ಶೃಂಗೇರಿ: ಬೇಸಿಗೆ ರಜಾ ಕಳೆಯಲು ಅಜ್ಜಿ ಮನೆಗೆ ಬಂದ ಸಂದರ್ಭದಲ್ಲಿ ಬಾಲಕಿಯೊಬ್ಬಳು ಆಟವಾಡುತ್ತಿದ್ದ ವೇಳೆ ಹಗ್ಗಕ್ಕೆ ಸಿಲುಕಿ ಮೃತಪಟ್ಟ ಘಟನೆ ತಾಲ್ಲೂಕಿನ ಬೆಟ್ಟಗೆರೆ ವ್ಯಾಪ್ತಿಯ ಕಲ್ಲೊಳ್ಳಿ ಗ್ರಾಮದಲ್ಲಿ ನಡೆದಿದೆ ಮೃತ ಬಾಲಕಿಯನ್ನು ಸಪ್ತಮಿ[೧೪] ಎಂದು ಗುರುತಿಸಲಾಗಿದೆ.
ಆಕೆ ಮರ್ಕಲ್ ಗ್ರಾ.ಪಂ ವ್ಯಾಪ್ತಿಯ ಕೋಗಿನಬೈಲಿನ ಶ್ರೀ ಗಜೇಂದ್ರ ಅವರ ಪುತ್ರಿ.ಸಪ್ತಮಿ ತನ್ನ ತಾಯಿ ಶುಭಾ ಅವರ ಜೊತೆ ಬೇಸಿಗೆ ರಜೆಗೆಂದು ಅಜ್ಜೆ ಮನೆಗೆ ಬಂದಿದ್ದಳು ಊಟದ ಬಳಿಕ ಮನೆಯವರು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಬಾಲಕಿ ಮರದ ಏಣಿಯಿಂದ ಇಳಿಯಲು ಕಟ್ಟಿದ ನೈಲಾನ್ ಬಟ್ಟೆಯಿಂದ ಮಾಡಿದ ಹಗ್ಗವನ್ನು ಹಿಡಿದು ಆಟವಾಡುತ್ತಿದ್ದು ಕೆಳಗೆ ಇಳಿಯುವ ಸಂದರ್ಭದಲ್ಲಿ ಕಾಲು ತಪ್ಪಿ ಬಿದ್ದ ಪರಿಣಾಮ ಹಗ್ಗವು ಕುತ್ತಿಗೆಗೆ ಸಿಕ್ಕಿಕೊಂಡಿದ್ದು ಉಸಿರುಗಟ್ಟಿ ಬಾಲಕಿ ಮೃತ ಪಟ್ಟಿದ್ದಾಳೆ.
ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ತಂದೆ,ತಾಯಿ,ಓರ್ವ ಸಹೋದರನನ್ನು ಸಪ್ತಮಿ ಅಗಲಿದ್ದಾಳೆ.ಕೋಗಿನಬೈಲಿನ ಸರಕಾರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಸಪ್ತಮಿ ಉತ್ತೀರ್ಣಗೊಂಡಿದ್ದಳು. ಅಕೆಯ ಅಂತಿಮಸಂಸ್ಕಾರ ಕೋಗಿನಬೈಲಿನ ಅವರ ಜಮೀನು ಸಮೀಪ ನೆರವೇರಿತು.
Girl dies after getting caught in rope while playing
Leave a comment