ಚಿಕ್ಕಮಗಳೂರು: 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಈ ಬಾರಿ ಜಿಲ್ಲೆ ಶೇ 94.99ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 10,119 ವಿದ್ಯಾರ್ಥಿಗಳ ಪೈಕಿ 9,623 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ 77.94ರಷ್ಟು ಫಲಿತಾಂಶ ಪಡೆದರೂ 8ನೇ ಸ್ಥಾನದಲ್ಲಿ ಜಿಲ್ಲೆ ಇತ್ತು. ಈ ವರ್ಷ ಶೇ95.10ರಷ್ಟು ಫಲಿತಾಂಶ ಬಂದಿದ್ದರೂ 17ಕ್ಕೆ ಕುಸಿದಿದೆ.
ಈ ವರ್ಷವೂ ಜಿಲ್ಲೆಯಲ್ಲಿ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 6,068 ಬಾಲಕಿಯರ ಪೈಕಿ 5,819 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಶೇ 95.90ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 5,742 ಬಾಲಕರ ಪೈಕಿ 5,388 ಬಾಲಕರು ಉತ್ತೀರ್ಣರಾಗಿದ್ದು, ಶೇ93.83ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 95.95ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ 92.67 ಫಲಿತಾಂಶ ದಾಖಲಾಗಿದೆ.
9 ವಿದ್ಯಾರ್ಥಿಗಳು 620ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಶೇಕಡ 100 ಫಲಿತಾಂಶವನ್ನು ಜಿಲ್ಲೆಯಲ್ಲಿ 165 ಶಾಲೆಗಳು ಪಡೆದಿವೆ.
ಕನ್ನಡದಲ್ಲಿ 705 ವಿದ್ಯಾರ್ಥಿಗಳು 125 ಅಂಕ ಗಳಿಸಿದ್ದರೆ, ಇಂಗ್ಲಿಷ್ನಲ್ಲಿ 67 ವಿದ್ಯಾರ್ಥಿಗಳು 100 ಅಂಕ, 604 ವಿದ್ಯಾರ್ಥಿಗಳು ಹಿಂದಿಯಲ್ಲಿ 100, 23 ವಿದ್ಯಾರ್ಥಿಗಳು ಗಣಿತದಲ್ಲಿ 100, ವಿಜ್ಞಾನದಲ್ಲಿ 4 ಮತ್ತು ಸಮಾಜ ವಿಜ್ಞಾನದಲ್ಲಿ 146 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದಾರೆ.
SSLC exam – 94.99% result for the district
Leave a comment