ಚಿಕ್ಕಮಗಳೂರು: ನಗರ ಹೊರವಲಯದ ಹಿರೇಮಗಳೂರಿನಲ್ಲಿ ಗ್ರಾಮ ದೇವತೆಗಳಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ವಾರ್ಷಿಕ ಸಿಡಿ ಉತ್ಸವ ಸಹಸ್ರಾರು ಭಕ್ತರ ನಡುವೆ ಶುಕ್ರವಾರ ವೈಭವದಿಂದ ನಡೆಯಿತು.
ಉತ್ಸವದ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಗ್ರಾಮದೇವತೆಗಳಿಗೆ ಅಭಿ?ಕ,ವಿಶೇ? ಪೂಜೆ,ಅಲಂಕಾರ, ನಡೆದವು, ಈ ವೇಳೆ ಭಕ್ತರು ಮುಡಿ ತೆಗೆಸಿ ಹರಕೆ ಸಲ್ಲಿಸಿದರು,ಭಾರ್ಗವಪುರಿ ಶ್ರೀ ಕೋದಂಡರಾಮಚಂದ್ರ ಸ್ವಾಮಿಗೆ ಪೂಜಾಫಲ ಸಮರ್ಪಿಸಲಾಯಿತು. ದೇವಾಲಯದಲ್ಲಿ ಕಲಾವೃದ್ಧಿ ಹೋಮ, ಶ್ರೀ ದುರ್ಗಾ ಹೋಮ, ಚಂಡಿಕಾ ಹೋಮ, ಲಕ್ಷ್ಮೀ ಹೋಮ, ಸರಸ್ವತಿ ಹೋಮ, ಕುಂಬಾಭಿ?ಕ, ಮಹಾಪೂಜೆ ನಡೆದವು.
ಮಧ್ಯಾಹ್ನ ಹೋಮದ ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ಸಂಜೆ ವೇಳೆಗೆ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ಉತ್ಸವಮೂರ್ತಿಗಳನ್ನು ದೇವಾಲಯದಿಂದ ಹೊರ ತಂದು ನಾದಸ್ವರ, ಕೊಂಬು, ಕಹಳೆ, ಗ್ರಾಮೀಣ ವಾದ್ಯಗಳು, ಕಳಶ ಹೊತ್ತ ಬಾಲೆಯ ರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು
ಈ ವೇಳೆ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ಸಾರಿಸಿ, ರಂಗವಲ್ಲಿ ಹಾಕಿ, ಉತ್ಸವ ಮೂರ್ತಿಗಳನ್ನು ಸ್ವಾಗತಿಸಿ, ಆರತಿ ಎತ್ತಿ, ಪೂಜೆ ಸಲ್ಲಿಸಿದರು, ಗ್ರಾಮೀಣ ವಾದ್ಯಗಳ ಲಯಕ್ಕೆ ಮಕ್ಕಳು ಮತ್ತು ಯುವ ಜನತೆ ಕುಣಿದು ಕುಪ್ಪಳಿಸಿದರು.
ಊರ ಮುಂಭಾಗದ ಅಂತರಘಟ್ಟಮ್ಮ ದೇವಾಲಯದ ಬಳಿ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ದೇವಾಲಯದ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಸಿಡಿಗಂಬಕ್ಕೆ ಮತ್ತು ಪಂಚಭೂತಗಳಿಗೆ ಪೂಜೆ ಸಲ್ಲಿಸಲಾಯಿತು, ಈ ವೇಳೆ ಭಕ್ತರು ತಮ್ಮ ಮಕ್ಕಳನ್ನು ಸಿಡಿಗಂಬದಲ್ಲಿ ಕುಳ್ಳಿರಿಸಿ ಹರಕೆ ಸಲ್ಲಿಸಿದರು.
ನಂತರ ಗ್ರಾಮೀಣ ವಾದ್ಯಗಳ ಭರಾಟೆ, ಭಕ್ತರ ಹ?ದ್ಗಾರ, ಕರತಾಡನದ ನಡುವೆ ಉತ್ಸವ ಮೂರ್ತಿಗಳ ಸಿಡಿ ಮಹೋತ್ಸವ ನೆರವೇರಿತು, ದೇವಾಲಯದ ಅರ್ಚಕ ಎಚ್,ಕೆ, ಶ್ರೀಧರ್ ನೇತೃತ್ವದ ತಂಡ ಉತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿತು,ಶಾಸಕ ಹೆಚ್.ಡಿ.ತಮ್ಮಯ್ಯ, ದೇವಾಲಯ ಸಮಿತಿ ಅಧ್ಯಕ್ಷ ಸಿ, ಪಿ, ರವಿಶಂಕರ್, ಕಾರ್ಯದರ್ಶಿ ಡಿ,ಎಂ,ಶಂಕರ್,ಹೆಚ್.ಸಿ.ಲೋಕನಾಥ್.ಬಿ.ಎನ್.ವೆಂಕಟೇಶ್,ಹೆಚ್.ಅರ್.ಸುರೇಶ್,ಹೆಚ್.ಜಿ.ಗುರುಮೂರ್ತಿ,ಸಿ.ಎನ್.ನಟರಾಜ್,ಹೆಚ್.ಎಸ್.ರವಿಶಂಕರ್,ಹೆಚ್.ಕೆ.ಮಂಜುನಾಥ್.ಹೆಚ್.ಡಿ.ವಿಜಯಕುಮಾರ್ ಹಾಜರಿದ್ದರು, ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಬೇಸಿಗೆಯ ಬಿಸಿಲಿನ ಝಳವನ್ನೂ ಲೆಕ್ಕಿಸದೇ ಉತ್ಸವದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು, ಉತ್ಸವದ ಪ್ರಯುಕ್ತ ಗ್ರಾಮದ ಎಲ್ಲಾ ಬೀದಿಗಳು, ಮನೆ, ಮನೆಗಳು, ತಳಿರು ತೋರಣದಿಂದ ಅಲಂಕೃತಗೊಂಡು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.
ಸಿಡಿ ಉತ್ಸವ,ಕೆಂಡೋತ್ಸವದ ಪ್ರಯುಕ್ತ ಕಳೆದ ೮ ದಿನಗಳಲ್ಲಿ ಶ್ರಿದೇವಿಯವರಿಗೆ ವಿಶೇ? ಪೂಜೆ, ಗಂಗಾಸ್ನಾನ,ಮೆರವಣಿಗೆ,ದೇವಾಲಯದಲ್ಲಿಶ್ರೀ ಮಹಾಗಣಪತಿ ಹೋಮ,ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ,ಆಂಜನೇಯ ಹೋಮ,ರುದ್ರ ಬಳಗದ ಗೋಪಿನಾಥ್ ತಂಡದಿಂದ ರುದ್ರಪಾರಾಯಣ,ಭಕ್ತರಿಂದ ಭಜನೆ,ಲಲಿತಾ ಸಹಸ್ರನಾಮ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರತಿದಿನ ಅನ್ನ ಸಂತರ್ಪಣೆ ನಡೆದವು.
ಸಿಡಿ ಅಂಗವಾಗಿ ಶನಿವಾರ ಓಕಳಿ ಕಾರ್ಯಕ್ರಮ,ಮರುಸಿಡಿ,ಸೋಮವಾರ ನವಗ್ರಹ ಪೂಜೆ,೧೦೧ ಗಣಗಳ ಸೇವೆ,ಮಂಗಳವಾರ ಗಂಗಾಸ್ನಾನ, ಕಳಶ ಸ್ಥಾಪನೆ,ಕೆಂಡೋತ್ಸವ ನಡೆಯಲಿವೆ.
Annual CD festival of village deities in Hiremagaluru
Leave a comment