Home namma chikmagalur chikamagalur ಜೀನವಸಂಧ್ಯಾದ ನವೀಕೃತ ಪಾಕಶಾಲೆ ಲೋಕಾರ್ಪಣೆ
chikamagalurHomeLatest Newsnamma chikmagalur

ಜೀನವಸಂಧ್ಯಾದ ನವೀಕೃತ ಪಾಕಶಾಲೆ ಲೋಕಾರ್ಪಣೆ

Share
Share

ಚಿಕ್ಕಮಗಳೂರು: ಜೀನವಸಂಧ್ಯಾದಲ್ಲಿ ೩೫ಲಕ್ಷರೂ. ಅಂದಾಜುವೆಚ್ಚದ ನವೀಕೃತ ಪಾಕಶಾಲೆ ಮತ್ತು ಸಿಬ್ಬಂದಿ ವಸತಿಗೃಹವನ್ನು ರೋಟರಿಜಿಲ್ಲಾ ಮಾಜಿಗೌರ್‍ನರ್ ಎಂ.ಸಿ.ಶೇಖರ್ ಮತ್ತು ಇನ್ನರ್‌ವ್ಹೀಲ್ ಮಾಜಿಅಧ್ಯಕ್ಷೆ ಲೇಖಾಚಂದ್ರಶೇಖರ್ ಲೋಕಾರ್ಪಣೆಗೊಳಿಸಿದರು.

ಚಿಕ್ಕಮಗಳೂರು ರೋಟರಿ ಮತ್ತು ಇನ್ನರ್‌ವ್ಹೀಲ್ ಟ್ರಸ್ಟ್ ಹೊರವಲಯದ ಕದ್ರಿಮಿದ್ರಿಯಲ್ಲಿ ನಿರ್ವಹಿಸುತ್ತಿರುವ ಜೀನವಸಂಧ್ಯಾ ವೃದ್ಧಾಶ್ರಮದ ವಾಸಿಗಳಿಗೆ ಅನುಕೂಲವಾಗುವಂತೆ ಆಧುನೀಕರಣ ವ್ಯವಸ್ಥೆಗೆ ಅನುಕೂಲವಾಗಿ ಪಾಕಶಾಲೆಯನ್ನು ನಿರ್ಮಿಸಲಾಗಿದೆ. ನಾಲ್ವರು ಸಿಬ್ಬಂದಿ ಕುಟುಂಬದ ವಾಸಕ್ಕಾಗಿ ವಸತಿಗೃಹವನ್ನು ರೋಟರಿ ಪರಿವಾರದ ನೆರವಿನೊಂದಿಗೆ ನಿರ್ಮಿಸಲಾಗಿದೆ. ಶಶಿಪ್ರಸಾದ ೩೫,೦೦೦ರೂ.ವೆಚ್ಚದಲ್ಲಿ ನಿರ್ಮಸಿಕೊಟ್ಟ ಉಯ್ಯಾಲೆ ಆಶ್ರಮವಾಸಿಗಳಿಗೆ ಸಂತಸ ಹೊಮ್ಮಿಸಿತು.

ಸರಳ ಸಮಾರಂಭದಲ್ಲಿ ನೂತನ ವ್ಯವಸ್ಥೆಗೆ ಆರ್ಥಿಕ ನೆರವು ನೀಡಿದ ಎಲ್ಲ ದಾನಿಗಳನ್ನು ಸ್ಮರಣಿಕೆಯೊಂದಿಗೆ ಟ್ರಸ್ಟ್ ಅಧ್ಯಕ್ಷ ಎನ್.ಶ್ರೀಕಾಂತಶೆಟ್ಟಿ, ಕಾರ್‍ಯದರ್ಶಿ ಎಂ.ಎನ್.ರಾಕೇಶ್ ಖಜಾಂಚಿ ಎ.ಸಿ.ಸಂತೋಷ, ಉಪಾಧ್ಯಕ್ಷೆ ಪದ್ಮಜಯಪ್ರಕಾಶ ತಂಡ ಗೌರವಿಸಿತು.

ಈ ಸಂದರ್ಭದಲ್ಲಿ ಜೀವನಸಂಧ್ಯಾ ನಡೆದುಬಂದ ಹಾದಿ ವಿವರಿಸಿದ ಶ್ರೀಕಾಂತಶೆಟ್ಟಿ ಹಾಗೂ ರಾಕೇಶ್ ೪೪ವರ್ಷಗಳ ಹಿಂದೆ ಅಂದಿನ ರೋಟರಿಜಿಲ್ಲಾ ಗೌರ್‍ನರ್ ಜಿ.ಸಿ.ಸಿಪ್ಪಾನಿ ಅವರ ಆಸಕ್ತಿ ಪರಿಣಾಮವಾಗಿ ಆರಂಭಗೊಂಡು ದಾನಿಗಳ ಸಹಕಾರದೊಂದಿಗೆ ನಿರಂತರವಾಗಿ ಮುನ್ನಡೆಸಲಾಗುತ್ತಿದೆ. ಕಣ್ಣಿನ ಆಸ್ಪತ್ರೆಯನ್ನು ಜೋಡಿಸಿದ್ದು, ಭಜನಾಕೇಂದ್ರ. ಗಣೇಶನ ಗುಡಿ, ಸಮುದಾಯಭವನವೂ ನಿರ್ಮಾಣಗೊಂಡಿದೆ ಎಂದರು.

ಹಂತ ಹಂತವಾಗಿ ವೃದ್ಧಾಶ್ರಮವಾಸಿಗಳಿಗೆ ಅನುಕೂಲತೆ-ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಪ್ರಸ್ತುತ ತಂಡ ಸುಮಾರು ೩೫ಲಕ್ಷರೂ.ಗಳನ್ನು ಟ್ರಸ್ಟಿಗಳಿಂದ, ರೋಟರಿ ಪರಿವಾರ, ಸಹೃದಯ ನಾಗರಿಕರಿಂದ ಸಂಗ್ರಹಿಸಿ ಪಾಕಶಾಲೆಯನ್ನು ನವೀಕರಣಗೊಳಿಸಲಾಗಿದೆ ಎಂದ ಕಾರ್‍ಯದರ್ಶಿ ರಾಕೇಶ್, ೬೦ಇಂಟು೨೫ಅಡಿ ವಿಸ್ತೀರ್ಣದ ಅಡುಗೆಕೋಣೆಯ ನೆಲ ಹಾಗೂ ಗೋಡೆಗಳಿಗೆ ಉತ್ತಮ ಟೈಲ್ಸ್ ಅಳವಡಿಸಲಾಗಿದೆ. ಸುರಕ್ಷಾತಾ ದೃಷ್ಟಿಯಿಂದ ಗ್ಯಾಸ್ ಪೈಪ್‌ಲೈನ್ ಸಿದ್ಧಪಡಿಸಲಾಗಿದೆ. ಹಿಟ್ಟು ನಾದುವ ಮತ್ತು ರೊಟ್ಟಿ ಮಾಡಿ ಬೇಯಿಸುವ ಯಂತ್ರವನ್ನು ಅಳವಡಿಕೆಯೂ ಸೇರಿದಂತೆ ಆಧುನಿಕಸ್ಪರ್ಶ ನೀಡಲಾಗಿದೆ ಎಂದವರು ವಿವರಿಸಿದರು.

ಶ್ರೀಕಾಂತಶೆಟ್ಟಿ ಸ್ವಾಗತಿಸಿ, ರಾಕೇಶ ನಿರೂಪಿಸಿ ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಲಿಖಿತ್ ವಂದಿಸಿದರು. ರೋಟರಿ ಪರಿವಾರದಿಂದ ಆಯೋಜಿಸಿದ್ದ ಸಂಗೀತಸಂಜೆ ಆಕರ್ಷಕವಾಗಿತ್ತು. ಹಲವು ದಶಕಗಳಿಂದ ವ್ಯವಸ್ಥಾಪಕರಾಗಿ ಕಾರ್‍ಯನಿರ್ವಹಿಸುತ್ತಿರುವ ಹರಿಸಿಂಗ್ ಮತ್ತು ಚಂದ್ರಕಲಾ ದಂಪತಿಗಳು ನೇತ್ರಚಿಕಿತ್ಸಾ ತಜ್ಞೆ ಡಾ.ರಶ್ಮಮೋಹನ್, ನಿಕಟಪೂರ್ವ ಟ್ರಸ್ಟ್ ಅಧ್ಯಕ್ಷರಾಗಿದ್ದ ಎ.ಎಂ.ನಂಜುಂಡಸ್ವಾಮಿ, ಡಿ.ಎಚ್.ನಟರಾಜ್ ಮತ್ತು ಜಯಪ್ರಕಾಶ್, ನಿತ್ಯದಾನಿಎಚ್.ಸಿ.ಶಶಿಪ್ರಸಾದ ಮತ್ತಿತರರನ್ನು ಗೌರವಿಸಲಾಯಿತು. ಟ್ರಸ್ಟಿಗಳಾದ ಎ,ಸಿ.ಸಂತೋಷ್ ಚೆಂದಿಲಕುಮಾರ್, ರಘುನಂದನ್, ಅಭಿಜಿತ್‌ಪೈ, ಅನಂತೇಗೌಡ ವಿನಯ್, ನಯನಾ ವೇದಿಕೆಯಲ್ಲಿದ್ದರು.

Jeevan Sandhya updated Culinary Lokarpana

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...