Home namma chikmagalur chikamagalur ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಮಾರಾಟ ಜಾಪ ಪತ್ತೆ
chikamagalurCrime NewsHomeLatest Newsnamma chikmagalur

ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಮಾರಾಟ ಜಾಪ ಪತ್ತೆ

Share
Share

ಚಿಕ್ಕಮಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.

ತೇಗೂರು ಗ್ರಾಮದ ಜನರಿಂದ ಅಕ್ಕಿಯನ್ನು ಸಂಗ್ರಹಿಸಿದ್ದ ಆಟೋ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ, ಅದನ್ನು ನಗರದ ಅಂಗಡಿಯೊಂದಕ್ಕೆ ಮಾರಾಟ ಮಾಡಲು ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ನಗರದ ಎನ್‌ಎಂಸಿ ವೃತ್ತದ ಬಳಿ ದಾಳಿ ನಡೆಸಿ ಆಟೋವನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಪರಿಶೀಲನೆಯ ವೇಳೆ ಆಟೋದಲ್ಲಿ ಸಾಗಿಸುತ್ತಿದ್ದ ಸುಮಾರು 400 ಕೆಜಿ ತೂಕದ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದ್ದು, ಅದಕ್ಕೆ ಯಾವುದೇ ಸೂಕ್ತ ದಾಖಲೆ ಅಥವಾ ಬಿಲ್ ಇಲ್ಲದ ಕಾರಣ ಅಧಿಕಾರಿಗಳು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಅಕ್ರಮ ಸಾಗಾಟಕ್ಕೆ ಬಳಸಿದ್ದ ಆಟೋ ಹಾಗೂ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Annabhagya Yojana rice illegal sale ring detected

 

Share

Leave a comment

Leave a Reply

Your email address will not be published. Required fields are marked *

Don't Miss

ವೃದ್ಧರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಎಪಿಕೆ (APK) ಫೈಲ್ ಬಳಸಿ ವೃದ್ಧರೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಗಂಭೀರ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಹೊಸಮನೆ ರಸ್ತೆಯ ನಿವಾಸಿ, ಲೋಕೋಪಯೋಗಿ ಇಲಾಖೆಯ...

ಜಿಲ್ಲಾ ಸರ್ಜನ್ ಅಮಾನತ್ತಿಗೆ ಆಗ್ರಹಿಸಿ ಬಿಜೆಪಿ ಮುಖಂಡರ ಪ್ರತಿಭಟನೆ

ಚಿಕ್ಕಮಗಳೂರು: ನಕಲಿ ಐಎಎಸ್ ಅಧಿಕಾರಿಯನ್ನು ಬೆಂಬಲಿಸಿ ಬೃಹತ್ ಮೊತ್ತದ ಹ ಣದ ವಹಿವಾಟು ನಡೆಸಿರುವ ಜಿಲ್ಲಾ ಸರ್ಜನ್‌ನನ್ನು ಕೂಡಲೇ ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ...

Related Articles

ಅಜ್ಜಂಪುರದಲ್ಲಿ ತಡರಾತ್ರಿ ಅಂಗಡಿಗಳಿಗೆ ಬೆಂಕಿ – ಅಪಾರ ನಷ್ಟ

ಅಜ್ಜಂಪುರ : ಪಟ್ಟಣದ ಗಾಂಧಿ ಸರ್ಕಲ್ ಸಮೀಪದ ಬೀರೂರು ರಸ್ತೆಯಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ...

ಬೌದ್ಧ ಧರ್ಮದ ವಿಧಿವಿಧಾನದಡಿ ಹತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ

ಚಿಕ್ಕಮಗಳೂರು:  ಬೌದ್ಧ ವಿಧಿವಿಧಾನದಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಗಳ ಬದುಕು ಹಸನಾಗಲೀ. ದಾಂಪತ್ಯ ಎರಡು...

ದಲಿತ ಜನ ಸೇನದ ಹೋರಾಟಕ್ಕೆ ಸಂದ ಜಯ

ಚಿಕ್ಕಮಗಳೂರು:  ನಗರದ ಅಂಬೇಡ್ಕರ್ ಬೀದಿಯಲ್ಲಿರುವ ಶಾಂತಿನಗರ ಬಡಾ ವಣೆಯಲ್ಲಿ ಅಂಬೇಡ್ಕರ್ ಭವನ ಹಾಗೂ ಶುದ್ಧ ಕುಡಿಯುವ...

ಮೂಗುತಿ ಧರಿಸಿದ್ದ ನೂರಾರು ವಿದ್ಯಾರ್ಥಿನಿಯರ ಮೂಗಿನ ಮೇಲೆ ಗಮ್ ಟೇಪ್

ಚಿಕ್ಕಮಗಳೂರು: ರಾಜ್ಯಾದ್ಯಂತ ಸಿಇಟಿ ಪರೀಕ್ಷೆಗಳು ಆರಂಭವಾದ ಮೊದಲ ದಿನವೇ ವಿಚಿತ್ರ ಹಾಗೂ ವಿವಾದಾತ್ಮಕ ಘಟನೆ ಬೆಳಕಿಗೆ...