Home namma chikmagalur chikamagalur ಚಿಕ್ಕಮಗಳೂರು ನಗರದಲ್ಲಿ ಆಟೋ ಎಲ್‌ಪಿಜಿ ಗ್ಯಾಸ್ ಹಾಹಾಕಾರ
chikamagalurHomeLatest Newsnamma chikmagalur

ಚಿಕ್ಕಮಗಳೂರು ನಗರದಲ್ಲಿ ಆಟೋ ಎಲ್‌ಪಿಜಿ ಗ್ಯಾಸ್ ಹಾಹಾಕಾರ

Share
Share

ಚಿಕ್ಕಮಗಳೂರು: ನಗರದಲ್ಲಿ ಕಳೆದ ಆರು ದಿನಗಳಿಂದ ಎಲ್‌ಪಿಜಿ ಗ್ಯಾಸ್ ಲಭ್ಯವಾಗದ ಕಾರಣ ಆಟೋ ಚಾಲಕರ ಜೀವನ ನಿರ್ವಹಣೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಆಟೋ ಚಾಲಕರು ಮತ್ತು ಮಾಲೀಕರ ಸಂಘವು ಈಗ ಅನಿರ್ದಿಷ್ಟಾವಧಿ ಮುಷ್ಕರದ ಹಾದಿ ಹಿಡಿಯಲು ನಿರ್ಧರಿಸಿದೆ.

ನಗರದ ಮೂರು ಗ್ಯಾಸ್ ಬಂಕ್‌ಗಳಲ್ಲಿ ಒಂದೇ ರೀತಿಯ ದರ ಇರದೇ ಬೇರೆ ಬೇರೆ ದರ ನಿಗದಿಪಡಿಸಿರುವುದು ಚಾಲಕರಲ್ಲಿ ತೀವ್ರ ಗೊಂದಲ ಮೂಡಿಸಿದೆ. ಈ ಕುರಿತು ಬಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅವರು ಸರಿಯಾದ ಮಾಹಿತಿ ನೀಡದೆ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ಆಟೋ ಚಾಲಕರ ಆರೋಪ,

ಈಗಾಗಲೇ ಜಿಲ್ಲಾಡಳಿತ ಮತ್ತು ಆಹಾರ ಇಲಾಖೆಗೆ ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಗ್ಯಾಸ್ ಅಲಭ್ಯತೆಯಿಂದಾಗಿ ದಿನನಿತ್ಯದ ದುಡಿಮೆ ಇಲ್ಲದೆ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಜಿಲ್ಲಾಡಳಿತದ ಈ ಮೌನಕ್ಕೆ ಆಟೋ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸೋಮವಾರದ ಒಳಗೆ ಗ್ಯಾಸ್ ಪೂರೈಕೆಯಾಗದಿದ್ದರೆ ಮುಷ್ಕರ ನಡೆಸುತ್ತೇವೆ ಎಂದು ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ ಈ ಬಗ್ಗೆ ನಮ್ಮ ಚಿಕ್ಕಮಗಳೂರು ಪ್ರತಿನಿಧಿ ಡ್ಯಾನಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

Auto LPG gas chaos in Chikmagalur city

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರ ಅಭಯಾರಣ್ಯದ ಬಳಿ ಕಾನೂನು ಬಾಹಿರ ರೆಸಾರ್ಟ್ ನಿರ್ಮಾಣ ?

ಚಿಕ್ಕಮಗಳೂರು: “ಪ್ರಾಣಿಗಳ ಮೇಲೆ ದಯೆ” ಇರಲಿ”ಕಾಡು ಮಾತ್ರ ನಾಶ”ವಾಗಲಿ”ಹಣ ಮಾತ್ರ ಝಣ,ಝಣ “ನಮಗೆ ಬರಲಿ ಎಂಬುದು ಅರಣ್ಯ ಇಲಾಖೆಯ ಘೋಷ ವಾಕ್ಯವಾದರೆ ಒಳ್ಳೆಯದು ಎಂಬುದಕ್ಕೆ ಇಂಬು ಕೊಡುತ್ತದೆ ಆಕ್ರಮವಾಗಿ ರೆಸಾರ್ಟ್ ನಿರ್ಮಾಣವಾಗುತ್ತಿರುವುದು...

ರಾಷ್ಟ್ರ ಮೊದಲೆಂಬ ಧ್ಯೇಯದೊಂದಿಗೆ ಭಾಜಪ ಕೆಲಸ

ಚಿಕ್ಕಮಗಳೂರು: ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷ ಭಾಜಪ. ರಾಷ್ಟ್ರೀಯ ಹಿತಚಿಂತನೆ ಹಾಗೂ ದೇಶಸೇವೆಯೇ, ಜನಾರ್ಧನ ಸೇವೆ ಎಂಬ ನಂಬಿಕೆ ಮತ್ತು ವಿಶ್ವಾಸದಡಿ ಸಾಗುತ್ತಿದೆ ಎಂದು ವಿಧಾನ...

Related Articles

ಮೂಡಿಗೆರೆ ಚುನಾವಣಾ ಶಾಖೆಯಲ್ಲಿ ಸಿಬ್ಬಂದಿ ಕೊರತೆ

ಮೂಡಿಗೆರೆ: ಜಿಲ್ಲೆಯ ಮೂಡಿಗೆರೆ ಸೇರಿದಂತೆ ಹಲವು ತಾಲೂಕು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚುನಾವಣಾ ಶಾಖೆಗಳು ಸಿಬ್ಬಂದಿಗಳ...

ಕಂದಾಯ ವಸೂಲಾತಿ ಸಾಧನೆಯಲ್ಲಿ ಜಿಲ್ಲೆಗೆ ರಾಜ್ಯದಲ್ಲಿ 3ನೇ ಸ್ಥಾನ

ಚಿಕ್ಕಮಗಳೂರು: ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಬೇಡಿಕೆಗೆ ಎದುರಾಗಿ ಜಿಲ್ಲೆಯ ಎಲ್ಲ್ಲ ೯...

ಶಾಲೆಗಳ ವಿಲೀನ ವಿರೋಧಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ಪತ್ರಿಭಟನೆ

ಚಿಕ್ಕಮಗಳೂರು: ತಾಲೂಕಿನ ಬೊಂಬೈಲು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಬೇರೊಂದು ಶಾಲೆಗೆ ವಿಲೀನಗೊಳಿಸದಿರಲು ಒತ್ತಾಯಿಸಿ ಎಐಡಿಎಸ್‌ಓ ನೇತೃತ್ವದಲ್ಲಿ...

ಮದುವೆಯಾಗದ ಮಾನಸಿಕವಾಗಿ ನೊಂದ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು: ಮದುವೆ ವಯಸ್ಸಿಗೆ ಬಂದ್ರೂ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಮಗಳೂರು...