Home namma chikmagalur chikamagalur ನಗರಸಭೆಯ 2.60 ಕೋಟಿ ರು. ವೆಚ್ಚದ ಫುಡ್ ಕೋರ್ಟ್ ಗೆ ಚಾಲನೆ
chikamagalurHomeLatest Newsnamma chikmagalur

ನಗರಸಭೆಯ 2.60 ಕೋಟಿ ರು. ವೆಚ್ಚದ ಫುಡ್ ಕೋರ್ಟ್ ಗೆ ಚಾಲನೆ

Share
Share

ಚಿಕ್ಕಮಗಳೂರು: ನಗರದ ಜನರ ಹಿತದೃಷ್ಟಿಯಿಂದ ಏನು ಮಾಡುತ್ತೇವೆಯೋ, ಅದು ಶಾಶ್ವತವಾಗಿ ಇರುವಂತೆ ಕೆಲಸ ಮಾಡಬೇಕು. ಪಕ್ಷಾತೀತವಾಗಿ ಎಲ್ಲರೂ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.

ನಗರಸಭೆ ಆವರಣದಲ್ಲಿ ನಗರಸಭೆಯ ೨.೬೦ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಫುಡ್ ಕೋರ್ಟ್ (ಆಹಾರ ಮಳಿಗೆಗಳು) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ಶಾಸ್ವತವಾದ ಕೆಲಸ ಮಾಡಬೇಕು ಎಂದರು.

ಫುಡ್ ಕೋರ್ಟ್‌ನಲ್ಲಿ ಗುಣಮಟ್ಟದ ತಿಂಡಿ ತಿನಿಸುಗಳನ್ನ ಕೊಡಬೇಕು, ನಗರದ ಜನತೆಗೆ ಇದರ ಸದುಪಯೋಗ ಆಗಬೇಕು. ಉತ್ತಮ ಪರಿಸರ ಹಾಗೂ ಕುಡಿಯುವ ನೀರಿನ ಸರಿಯಾದ ವ್ಯವಸ್ಥೆ ಇಲ್ಲದಿರುವ ಕಡೆಗಳಲ್ಲಿ ತಿಂಡಿ ತಿನಿಸುಗಳನ್ನು ತಿಂದು ಆರೋಗ್ಯ ಹಾಳು ಮಾಡುವುದಕ್ಕಿಂತ ಫುಡ್ ಕೋರ್ಟ್ ನಲ್ಲಿ ತಿಂಡಿ ತಿನಿಸುಗಳನ್ನು ತಿನ್ನುವುದರಿಂದ ಆರೋಗ್ಯ ಕಾಪಾಡಬಹುದು ಎಂದು ಹೇಳಿದರು.

ನಗರದ ಕೆಲವೆಡೆ ಫುಡ್ ಕೋರ್ಟ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ನಗರಸಭೆ ಅನುದಾನ ಹಾಗೂ ವಿಶೇಷ ಅನುದಾನದಲ್ಲಿ ಇನ್ನೆರಡು ಕಡೆಗಳಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲು ಯೋಚನೆ ಇದೆ ಎಂದರು.

೨೦೨೨ರ ಮೊದಲೇ ಇಲ್ಲೊಂದು ಫುಡ್ ಕೋರ್ಟ್ ನಿರ್ಮಾಣ ಮಾಡಬೇಕೆಂದು ಆಗಿನ ಶಾಸಕರ ಜೊತೆ ಚರ್ಚೆಯಾಗಿತ್ತು. ವರಸಿದ್ಧಿ ವೇಣುಗೋಪಾಲ್ ಅವರು ಅಧ್ಯಕ್ಷರಾದಾಗ ಅದಕ್ಕೆ ಚಾಲನೆ ಸಿಕ್ಕಿತು. ಆ ಸಂದರ್ಭದಲ್ಲಿ ವಿರೋಧವು ಕೂಡ ವ್ಯಕ್ತವಾಯಿತು. ಆಜಾದ್ ಪಾರ್ಕ್ ವೃತ್ತದ ತಳ್ಳುವ ಗಾಡಿ, ಗಂm ಗಾಡಿಯವರು ತಮಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಫುಡ್ ಕೋರ್ಟ್ ನಿರ್ಮಾಣ ಮಾಡಲಾಯಿತು. ಉದ್ಘಾಟನೆ ಸಂದರ್ಭದಲ್ಲಿ ಶಾಸಕನಾಗಿರುವ ಯೋಗ ನನಗಿತ್ತು ಎಂದರು.

ಅಧಿಕಾರದಲ್ಲಿ ಯಾರೂ ಶಾಶ್ವತ ಅಲ್ಲ, ಯಾರ ಅವಧಿಯಲ್ಲಿ ಏನೇನು ಆಗಬೇಕೆಂದು ಇರುತ್ತದೆಯೋ ಅದು ದೇವರು ಬರೆದಿರುತ್ತಾನೆ. ಆ ಕಾಲದಲ್ಲಿ ನಡೆದುಕೊಂಡು ಹೋಗುತ್ತದೆ, ಯಾರ ಅವಧಿಯಲ್ಲಿ ಏನಾಯ್ತು ಅನ್ನುವುದಕ್ಕಿಂತ ನಾವಿದ್ದಾಗ ನಗರದ ಜನರ ಹಿತ ದೃಷ್ಟಿಯಿಂದ ಏನು ಮಾಡಿದ್ದೇವೆ ಎಂಬುದು ಮುಖ್ಯ ಎಂದು ಹೇಳಿದರು.

ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಡೀಸೆಲ್ ಪೆಟ್ರೋಲ್ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಹೀಗಾಗಿ ನಗರದ ಕೆಲವೆಡೆ ರಸ್ತೆಗಳ ಡಾಂಬರೀಕರಣ ಕೆಲಸಗಳು ಆಗಿಲ್ಲ. ಮಳೆಗಾಲ ಆರಂಭ ಆಗುವುದರೊಳಗೆ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ರಾಜ್ಯ ಪರಿಸರ ಮಾಲಿನ್ಯ ಮೌಲ್ಯಮಾಪನ ಮಂಡಳಿ ಅಧ್ಯಕ್ಷರಾದ ಎ.ಎನ್. ಮಹೇಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷೆ ಶೀಲಾ ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯಕ್, ಪೌರಾಯುಕ್ತ ಬಸವರಾಜ್, ನಗರಸಭೆಯ ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಿಡಿಎ ಆಯುಕ್ತರಾದ ನಾಗರತ್ನ ಉಪಸ್ಥಿತರಿದ್ದರು.

Municipal Corporation’s Rs. 2.60 crore food court inaugurated

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ನೀವು ಬೆಳಿಗ್ಗೆ ಕಸ ಗುಡಿಸದಿದ್ದರೆ ದೇಶವೇ ನಡೆಯಲ್ಲ ಧೈರ್ಯವಾಗಿ ಹಕ್ಕು ಕೇಳಿ

ಚಿಕ್ಕಮಗಳೂರು:  “ನೀವು ಬೆಳಿಗ್ಗೆ ಎದ್ದು ಕಸ ಗುಡಿಸದಿದ್ದರೆ ಈ ದೇಶದ ಯಾವುದೇ ನಗರ, ಪಟ್ಟಣ, ಊರುಗಳು...

ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಮೂಲಕವೇ ವ್ಯವಹರಿಸಿ

ಚಿಕ್ಕಮಗಳೂರು: ಪ್ರತೀ ಕಚೇರಿಗಳಲ್ಲೂ ಇ-ಆಫೀಸ್ ಮೂಲಕವೇ ಪತ್ರ ಹಾಗೂ ಕಡತಗಳನ್ನು ನಿರ್ವಹಿಸುವಂತೆ ಸರ್ಕಾರದ ಅಪರ ಮುಖ್ಯ...

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....