Home namma chikmagalur chikamagalur ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನ ತೀರ್ಥಂಕರ ವಿಗ್ರಹ ಪತ್ತೆ
chikamagalurHomeLatest Newsnamma chikmagalur

ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನ ತೀರ್ಥಂಕರ ವಿಗ್ರಹ ಪತ್ತೆ

Share
Share

ಚಿಕ್ಕಮಳೂರು: ಕಡೂರು ತಾಲ್ಲೂಕಿನ ದೊಡ್ಡ ಪಟ್ಟಣಗೆರೆ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕುರುಬಗೆರೆ ಶ್ರೀಕಟ್ಟೆ ಹೊಳೆಯಮ್ಮ ದೇವಾಲಯದ ಎಡಭಾಗದಲ್ಲಿ ಹರಿಯುವ ವೇದಾ ನದಿ ಪಾತ್ರದಲ್ಲಿ, ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನ ತೀರ್ಥಂಕರ ವಿಗ್ರಹಗಳನ್ನು ಇತಿಹಾಸ ಸಂಶೋಧಕ ಕಳಸದ ಎಚ್.ಆರ್. ಪಾಂಡುರಂಗ ಶೋಧನೆ ಮಾಡಿದ್ದಾರೆ.

ಈ ಶಿಲಾ ವಿಗ್ರಹಗಳಲ್ಲಿ ಬಲಭಾಗದ ಮೊದಲನೆಯ ವಿಗ್ರಹವು ಸಿಂಹಪೀಠದ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದು, ಹಿಂಭಾಗದಲ್ಲಿ ಇಬ್ಬರು ಚಾಮರಧಾರಿಗಳ ಶಿಲ್ಪಗಳಿವೆ. ವಿಗ್ರಹದ ಮುಖದ ಮುಂಭಾಗ ಸವೆದಿದೆ. ಬಳಪದ ಕಲ್ಲಿನ ಈ ವಿಗ್ರಹವು ೧.೩೪ ಮೀಟರ್ ಎತ್ತರ ಹಾಗೂ ೦.೯೦ ಮೀಟರ್ ಅಗಲವಿದೆ. ವಿಗ್ರಹವನ್ನು ಸ್ಥಳೀಯರು ಮೊದಲಿನಿಂದಲೂ ಸಂತಾನ ಫಲ ನೀಡುವ ‘ಗಂಗಮ್ಮ’ ಎಂದು ಕರೆಯುತ್ತಿದ್ದು, ಮಕ್ಕಳಿಲ್ಲದ ಸ್ತ್ರೀಯರು ಈ ವಿಗ್ರಹವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಬೆಳಗಿನ ಜಾವ ಪೂಜೆ ಮಾಡುವುದರಿಂದ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆಯಿಂದ ಈಗಲೂ ಪೂಜಿಸುತ್ತಿದ್ದಾರೆ. ವಿಗ್ರಹದ ಶಿಲ್ಪ ಲಕ್ಷಣದ ಆಧಾರದ ಮೇಲೆ ಇದು ಹೊಯ್ಸಳರ ಕಾಲದ ತೀರ್ಥಂಕರ ವಿಗ್ರಹವೆಂದು ಸಂಶೋಧಕ ಪಾಂಡುರಂಗ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದು ವಿಗ್ರಹವು ಪದ್ಮಾಸನ ಭಂಗಿಯಲ್ಲಿದ್ದು, ಹಿಂಭಾಗದ ಪ್ರಭಾವಳಿಯ ಎರಡೂ ಕಡೆ ನಿಂತಿರುವ ಸಿಂಹ ಹಾಗೂ ಗಜಮುಖದ ಶಿಲ್ಪಗಳಿವೆ. ಮೂರ್ತಿಯ ಹಿನ್ನೆಲೆಯಲ್ಲಿ ಸರ್ವಾಲಂಕೃತವಾದ ಚಾಮರಧಾರೀ ಪುರುಷರ ಶಿಲ್ಪಗಳಿವೆ. ವಿಗ್ರಹದ ತಲೆಯ ಮೇಲೆ ಮೂರು ಹಂತದ ಮುಕ್ಕೊಡೆ ಶಿಲ್ಪವಿದೆ. ಈ ವಿಗ್ರಹ ಬಹು ಸುಂದರವಾಗಿದ್ದು, ೧.೨೫ ಮೀಟರ್ ಎತ್ತರ ಹಾಗೂ ೦.೭೯ ಮೀಟರ್ ಅಗಲ ಹೊಂದಿದೆ. ಶಿಲ್ಪ ಲಕ್ಷಣದ ಆಧಾರದ ಮೇಲೆ ಈ ವಿಗ್ರಹವೂ ಹೊಯ್ಸಳರ ಕಾಲದ್ದಾಗಿದ್ದು, ತೀರ್ಥಂಕರ ವಿಗ್ರಹವೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಎರಡು ಜೈನ ತೀರ್ಥಂಕರ ವಿಗ್ರಹಗಳ ಲಭ್ಯತೆಯ ಹಿನ್ನೆಲೆಯಲ್ಲಿ ದೊಡ್ಡಪಟ್ಟಣಗೆರೆ ಪ್ರದೇಶವು ೧೨-೧೩ನೇ ಶತಮಾನದಲ್ಲಿ ಹೊಯ್ಸಳರ ಆಡಳಿತಕ್ಕೆ ಒಳಪಟ್ಟು, ದ್ವಿಕೂಟ ಜೈನಬಸದಿಯೊಂದು ಇದ್ದು ಆ ಬಸದಿಯ ಮೂಲನಾಯಕ ತೀರ್ಥಂಕರರದ್ದೇ ಈ ವಿಗ್ರಹಗಳಾಗಿರುವ ಸಾಧ್ಯತೆಗಳಿವೆ. ಕಾಲದ ಪ್ರಭಾವ ಹಾಗೂ ಮತಸಂಘರ್ಷಗಳ ಕಾರಣದಿಂದ ಬಸದಿ ನಾಶವಾಗಿದ್ದು, ಈ ವಿಗ್ರಹಗಳನ್ನು ವೇದಾ ನದಿಗೆ ಎಸೆದಿರುವ ಸಾಧ್ಯತೆಗಳಿವೆ. ಈ ವಿಗ್ರಹಗಳ ಪಾದಪೀಠದಲ್ಲಿ ಲಾಂಛನಗಳು ಲಭ್ಯವಿಲ್ಲದ ಕಾರಣ ಇವು ಯಾವ ತೀರ್ಥಂಕರ ವಿಗ್ರಹಗಳೆಂದು ಹೇಳಲು ಸಾಧ್ಯವಾಗುತ್ತಿಲ್ಲ ಮತ್ತು ಈ ವಿಗ್ರಹಗಳಿದ್ದ ಜೈನ ಬಸದಿ ಅಸ್ತಿತ್ವದ ಕುರಿತು ಹೆಚ್ಚಿನ ಸಂಶೋಧನೆ ನಡೆಸಿದ್ದೇನೆ ಎಂದು ಎಚ್.ಆರ್. ಪಾಂಡುರಂಗ ತಿಳಿಸಿದ್ದಾರೆ.

ಕಟ್ಟೆಹೊಳೆಯಮ್ಮ ದೇವಾಲಯದ ಆಡಳಿತ ಮಂಡಳಿ ಪ್ರಮುಖರಾದ ಎಸ್.ಬಿ. ಹನುಮಂತಪ್ಪ ಮತ್ತು ಕೆ.ಎಂ. ಮಲ್ಲೇಶಪ್ಪ ಹಾಗೂ ದೇವಾಲಯದ ಅರ್ಚಕ ಟಿ. ಆನಂದ್ ಅವರು ಈ ತೀರ್ಥಂಕರ ವಿಗ್ರಹಗಳ ಶೋಧನಾ ಕ್ಷೇತ್ರ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Two unpublished Jain Tirthankara idols from the Hoysala period discovered

Share

Leave a comment

Leave a Reply

Your email address will not be published. Required fields are marked *

Don't Miss

ಕಳವಾದ ₹11 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶ

ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೆಣಸೆ ಗ್ರಾಮದ ಕನ್ಯಾಕುಮಾರಿ ದೇವಸ್ಥಾನ ಹಾಗೂ ಯಡದಳ್ಳಿಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಗಳಲ್ಲಿ ಒಡವೆ ಹಾಗೂ ಹಣ ಕಳ್ಳತನ ಮಾಡಿದ್ದ ಇಬ್ಬರು ಅಂತರ್ ಜಿಲ್ಲಾ ಆರೋಪಿಗಳನ್ನು...

ಐಡಿಎಸ್‌ಜಿ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

ಚಿಕ್ಕಮಗಳೂರು: ಶಿಕ್ಷಣ, ಜೀವನದ ಒಂದು ಭಾಗ. ಇದರ ಬಗ್ಗೆ ವಿದ್ಯಾರ್ಥಿಗಳು ಅರಿಯಬೇಕು, ಪಠ್ಯದ ಜತೆಗೆ, ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುವುದರಿಂದ ಜ್ಞಾನಾರ್ಜನೆಗೆ ಸಹಕಾರಿ ಆಗಲಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅವರು ಹೇಳಿದರು. ನಗರದ...

Related Articles

ಶಾಸಕ ಎಚ್.ಡಿ.ತಮ್ಮಯ್ಯರಿಂದ ಸೈಕಲ್ ತುಳಿ ಸಮಸ್ಯೆ ತಿಳಿ ಕಾರ್ಯಕ್ರಮ

ಚಿಕ್ಕಮಗಳೂರು:  ನಗರದ ವಿವಿಧೆಡೆ ಶಾಸಕ ಎಚ್.ಡಿ.ತಮ್ಮಯ್ಯ ಅವರು ಅಧಿಕಾರಿಗಳೊಂದಿಗೆ ಹಾಗೂ ಸ್ಥಳೀಯ ನಗರಸಭಾ ಸದಸ್ಯರೊಂದಿಗೆ ಶುಕ್ರವಾರ...

ಕೇಂದ್ರದ ಬಿಜೆಪಿ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯ್ತಿಗಳಿಗೆ ೧೫ನೇ ಹಣಕಾಸು ಯೋಜನೆ ಅನುದಾನ ಮತ್ತು...

ಗ್ರಾಮದ ರಸ್ತೆ ಬಿಡಿಸಿಕೊಡಲು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಮಗಳೂರು:  ಚಿಕ್ಕಹಳ್ಳ ಗ್ರಾಮದ ರಸ್ತೆಯನ್ನು ಪ್ರಭಾವಿ ವ್ಯಕ್ತಿಗಳು ಮುಟ್ಟುಗೋಲು ಹಾಕಿ ಕೊಂಡಿರುವ ನಡೆಯನ್ನು ಖಂಡಿಸಿ ಶುಕ್ರವಾರ...

ಶಿಕ್ಷಕರು-ಉಪನ್ಯಾಸಕರ ನೇಮಕ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು

ಚಿಕ್ಕಮಗಳೂರು- ಸಂವಿಧಾನ ಬದ್ಧ ಹಕ್ಕುಗಳಾದ ಶಿಕ್ಷಣ ಮತ್ತು ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಸರ್ಕಾರಿ...