ಬೆಂಗಳೂರು: ಶೃಂಗೇರಿ ಕ್ಷೇತ್ರದ ಶಾಸಕರನ್ನಾಗಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರನ್ನು ವಿಧಾನಸಭೆ ಮರುಸ್ಥಾಪಿಸಿದೆ.
ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪಿನ ಅನ್ವಯ ಈ ಕ್ರಮ ಜರುಗಿಸಲಾಗಿದೆ. ಬುಧವಾರ ನಡೆದ ವಿಧಾನಮಂಡಲ ಶಾಸನ ರಚನಾ ಸಮಿತಿಯ ಸಭೆಗೆ ರಾಜೇಗೌಡರನ್ನು ಆಹ್ವಾನಿಸಲಾಗಿತ್ತು. ಅವರು ಸಭೆಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್ ನಿರ್ದೇಶನದ ಅನ್ವಯ ಚುನಾವಣಾ ಆಯೋಗ ನಡೆಸಿದ ಅಂಚೆ ಮತ ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ ಅವರಿಗೆ 57 ಮತಗಳು ಹೆಚ್ಚುವರಿಯಾಗಿ ದೊರೆತ ಕಾರಣ ಜೀವರಾಜ್ ಅವರನ್ನು ವಿಜೇತ ಎಂದು ಘೋಷಿಸಲಾಗಿತ್ತು. ಅಲ್ಲದೇ, ಅವರಿಗೆ ಶಾಸಕರಾಗಿ ಪ್ರಮಾಣವಚನವನ್ನೂ ಬೋಧಿಸಲಾಗಿತ್ತು. ಈ ಎಲ್ಲ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
T.D. Rajegowda reinstated as MLA
Leave a comment