಾನ್ಸರ್, ನರರೋಗ ಹಾಗೂ ಸಂಧಿವಾತ ಸಂಬಂಧಿತ ಆರೋಗ್ಯ ಸಮಸ್ಯೆಗಳ ಕುರಿತು ಉಚಿತ ತಪಾಸಣೆ ನಡೆಸಲಾಗುತ್ತದೆ. ಜೊತೆಗೆ ರೋಗದ ಆರಂಭಿಕ ಲಕ್ಷಣಗಳ ಪತ್ತೆ, ಸೂಕ್ತ ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಜೀವನಶೈಲಿ ಸಂಬಂಧಿತ ಸಲಹೆಗಳನ್ನು ವೈದ್ಯರು ನೀಡಲಿದ್ದಾರೆ.
ಮಲೆನಾಡು ಭಾಗದ ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆರ್ವಿಆರ್ ಹೆಲ್ತ್ಕೇರ್ ಪ್ರಕಟಣೆಯಲ್ಲಿ ಮನವಿ ಮಾಡಿದೆ.
Free health check-up camp on July 5th
Leave a comment