Home namma chikmagalur chikamagalur ಹಳೆಯ ಬೈಕ್ ಅಲ್ಲೇ ಬಿಟ್ಟು ಹೊಸ ಬೈಕ್ಕ‌ ಎಗರಿಸಿದ ಕಳ್ಳರು
chikamagalurHomeLatest Newsnamma chikmagalur

ಹಳೆಯ ಬೈಕ್ ಅಲ್ಲೇ ಬಿಟ್ಟು ಹೊಸ ಬೈಕ್ಕ‌ ಎಗರಿಸಿದ ಕಳ್ಳರು

Share
Share

ಚಿಕ್ಕಮಗಳೂರು:  ಸಾಮಾನ್ಯವಾಗಿ ಕಳ್ಳರು ಬೈಕ್ ಕಳ್ಳತನ ಮಾಡಿದರೆ ಸಾಕು ಎಂದು ಓಡಿಹೋಗುತ್ತಾರೆ. ಆದರೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಿಲಾಡಿ ಕಳ್ಳರು ಒಂದು ಹೆಜ್ಜೆ ಮುಂದೆ ಹೋಗಿ ವಿಭಿನ್ನವಾಗಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದಾರೆ.

ಬೈಕ್ ಕಳೆದುಕೊಂಡ ಮಾಲೀಕರು ಅಯ್ಯೋ ಬೈಕ್ ಹೋಯ್ತಲ್ಲಾ ಎಂದು ಅತಿಯಾಗಿ ಬೇಜಾರು ಮಾಡಿಕೊಳ್ಳಬಾರದು ಎಂಬ ‘ಉದಾರ ಮನಸ್ಸಿನಿಂದ’ ತಾವೇ ಒಂದು ಹಳೆಯ ಬೈಕನ್ನು ಅಲ್ಲೇ ಬಿಟ್ಟು, ಮಾಲೀಕರ ಹೊಸ ಬೈಕನ್ನು ಎಗರಿಸಿದ್ದಾರೆ!

ನಗರದ ಉಪ್ಪಳ್ಳಿ ನಿವಾಸಿಯಾದ ಇಸ್ಮಾಯಿಲ್ ಎಂಬುವವರು ಈ ‘ಎಕ್ಸ್‌ಚೇಂಜ್ ಆಫರ್’ ಕಳ್ಳತನಕ್ಕೆ ಬಲಿಯಾದ ವ್ಯಕ್ತಿ. ಇಸ್ಮಾಯಿಲ್ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯಿಂದಲೇ ಅವರಿಗೆ ಒಂದು ಉತ್ತಮ ಸ್ಥಿತಿಯ ಬೈಕನ್ನು ನೀಡಲಾಗಿತ್ತು.

ಪ್ರತಿದಿನದಂತೆ ಇಸ್ಮಾಯಿಲ್ ಅವರು ಕೆಲಸ ಮುಗಿಸಿ ರಾತ್ರಿ ತಮ್ಮ ಮನೆಯ ಮುಂದೆ ಬೈಕನ್ನು ಸುರಕ್ಷಿತವಾಗಿ ನಿಲ್ಲಿಸಿದ್ದರು. ಆದರೆ ತಡರಾತ್ರಿ ಬಂದ ಕಳ್ಳರು ಅಲ್ಲಿ ಸಿನಿಮೀಯ ಶೈಲಿಯಲ್ಲಿ ಕೈಚಳಕ ತೋರಿಸಿದ್ದಾರೆ.

ಈ ಖದೀಮರು ತಾವು ಬಂದಿದ್ದ ಅತ್ಯಂತ ಹಳೆಯ ಮತ್ತು ಶೇಷಾವಸ್ಥೆಯಲ್ಲಿದ್ದ ಬೈಕನ್ನು ಇಸ್ಮಾಯಿಲ್ ಅವರ ಮನೆಯ ಮುಂದೆಯೇ ಬಿಟ್ಟಿದ್ದಾರೆ. ಬದಲಾಗಿ ಇಸ್ಮಾಯಿಲ್ ಅವರ ಕಂಪನಿಯ ಹೊಸ ಬೈಕನ್ನು ಹಾರಿಸಿಕೊಂಡು ಹೋಗಿದ್ದಾರೆ.

ಕಳ್ಳರ ಈ ವಿಚಿತ್ರ ತಂತ್ರ ಕಂಡು ಜನರಲ್ಲಿ ಕುತೂಹಲ ಮೂಡಿಸಿದೆಯಾದರೂ, ಮನೆ ಮುಂದೆ ಬೈಕ್ ನಿಲ್ಲಿಸುವವರಿಗೆ ಆತಂಕ ಶುರುವಾಗಿದೆ. ಬೈಕ್ ಕೊಟ್ಟು ಬೈಕ್ ಪಡೆಯುವ ಈ ‘ಬಾರ್ಟರ್ ಸಿಸ್ಟಮ್’ ಕಳ್ಳತನ ಸದ್ಯ ಚಿಕ್ಕಮಗಳೂರಿನಲ್ಲಿ ಹಾಟ್ ಟಾಪಿಕ್ ಆಗಿದೆ.

ಈ ವಿಚಿತ್ರ ಕಳ್ಳತನದ ದೃಶ್ಯಗಳು ಸಮೀಪದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ವಿಡಿಯೋದಲ್ಲಿ ಕಳ್ಳರು ಯಾವುದೇ ಭಯವಿಲ್ಲದೆ, ಅತ್ಯಂತ ನಿಧಾನವಾಗಿ ಮತ್ತು ಸಮಾಧಾನವಾಗಿ ಪರಿಸ್ಥಿತಿಯನ್ನು ಗಮನಿಸಿ ಈ ಕೃತ್ಯ ಎಸಗಿರುವುದು ಗೋಚರಿಸುತ್ತದೆ. ಬೈಕ್ ಕಳ್ಳರು ಎಷ್ಟು ಸಮಯ ತೆಗೆದುಕೊಂಡು ಈ ಕಾರ್ಯಾಚರಣೆ ಮಾಡಿದ್ದಾರೆ ಎನ್ನುವುದೇ ಆಶ್ಚರ್ಯಕರವಾಗಿದೆ.

ಈ ಘಟನೆ ಕುರಿತು ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಈ ‘ಎಕ್ಸ್‌ಚೇಂಜ್ ಆಫರ್’ ಕೊಟ್ಟು ಪರಾರಿಯಾಗಿರುವ ಖದೀಮರಿಗಾಗಿ ಜಾಲ ಬೀಸಿದ್ದಾರೆ. ಒಟ್ಟಿನಲ್ಲಿ ಕಳ್ಳರ ಈ ಹೊಸ ಐಡಿಯಾ ನೋಡಿ ಪೊಲೀಸರೇ ಬೆರಗಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Thieves left the old bike there and stole the new one

Share

Leave a comment

Leave a Reply

Your email address will not be published. Required fields are marked *

Don't Miss

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, ೮೧ ಸಾವಿರ ರೂ.ಗಳ ದಂಡ...

ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಈ ಹಿಂದೆ ಜೂನ್ 21,...

Related Articles

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಚಿಕ್ಕಮಗಳೂರು: RVR ಹೆಲ್ತ್ ಕೇರ್ ವತಿಯಿಂದ, ಶ್ರೀ ವಿಜಯ್ ಎಂ.ಎನ್. ಶೆಟ್ಟಿ ಹಾಗೂ ಡಾ. (ಪ್ರೊ). ರಾಘವೇಂದ್ರ...

ಧುಮ್ಮಿಕ್ಕಿ ಹರಿಯುತ್ತಿರುವ ಹೆಬ್ಬೆ ಫಾಲ್ಸ್‌

ಚಿಕ್ಕಮಗಳೂರು: ಕಾಫಿನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ತರೀಕೆರೆ (Tarikere) ತಾಲೂಕಿನಲ್ಲಿರುವ ಹೆಬ್ಬೆ...

ಶ್ರೀಈಶ್ವರ-ಚೌಡೇಶ್ವರಿ ದೇವಾಲಯಗಳಲ್ಲಿ ಆಭರಣ ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ ಎಸ್.ಡಿ. ಕೊಪ್ಪಲು ಗ್ರಾಮದ ಶ್ರೀಈಶ್ವರ ಹಾಗೂ ಚೌಡೇಶ್ವರಿ ದೇವಾಲಯಗಳಲ್ಲಿ ದೇವರ...

ತರೀಕೆರೆಯ ಗೋಪಿಕೃಷ್ಣಗೆ ಎಂಎಲ್ ಸಿ ಸ್ಥಾನ ನೀಡಬೇಕು

ಚಿಕ್ಕಮಗಳೂರು: ಅಹಿಂದ ಪರವಾಗಿ ಮಾತಾಡುವ ಕಾಂಗ್ರೆಸ್ ಪಕ್ಷ ಮಡಿವಾಳ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ....