Home namma chikmagalur chikamagalur ಚಿಕ್ಕಮಗಳೂರು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ
chikamagalurHomeLatest Newsnamma chikmagalur

ಚಿಕ್ಕಮಗಳೂರು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

Share
Share

ಚಿಕ್ಕಮಗಳೂರು: ನೈಋತ್ಯ ರೈಲ್ವೆ ಇಲಾಖೆಯು ಚಿಕ್ಕಮಗಳೂರು ಮತ್ತು ಯಶವಂತಪುರ ನಡುವೆ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಇದು ಏಪ್ರಿಲ್ 24, 2026 ರಿಂದ ಜಾರಿಗೆ ಬರಲಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ಚಿಕ್ಕಮಗಳೂರಿನಿಂದ ಹೊರಡುವ ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16239) ಇನ್ನು ಮುಂದೆ ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಅಂದರೆ ಬೆಳಗ್ಗೆ 8:00 ಗಂಟೆಗೆ ತನ್ನ ಪ್ರಯಾಣವನ್ನು ಆರಂಭಿಸಲಿದೆ.

ಅದೇ ರೀತಿ, ಯಶವಂತಪುರದಿಂದ ಚಿಕ್ಕಮಗಳೂರಿಗೆ ಬರುವ ರೈಲು (ರೈಲು ಸಂಖ್ಯೆ: 16240) ರಾತ್ರಿ 8:55 ರ ಬದಲಾಗಿ 10 ನಿಮಿಷ ತಡವಾಗಿ ಅಂದರೆ ರಾತ್ರಿ 9:05 ಕ್ಕೆ ನಿಲ್ದಾಣವನ್ನು ತಲುಪಲಿದೆ.

ಇದರೊಂದಿಗೆ ಶಿವಮೊಗ್ಗ ಚಿಕ್ಕಮಗಳೂರು ರೈಲಿನ (ರೈಲು ಸಂಖ್ಯೆ: 56271) ಸಮಯದಲ್ಲೂ ವ್ಯತ್ಯಾಸವಾಗಿದ್ದು, ಈ ರೈಲು ಇನ್ನು ಮುಂದೆ ರಾತ್ರಿ 9:30 ರ ಬದಲು 9:40 ಕ್ಕೆ ಚಿಕ್ಕಮಗಳೂರನ್ನು ಬಂದು ಸೇರಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪ್ರಯಾಣಿಕರು ಈ ಬದಲಾದ ಸಮಯವನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಬೇಕೆಂದು ವಿನಂತಿಸಲಾಗಿದೆ.

Change in Chikmagalur train schedule

Share

Leave a comment

Leave a Reply

Your email address will not be published. Required fields are marked *

Don't Miss

ಪ್ರಚೋದಕಾರಿ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷರ ಬಂಧನಕ್ಕೆ ಮನವಿ

ಚಿಕ್ಕಮಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಪ್ರಚೋದಕಾರಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡರುಗಳು...

ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊಡ್ಡ ಸವಾಲಾಗಿದೆ

ಚಿಕ್ಕಮಗಳೂರು: ಆಧುನಿಕ ಜೀವನ ಪದ್ಧತಿಯಲ್ಲಿ ಕೃತಕಬುದ್ದಿ ಮತ್ತೆ ಮನುಷ್ಯನಿಗೆ ದೊ ಡ್ಡ ಸವಾಲಾಗಿ ಪರಿಣಾಮಿಸಿದೆ. ಪ್ರಸ್ತುತ ಕಾಲಕ್ಕೆ ಬೇಡವಾದರೂ, ಜನಿಸಿದ ನಂತರ ಅನುಸರಿಸಿಕೊಂಡು ಸೂ ಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಶ್ರೀ...

Related Articles

ಮಿಥುನ್ ವಿರುದ್ಧ ಸಮಗ್ರ ತನಿಖೆ ಆಗ್ರಹ

ಚಿಕ್ಕಮಗಳೂರು : ಔಷಧ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಸ್ಥಳೀಯ ಮೆಡಿಕಲ್...

ಜಿಲ್ಲಾ ಆಸ್ಪತ್ರೆ ರಾಷ್ಟ್ರೀಯ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಸಮಿತಿ ಭೇಟಿ

ಚಿಕ್ಕಮಗಳೂರು:  ಕೇಂದ್ರ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ವಾಹಕ ಆಶ್ರಿತ ರೋಗಗಳ ನಿರ್ಮೂಲನಾ...

ಮರದ ದಾಸ್ತಾನು ಮಾಡಿದ್ದ ಅಂಗಡಿಗೆ ಬೆಂಕಿ

ಚಿಕ್ಕಮಗಳೂರು: ಮರದ ದಾಸ್ತಾನು ಮಾಡಿದ್ದ ಅಂಗಡಿಯೊಂದರಲ್ಲಿ ಬುಧವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ...

ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯೊಂದು ದರ್ಶನ ನೀಡುವ ಮೂಲಕ...