Home namma chikmagalur chikamagalur ಸೈಬರ್ ವಂಚಕರಿಂದ ವಕೀಲರ ಖಾತೆಗೆ ಕನ್ನ
chikamagalurHomeLatest Newsnamma chikmagalur

ಸೈಬರ್ ವಂಚಕರಿಂದ ವಕೀಲರ ಖಾತೆಗೆ ಕನ್ನ

Share
Share

ಚಿಕ್ಕಮಗಳೂರು: ವಕೀಲರೊಬ್ಬರ ಖಾತೆಗೆ ಚಿನ್ನದ ಸಾಲದ ಹಣ ಜಮಾವಣೆಯಾದ ಕೆಲವೇ ಕ್ಷಣಗಳಲ್ಲಿ ಸೈಬರ್ ವಂಚಕರು ಕೈಚಳಕ ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಯುಕೋ ಬ್ಯಾಂಕ್‌ನ ಖಾತೆಗೆ 4.14 ಲಕ್ಷ ರೂಪಾಯಿ ಗೋಲ್ಡ್ ಲೋನ್ ಹಣ ಜಮೆಯಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ, ಖಾತೆದಾರ ವಕೀಲ ಬ್ಯಾಂಕ್ ಆವರಣದಲ್ಲಿದ್ದಾಗಲೇ ಅವರ ಗಮನಕ್ಕೆ ಬಾರದೆ ಹಾಗೂ ಯಾವುದೇ ಒಟಿಪಿ (OTP) ಅಥವಾ ಎಪಿಕೆ (APK) ಲಿಂಕ್‌ಗಳನ್ನು ಹಂಚಿಕೊಳ್ಳದಿದ್ದರೂ ಖಾತೆಯಿಂದ 99,584 ರೂಪಾಯಿ ಹಣ ಅಮೆಜಾನ್ ಪೇ ಮೂಲಕ ವರ್ಗಾವಣೆಯಾಗಿದೆ.

ಹಣ ಕಡಿತವಾದ ಕೂಡಲೇ ವಕೀಲ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿ, ತಕ್ಷಣವೇ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ತಾಂತ್ರಿಕವಾಗಿ ಯಾವುದೇ ಸುಳಿವು ನೀಡದೆ ನಡೆದಿರುವ ಈ ವಂಚನೆ ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಮೂಡಿಸಿದ್ದು, ಸದ್ಯ ಚಿಕ್ಕಮಗಳೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪತ್ತೆದಾರಿ ಪೊಲೀಸರು ಹಣ ವರ್ಗಾವಣೆಯ ಮೂಲವನ್ನು ಹುಡುಕುತ್ತಿದ್ದಾರೆ.

Lawyer’s account stolen by cyber fraudsters

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...