Home namma chikmagalur chikamagalur ಪರವಾನಗಿ ಇಲ್ಲದ ಅಕ್ರಮ ಸಿಂಗಲ್ ಬ್ಯಾರೆಲ್ ಬಂದೂಕು ವಶ
chikamagalurHomeLatest Newsnamma chikmagalur

ಪರವಾನಗಿ ಇಲ್ಲದ ಅಕ್ರಮ ಸಿಂಗಲ್ ಬ್ಯಾರೆಲ್ ಬಂದೂಕು ವಶ

Share
Share

ಚಿಕ್ಕಮಗಳೂರು: ಪರವಾನಗಿ ಇಲ್ಲದೆ ಮನೆಯಲ್ಲಿ ಇಟ್ಟುಕೊಂಡಿದ್ದ ಅಕ್ರಮ ಸಿಂಗಲ್ ಬ್ಯಾರೆಲ್ ಬಂದೂಕನ್ನು (ಎಸ್‌ಬಿಎಂಎಲ್) ಆಲ್ಲೂರು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹರವಿನಗಂಡಿ ಸಮೀಪದ ಅಡ್ಡಮಕ್ಕಿಯಲ್ಲಿ ನಡೆದಿದೆ.

ದಾಳಿಯ ವೇಳೆ ಮನೆಯನ್ನು ತಪಾಸಣೆ ನಡೆಸಿದಾಗ ಯಾವುದೇ ಕಾನೂನುಬದ್ಧ ದಾಖಲೆ ಅಥವಾ ಪರವಾನಗಿ ಇಲ್ಲದ 56 ಇಂಚು ಉದ್ದದ ಒಂಟಿ ನಳಿಕೆಯ ಮಸಿ ಬಂದೂಕು ಪತ್ತೆಯಾಗಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಧರ್ಮೇಶ್, ಈ ಬಂದೂಕು ತನ್ನ ತಂದೆಯ ಕಾಲದಿಂದಲೂ ಮನೆಯಲ್ಲಿದ್ದು, ಇದಕ್ಕೆ ಯಾವುದೇ ಪರವಾನಗಿ ಇಲ್ಲ ಎಂದು ಒಪ್ಪಿಕೊಂಡಿದ್ದಾನೆ.

ಮರದ ಬಟ್ ಹಾಗೂ ಕಬ್ಬಿಣದ ನಳಿಕೆ ಹೊಂದಿರುವ ಈ ಬಂದೂಕಿನ ನಳಿಕೆಯು 39.5 ಇಂಚು ಮತ್ತು ಬಟ್ 27 ಇಂಚು ಉದ್ದವಿದ್ದು, ಎರಡು ಕಡೆ ಹಿತ್ತಾಳೆ ಲೋಹದ ಪಟ್ಟಿಯನ್ನು ಸುತ್ತಲಾಗಿದೆ. ಬಂದೂಕಿನೊಂದಿಗೆ ಒಂದು ಗಜ ಕಡ್ಡಿಯನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆ ವೇಳೆ ಅದರಲ್ಲಿ ಯಾವುದೇ ಮಸಿ ಗುಂಡುಗಳು ಪತ್ತೆಯಾಗಿಲ್ಲ.

ಸದ್ಯ ಅಕ್ರಮ ಆಯುಧದ ಜೊತೆಗೆ ಆರೋಪಿಯನ್ನು ಬಂಧಿಸಿರುವ ಆಲ್ಲೂರು ಠಾಣಾ ಪೊಲೀಸರು, ಆರೋಪಿಯ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Illegal single barrel firearm seized without a license

Share

Leave a comment

Leave a Reply

Your email address will not be published. Required fields are marked *

Don't Miss

ಗ್ರಾಹಕರಿಗೆ ಬಡ್ಡಿ ಸಹಿತ ವಿಮಾ ಕಂತು ಮರಳಿಸುವಂತೆ ಆದೇಶ

ಚಿಕ್ಕಮಗಳೂರು : ಖಾತೆದಾರರ ಒಪ್ಪಿಗೆ ಪಡೆಯದೆ ಅವರ ಖಾತೆಯಿಂದ ಹಣ ಮುರಿದುಕೊಂಡು ವಿಮಾ ಪಾಲಿಸಿ ಖರೀದಿಸಿ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಕೋಟಕ್ ಮಹೀಂದ್ರಾ ಓಲ್ಡ್ ಮ್ಯೂಚ್ಯುಯಲ್ ಲೈಫ್ ಇನ್‌ಶೂರೆನ್ಸ್ ಲಿಮಿಟೆಡ್...

ಲೋಕಾಯುಕ್ತ ಬಲೆಗೆ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು

ಚಿಕ್ಕಮಗಳೂರು: ರೈತನೊಬ್ಬನಿಂದ ಖಾತೆ ಬದಲಾವಣೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಕಚೇರಿಯಲ್ಲಿ ನಡೆದಿದೆ. ತರೀಕೆರೆ ತಾಲೂಕಿನ...

Related Articles

“ಶಿವಾನಂದ ನೀಲಣ್ಣವ‌ರ್ ಕೊಡುಗೆ” ನಾಮಫಲಕ ತೆರವು

ಕಡೂರು: ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರನ್ನು...

ಆಟವಾಡುತ್ತಿದ್ದ ವೇಳೆ ಹಗ್ಗಕ್ಕೆ ಸಿಲುಕಿ ಬಾಲಕಿ ಸಾವು

ಶೃಂಗೇರಿ: ಬೇಸಿಗೆ ರಜಾ ಕಳೆಯಲು ಅಜ್ಜಿ ಮನೆಗೆ ಬಂದ ಸಂದರ್ಭದಲ್ಲಿ ಬಾಲಕಿಯೊಬ್ಬಳು ಆಟವಾಡುತ್ತಿದ್ದ ವೇಳೆ ಹಗ್ಗಕ್ಕೆ...

ಕಾಮೇನಹಳ್ಳಿ ಮೀಸಲು ಅರಣ್ಯದಲ್ಲಿ ಕ್ಯಾಮೆರಾ ಕಳವು

ಚಿಕ್ಕಮಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಮೇಲೆ ಕಣ್ಣಿಡಲು ಅಳವಡಿಸಲಾಗಿದ್ದ ಅತ್ಯಾಧುನಿಕ ಕ್ಯಾಮೆರಾಗಳನ್ನೇ ಖದೀಮರು ಹೊತ್ತೊಯ್ದಿರುವ...

ಶೃಂಗೇರಿಯ ಅಂಚೆ ಮತಗಳ ಎಣಿಕೆ-ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ

ಚಿಕ್ಕಮಗಳೂರು: ಜಿಲ್ಲಾಧಿಕಾರಿಯಾಗಿದ್ದ ಎನ್.ಎಂ. ನಾಗರಾಜ್ ಅವರ ದಿಢೀರ್ ವರ್ಗಾವಣೆ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಲೆನಾಡು,...