ಚಿಕ್ಕಮಗಳೂರು: ಕರ್ನಾಟಕದಲ್ಲಿ ಡಾ.ರಾಜ್ ನಟನೆಗೆ ಯಾರೂ ಸರಿಸಾಟಿಯಿಲ್ಲ. ಈ ನಟನ ಕಲಾತ್ಮಕ ಚಿತ್ರಗಳು ಸಕುಟುಂಬ ವೀಕ್ಷಿಸಬಹುದಾಗಿದ್ದು, ಸಾಂಸರಿಕ ಚಿತ್ರಗಳಲ್ಲಿ ಬಹಳಷ್ಟು ಖ್ಯಾತಿ ಪಡೆ ದಿರುವ ನಟನೆಂದರೆ ತಪ್ಪಲಾಗಲಾರದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ರಾಜ ಸ್ಟುಡೀಯೋದಲ್ಲಿ ಶುಕ್ರವಾರ ಪದ್ಮಭೂಷಣ ಡಾ|| ರಾ ಜ್ಕುಮಾರ್ ಅವರ ೯೭ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕೇಕ್ ಕತ್ತರಿಸಿ ಸಿಹಿಹಂಚುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಬದುಕು ಉತ್ತಮ ಸ್ಥಿತಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಡಾ|| ರಾಜ್ಕುಮಾರ್ ನಟನೆಯ ಬಂ ಗಾರದ ಮನುಷ್ಯ ಚಿತ್ರ ರೈತರ ಜೀವನಾಡಿಯಾಯಿತು. ವಿಶೇಷವೆಂದರೆ ತಾಲ್ಲೂಕಿನ ಕಳಸಾಪುರ ಗ್ರಾಮದಲ್ಲಿ ಚಿತ್ರೀಕರಣ ಪೂರೈಸಿದ್ದು ಇಡೀ ಚಿತ್ರೋದ್ಯಮದಲ್ಲಿ ಈ ಸಿನಿಮಾ ದಾಖಲೆ ಮಾಡಿದೆ ಎಂದು ತಿಳಿಸಿದರು.
ಡಾ|| ರಾಜ್ ವಿಶೇಷ ನಟನೆ ಗಮನಿಸಿದ ಅನೇಕ ನಿರ್ದೇಶಕರು ಪರಭಾಷೆಯಲ್ಲಿ ನಟಿಸಲು ಅವಕಾಶ ನೀಡಿದರೂ, ತೆರಳದೇ ಕನ್ನಡ ನೆಲದಲ್ಲೇ ತಮ್ಮ ಸಂಪೂರ್ಣ ಬದುಕನ್ನು ಕಲೆಗೆ ಮೀಸಲಿಟ್ಟ ಏಕೈಕ ನಟ. ಅಲ್ಲದೇ ನಟನೆ ಜೊತೆ ಜೊತೆಗೆ ಗಾಯಕರಾಗಿ ಪ್ರಸಿದ್ಧಿ ಪಡೆದುಕೊಂಡ ಹಿನ್ನೆಲೆ ರಾಷ್ಟ್ರಮಟ್ಟದ ಪ್ರಶಸ್ತಿಯು ಲಭಿಸಿದೆ ಎಂದು ಹೇಳಿದರು.
ರಾಜ್ ನಟನೆಯ ಬಹುಪಾಲು ಚಿತ್ರಗಳು ಯಾವುದೇ ಪರಭಾಷೆಯ ರೀಮೇಕ್ ಆಗದೇ, ಸ್ವಂತತನ ದಿಂದ ಕೂಡಿತು. ಒಮ್ಮೆ ಕಾಡುಗಳ್ಳ ವೀರಪ್ಪನ್, ಡಾ|| ರಾಜ್ ಅಪಹರಿಸಿದ ವೇಳೆ ರಾಜ್ಯಾದ್ಯಂತ ಕೋಟ್ಯಾ ಂತರ ಕನ್ನಡಾಭಿಮಾನಿಗಳು ದುಃಖಿತರಾಗಿದ್ದರು. ಶೀಘ್ರವೇ ಮರಳಿ ವಾಪಸ್ಸಾಗಲು ಅನೇಕ ದೇವಾಲಯಗಳ ಲ್ಲಿ ಪೂಜೆಗಳು ನಡೆದಿದ್ದವು ಎಂದು ಸ್ಮರಿಸಿದರು.
ಹಿರಿಯ ಮಕ್ಕಳ ತಜ್ಞ ಡಾ|| ಜೆ.ಪಿ.ಕೃಷ್ಣೇಗೌಡ ಮಾತನಾಡಿ ಡಾ||ರಾಜ್ ಬಹುತೇಕ ಚಿತ್ರಗಳು ಯುವಸ ಮಾಜಕ್ಕೆ ಸ್ಪೂರ್ತಿಯಾಗಿತ್ತು. ಮದ್ಯಪಾನ, ಧೂಮಪಾನದಂಥ ಸನ್ನಿವೇಶಗಳು ರಾಜ್ ಚಿತ್ರಗಳಲ್ಲಿ ಕಾಣಸಿಗು ವುದಿಲ್ಲ. ಅವರ ಶ್ರೀಕೃಷ್ಣದೇವರಾಯ ಪಾತ್ರ ಅಭಿಮಾನಿಗಳನ್ನು ನಿಬ್ಬೆರಗಾಗಿಸಿತು. ನಟಸಾಮ್ರಾಟನೆಂದೇ ಬಿ ರುದುಕೊಂಡಿದ್ಧ ರಾಜ್ಕುಮಾರ್ ನಾದಮಯ ಗೀತೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು ಎಂದರು.
ಆಶ್ರಯ ಪೌಂಢೇಷನ್ ಸಂಸ್ಥಾಪಕಿ ಡಾ|| ವರ್ಷ ಮಾತನಾಡಿ ಬಾಲ್ಯದಿಂದಲೇ ಡಾ|| ರಾಜ್ಕುಮಾರ್ ಗೀತೆಗಳು ಆಲಿಸುತ್ತಿದ್ದೆ. ಬಳಿಕ ಅತಿಹೆಚ್ಚು ಪ್ರೀತಿನಟನಾದವರು ಪುನೀತ್ರಾಜ್ಕುಮಾರ್. ಕನ್ನಡದಲ್ಲಿ ಜೇ ಮ್ಸ್ ಬಾಂಡ್ ಚಿತ್ರಗಳಿಗೆ ಮೊದಲ ಹೆಜ್ಜೆಯಿಟ್ಟಿದ್ದೆ ರಾಜ್ಕುಮಾರ್. ಹೀಗಾಗಿ ಅವರ ಚಿತ್ರಗಳು ಸಮಾಜಕ್ಕೆ ಬಹಳಷ್ಟು ಬದಲಾವಣೆ ತಂದಿದೆ ಎಂದು ತಿಳಿಸಿದರು.
ರಾಜ ಸ್ಟುಡಿಯೋ ಮಾಲೀಕ ಎ.ಎನ್.ಮೂರ್ತಿ ಮಾತನಾಡಿ ಕಳೆದ ೩೧ ವರ್ಷಗಳಿಂದ ಡಾ|| ರಾಜ್ ಕುಮಾರ್ ಜನ್ಮದಿನವನ್ನು ಆಚರಿಸುತ್ತಿರುವುದು ಸಂತಸ ತಂದಿದೆ. ಅವರ ಚಿತ್ರಗೀತೆಗಳ ಹಾಡುಗಳನ್ನು ತಮ್ಮ ಕಂಠದಿಂದ ಹಾಡುವ ಮೂಲಕ ಸ್ವಲ್ಪಮಟ್ಟಿನ ಜೀವ ತುಂಬಿಸುವ ಕಾಯಕ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು, ಸಾರ್ವಜನಿಕರಿಗೆ ಕೇಕ್ ಹಾಗೂ ಲಘು ಉಪಹಾ ರದ ವ್ಯವಸ್ಥೆ ಮಾಡಲಾಯಿತು. ಬಳಿಕ ಎ.ಎನ್.ಮೂರ್ತಿ ಮತ್ತು ಚಂದ್ರಶೇಖರ್ ಸರ್ಜಾ ಅವರಿಗೆ ಗೀತಗಾ ಯನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಕೆಯುಡ್ಲೂಜೆ ಅಧ್ಯಕ್ಷ ಅನಿಲ್ಆನಂದ್, ವಕೀಲ ವಿ.ಕೆ.ರಘು, ಅಭಿಮಾನಿಗಳಾದ ಕಾರ್ತೀಕ್ ಕಾಮತ್, ರಾಜಣ್ಣ, ಶಿವಣ್ಣ, ದಾಮೋದರ್, ವಿನಯ್, ಎ.ಎನ್.ಪ್ರಸನ್ನ, ಪತ್ರಕರ್ತರಾದ ಗೋಪಿ, ಸಂದೇಶ್ ಮತ್ತಿತರರಿದ್ದರು.
Dr. Rajkumar’s acting is unmatched.
Leave a comment